ಸಂಭ್ರಮದ ರಾಘವೇಂದ್ರ ಸ್ವಾಮಿ ಪಟ್ಟಾಭಿಷೇಕ ಮಹೋತ್ಸವ

| Published : Mar 14 2024, 02:01 AM IST

ಸಂಭ್ರಮದ ರಾಘವೇಂದ್ರ ಸ್ವಾಮಿ ಪಟ್ಟಾಭಿಷೇಕ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ: ಪಟ್ಟಣದ ವಿಪ್ರ ಸಮಾಜದ ವತಿಯಿಂದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ೪೦೩ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗೆ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ರ, ಪಲ್ಲಕ್ಕಿ ಸೇವೆ, ಅಲಂಕಾರ, ತೀರ್ಥ ಪ್ರಸಾದ, ಪ್ರವಚನ, ರಥೋತ್ಸವ, ಮಹಾಮಂಗಳಾರತಿ ಜರುಗಿತು. ಪಟ್ಟಾಭೀಷೇಕ ಕಾರ್ಯಕ್ರಮದ ಎಲ್ಲ ಸಹಕಾರವನ್ನು ದಿ. ಕೃಷ್ಣಾಜಿ ದೇಶಪಾಂಡೆ ಇವರ ಸುಪುತ್ರ ಗೋವಿಂದ ದೇಶಪಾಂಡೆ ಹಾಗೂ ಕುಟುಂಬಸ್ಥರು ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ವಿಪ್ರ ಸಮಾಜದ ವತಿಯಿಂದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ೪೦೩ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗೆ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ರ, ಪಲ್ಲಕ್ಕಿ ಸೇವೆ, ಅಲಂಕಾರ, ತೀರ್ಥ ಪ್ರಸಾದ, ಪ್ರವಚನ, ರಥೋತ್ಸವ, ಮಹಾಮಂಗಳಾರತಿ ಜರುಗಿತು. ಪಟ್ಟಾಭೀಷೇಕ ಕಾರ್ಯಕ್ರಮದ ಎಲ್ಲ ಸಹಕಾರವನ್ನು ದಿ. ಕೃಷ್ಣಾಜಿ ದೇಶಪಾಂಡೆ ಇವರ ಸುಪುತ್ರ ಗೋವಿಂದ ದೇಶಪಾಂಡೆ ಹಾಗೂ ಕುಟುಂಬಸ್ಥರು ವಹಿಸಿದ್ದರು.ಅಥಣಿಯ ಪ್ರವಚನಕಾರರಾಗಿ ಬಿಂದುಮಾಧವಚಾರ್ಯ ಜೋಶಿ ಮಾತನಾಡಿ, ಜನರ ಕಷ್ಟಗಳ ನಿವಾರಣೆಗೆ ಮತ್ತು ಲೋಕೋದ್ದಾರಕ್ಕಾಗಿ ಅವತರಿಸಿದವರೇ ಶ್ರೀ ರಾಘವೇಂದ್ರ ಸ್ವಾಮಿಗಳು. ಇವರು ಹಿಂದೆ ಇದ್ದರೂ, ಇಂದು ಇದ್ದಾರೆ, ಮುಂದೆಯೂ ಇರುತ್ತಾರೆ. ನಂಬಿದ ಭಕ್ತರನ್ನು ರಾಯರು ಎಂದು ಕೈ ಬಿಡುವುದಿಲ್ಲ. ಹಾಗೆ ದೃಢ ಭಕ್ತಿಯಿಂದ ಯಾರು ಸ್ಮರಿಸುತ್ತಾರೋ ಅಂತಹವರ ಜೀವನದಲ್ಲಿ ರಾಯರು ಪವಾಡಗಳನ್ನು ಸೃಷ್ಠಿಸುತ್ತಾರೆ ಎಂದರು. ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ವಸಂತರಾವ್ ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ, ವಿಪ್ರ ಸಮಾಜದ ಮುಖಂಡ ಬಿ.ಎಲ್.ಬಬಲಾದಿ, ಭೀಮಾಚಾರ್ಯ ಜೋಶಿ, ಗೋವಿಂದ ದೇಶಪಾಂಡೆ, ಕೆ.ವಿ.ಕುಲಕರ್ಣಿ, ಆರ್‌.ವಿ.ಕುಲಕರ್ಣಿ, ಪ್ರಸಾದ ಸೋಮಾಪುರ, ಅರ್ಚಕ ಆನಂದಚಾರ್ಯ ಜಂಬಗಿ, ಅಶೋಕ ಮುತಾಲಿಕ, ಗೋವಿಂದ ಕುಲಕರ್ಣಿ, ಪ್ರಭಾಕರ ಮುಷ್ಠಿಗೇರಿ, ಸಂತೋಷ ದೇಶಪಾಂಡೆ, ಗಿರೀಶ ಚಿನಗುಂಡಿ, ಸುಶೀಲೇಂದ್ರ ದೇಶಪಾಂಡೆ, ಪ್ರವೀಣ ಸೋಮಾಪುರ, ಅಪ್ಪಾರಾವ್ ದೇಶಪಾಂಡೆ, ಸಂತೋಷ ಕುಲಕರ್ಣಿ, ಆಣ್ಣಾರಾವ್‌ ದೇಶಪಾಂಡೆ, ರಾಹುಲ ಗೂಡುರ, ಅನಿರುದ್ಧ ಜೋಶಿ, ರಾಘವೇಂದ್ರ ಸೇವಾ ಸಮಿತಿ, ಗುರು ಸಾರ್ವಭೌಮ ಯುವಕ ಮಂಡಳ ಹಾಗೂ ಗಾಯತ್ರಿ ಭಜನಾ ಮಂಡಳದ ಸರ್ವ ಸದಸ್ಯರು ಇದ್ದರು.