ಸಂಭ್ರಮದ ಹಯ್ಯಾಳ ಲಿಂಗೇಶ್ವರ ಜಾತ್ರಾ ಮಹೋತ್ಸವ

| Published : Aug 22 2024, 12:57 AM IST

ಸಾರಾಂಶ

A celebration of Hayyala Lingeshwar jatra Mahotsav

ವಡಗೇರಾ: ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಡೊಳ್ಳು ಕುಣಿತ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ಮಂಗಳವಾರ ನಸುಕಿನ ಜಾವ ಗ್ರಾಮದ ಆಳ ಮೇಲೆ ಹತ್ತಿರ ದೇವಸ್ಥಾನದ ಪೂಜಾರಿ ಅವರು "ದೇವರ ಹಯ್ಯಾಳಿ ಮಾನಭಿಮಾನ ನಿನ್ನದು, ಮುಂಗಾರಿ ಅರ್ಧ, ಹಿಂಗಾರಿ ಗಿರ್ದ ಸಂಪ್ಪನ್ನಾರ್ ದೇಶಕ್ಕೆ ಒಂದು ಸರ್ವ ಮಳೆ " ಇಡು ಏಳು ಕೋಟಿಗಿ ಏಳು ಕೋಟಿಗೆ ಈ ವರ್ಷದ ದೇವರ ಕರಣಿಕೆ ನುಡಿದರು.

ತದನಂತರ ವಾಹಮ ಎಬ್ಬಿಸಿ, ದೇವರುಗಳನ್ನು ಮೂಲ ಗೆದ್ದುಗೆಗೆ ಕೂರಿಸಲಾಯಿತು. ಜಾತ್ರೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತು ಕಂದಾಯ ಹಾಗೂ ಪೊಲೀಸ್ ಇಲಾಖೆಯವರು ಹೆಚ್ಚಿನ ಕಾಳಜಿ ವಹಿಸಿ, ಜಾತ್ರೆಯನ್ನು ಅಚ್ಚುಕಟ್ಟಾಗಿ ನೇರವೇರಿಸಿಕೊಟ್ಟರು. ಜಾತ್ರೆಯಲ್ಲಿ ಗ್ರಾಮಸ್ಥರು, ಜಿಲ್ಲೆ ಹಾಗೂ ನೆರೆಯ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

-

21ವೈಡಿಆರ್3: ಸಗರನಾಡಿನ ಆರಾಧ್ಯದೈವ ವಡಗೇರಾ ತಾಲೂಕಿನ ಹಯ್ಯಾಳ ಬಿ. ಗ್ರಾಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಿತು.