ಭಾರತೀಯ ಯೋಧರಿಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ

| Published : May 10 2025, 01:04 AM IST

ಸಾರಾಂಶ

ನಗರದ ಕಾವೇರಿ ಕ್ಲಿನಿಕ್‌ನಲ್ಲಿ ವಿವಿಧ ದೇಶಭಕ್ತ ಸಂಘಟನೆಗಳಿಂದ ಸಿಂದೂರ ಎಂಬ ವಿನೂತನ ಕಾರ್ಯಕ್ರಮ ನಡೆಯಿತು .

ಕನ್ನಡಪ್ರಭ ವಾರ್ತೆ ಬೇಲೂರು

ನಗರದ ಕಾವೇರಿ ಕ್ಲಿನಿಕ್‌ನಲ್ಲಿ ವಿವಿಧ ದೇಶಭಕ್ತ ಸಂಘಟನೆಗಳಿಂದ ಸಿಂದೂರ ಎಂಬ ವಿನೂತನ ಕಾರ್ಯಕ್ರಮ ನಡೆಯಿತು .

ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಭಾರತೀಯ ಸೈನಿಕರು ನೀಡಿದ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪ್ರಶಂಸಿಸಲಾಯಿತು ಮತ್ತು ಕೇಕ್ ಕತ್ತರಿಸಿ ಹರ್ಷೋದ್ಗಾರ ಮೊಳಗಿಸಿ ಘೋಷಣೆ ಕೂಗಲಾಯಿತು.

ದೇಶಭಕ್ತರ ಬಳಗದ ಅಧ್ಯಕ್ಷ ಡಾ. ಸಂತೋಷ್ ಕುಮಾರ್ ಮಾತನಾಡಿ, ಭಾರತ ಮಾತೆ ಬಂಜೆಯಲ್ಲ, ಭಾರತ ಮಾತೆಯ ಪುಣ್ಯ ಗರ್ಭದಲ್ಲಿ ಅಸಂಖ್ಯಾತ ವೀರ ಯೋಧರು ಹುಟ್ಟಿ ಬಂದಿದ್ದಾರೆ. ನಿರಂತರ ಬರುತ್ತಿದ್ದಾರೆ, ಅವರು ಪಾಕಿಸ್ತಾನದ ಒಳಗೆ 70 ಕಿಲೋ ಮೀಟರ್ ತನಕ ನುಗ್ಗಿ ಉಗ್ರರ ನೆಲೆಗಳನ್ನೇ ನಾಶಪಡಿಸಿ ಭಾರತದ ಪೆಹಲ್ಗಾಮ್‌ನಲ್ಲಿ ಅಮಾನುಷವಾಗಿ ಬರ್ಬರವಾಗಿ ತಮ್ಮ ಪ,ತ್ನಿ ಮಕ್ಕಳ ಮುಂದೆ ಹತ್ಯೆಗೈದ ರಾಕ್ಷಸ ಮನ ಸ್ಥಿತಿಯ ಮತಾಂಧ ಉಗ್ರರಿಗೆ ಅವರ ನೆಲೆಗಳನ್ನೇ ದ್ವಂಸಗೊಳಿಸುವ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ. ನಮ್ಮ ದೇಶದ ಸಹೋದರಿಯರ ಸಿಂದೂರ ಅಳಿಸಿದ ಪಾಪಿಗಳನ್ನು ಯಮನ ಬಂಧುಗಳನ್ನಾಗಿಸುವುದರ ಮೂಲಕ ತಕ್ಕಮಟ್ಟಿಗೆ ನ್ಯಾಯ ಒದಗಿಸಲಾಗಿದೆ. ಈ ಕಾರ್ಯಕ್ರಮದ ಸವಿ ನೆನಪಿಗಾಗಿ ಪ್ರಕಾಶ್ ನೇತೃತ್ವದಲ್ಲಿ ಬೇಲೂರಿನ ಜನಾನುರಾಗಿ ವೈದ್ಯ ಡಾ. ಚಂದ್ರಮೌಳಿ ಅವರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸೇವಾ ಅವಧಿ ಮುಕ್ತಾಯ ಹಂತದಲ್ಲಿದ್ದು ಮತ್ತು ಅವರು ಸಾರ್ವಜನಿಕರಿಗೆ ನೀಡುತ್ತಿರುವ ನಿಸ್ವಾರ್ಥ ಸೇವೆಗಾಗಿ ಹಾಗು ಗಣ್ಯರಾದ ನಾಗರಾಜ್.. (ಗುಂಡಣ್ಣ) ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಉಪ ತಹಸೀಲ್ದಾರ್ ಹುದ್ದೆ ತನಕ ತಲುಪಿ ನಿವೃತ್ತಿ ಹೊಂದಿದವರಾಗಿದ್ದು ಈ ಇಬ್ಬರು ಮಹನೀಯರನ್ನು ದೇಶಭಕ್ತ ಬಳಗದ ವತಿಯಿಂದ ಸನ್ಮಾನಿಸಿದ್ದು ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಪ್ರಿಯ ವೈದ್ಯಾಧಿಕಾರಿ ಡಾಕ್ಟರ್ ಚಂದ್ರಮೌಳಿ ಈ ಸನ್ಮಾನದಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಮತ್ತು ಈ ಸನ್ಮಾನಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಇನ್ನು ಮುಂದೆಯೂ ನನ್ನ ಕರ್ತವ್ಯದ ಜೊತೆಯಲ್ಲಿ ಸಾರ್ವಜನಿಕ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಮತ್ತು ಸಮಾಜ ಸೇವೆಗಾಗಿ ನಿರಂತರವಾಗಿ ಲಯನ್ಸ್ ಕ್ಲಬ್ ಬೇಲೂರಿನ ಓರ್ವ ಸದಸ್ಯನಾಗಿ ಮುಂದುವರಿಯುತ್ತೇನೆ. ಬೇಲೂರು ಲಯನ್ಸ್ ಕ್ಲಬ್ ಈ ವರ್ಷದಲ್ಲಿ ಸ್ವಂತ ಕಟ್ಟಡ ಹೊಂದಿ ತನ್ನದೇ ಭದ್ರ ನೆಲೆಯಲ್ಲಿ ಇನ್ನು ಉತ್ತಮ ರೀತಿಯ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ನಿಟ್ಟಿನಲ್ಲಿ ಮುಂದುವರಿಯುತ್ತದೆ ಎಂದು ತಿಳಿಸಿದರು ‌‌. ನಾಗರಾಜ್ ಗುಂಡಣ್ಣನವರು ಮಾತನಾಡಿದರು. ದೇಶಭಕ್ತ ಬಳಗದ ಪ್ರಕಾಶ್ ಕಸಾಪ ಅಧ್ಯಕ್ಷ ಮಾನ ಮಂಜೇಗೌಡ,ಮಾಜಿ ಅಧ್ಯಕ್ಷ ರಾಜೇಗೌಡ ಉಪನ್ಯಾಸಕ ರಾಯಪುರ ಮಹೇಶ್, ಧರ್ಮ ಪ್ರಕೃತಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಬೇಲೂರು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ರಮೇಶ್ ಬೇಲೂರು ಲಯನ್ಸ್ ಕ್ಲಬ್ ನ ಟ್ರಸ್ಟ್ ಅಧ್ಯಕ್ಷರಾದ ದೊಡ್ಡ ಮನೆ ಪ್ರಭಾಕರ್, ಕಾರ್ಯದರ್ಶಿ ಮುಕ್ತಿಯಾರ್ ಮಹಮ್ಮದ್ ಮಾಜಿ ಅಧ್ಯಕ್ಷ ವೈ ಬಿ ಸುರೇಶ್ , ಕೆ ಎಲ್ ಸುರೇಶ್, ತಾರಾಮಣಿ ಸುರೇಶ್, ಸಂತೋಷ್, ಆದರ್ಶ ವಿಷನ್ ಟೆಸ್ಟ್ಚಕೇರ್ ಮಾಲೀಕ ಆದರ್ಶ್ ಪೂವಯ್ಯ ಸಾಹಿತಿ ಶ್ರೀಧರ್ , ನಾಗರಾಜ್ ಹಾಜರಿದ್ದರು.