ಸಾರಾಂಶ
ರಬಕವಿ-ಬನಹಟ್ಟಿ: ಬನಹಟ್ಟಿ ನಗರದಲ್ಲಿ ಭಾನುವಾರ ಮಲ್ಲಯ್ಯ ದೇವರ ಕಂಬಿಗಳನ್ನು ಕರೆದುಕೊಳ್ಳುವ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶ್ರೀಶೈಲಕ್ಕೆ ಹೋದ ಕಂಬಿಗಳನ್ನು ಬೆಳಗ್ಗೆ ಮೆರವಣಿಗೆಯ ಮೂಲಕ ಬನಹಟ್ಟಿಯ ಮಲ್ಲಿಕಾರ್ಜುನ ಚಿತ್ರ ಮಂದಿರದ ಹತ್ತಿರದ ಅರಳಿಗಿಡದ ಕಟ್ಟೆಯ ಮೇಲೆ ತಂದು ಪ್ರತಿಷ್ಠಾಪಿಸಲಾಯಿತು. ನಂತರ ಬೆಳಗ್ಗೆ ೧೦ಕ್ಕೆ ಊರಿನ ಮತ್ತು ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕೂಡಿಕೊಂಡು ಸಾಮೂಹಿಕವಾಗಿ ಮಂಗಳಾರುತಿ ಮಾಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿ ನಗರದಲ್ಲಿ ಭಾನುವಾರ ಮಲ್ಲಯ್ಯ ದೇವರ ಕಂಬಿಗಳನ್ನು ಕರೆದುಕೊಳ್ಳುವ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಶ್ರೀಶೈಲಕ್ಕೆ ಹೋದ ಕಂಬಿಗಳನ್ನು ಬೆಳಗ್ಗೆ ಮೆರವಣಿಗೆಯ ಮೂಲಕ ಬನಹಟ್ಟಿಯ ಮಲ್ಲಿಕಾರ್ಜುನ ಚಿತ್ರ ಮಂದಿರದ ಹತ್ತಿರದ ಅರಳಿಗಿಡದ ಕಟ್ಟೆಯ ಮೇಲೆ ತಂದು ಪ್ರತಿಷ್ಠಾಪಿಸಲಾಯಿತು. ನಂತರ ಬೆಳಗ್ಗೆ ೧೦ಕ್ಕೆ ಊರಿನ ಮತ್ತು ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕೂಡಿಕೊಂಡು ಸಾಮೂಹಿಕವಾಗಿ ಮಂಗಳಾರುತಿ ಮಾಡಿದರು. ನಂತರ ಮಹಿಳೆಯರು ಕಂಬಿಗಳಿಗೆ ಆರತಿ ಮಾಡಿ ನೈವೇದ್ಯ ಸಲ್ಲಿಸಿದರು.
ಈ ಕಾರ್ಯಕ್ರಮಕ್ಕೆ ಗಂಡು ಮಕ್ಕಳು ದೀವಟಿಗೆಗಳನ್ನು ಮತ್ತು ಹೆಣ್ಣು ಮಕ್ಕಳು ಆರತಿಯನ್ನು ತೆಗೆದುಕೊಂಡು ಬರುವುದು ವಿಶೇಷವಾಗಿದೆ.ಈ ಸಂದರ್ಭದಲ್ಲಿ ದೇವರಿಗೆ ಹಸಿ ಕಡಲೆ, ಶ್ಯಾವಿಗೆ ಮತ್ತು ಬೆಲ್ಲದ ನೈವೇದ್ಯ ಅರ್ಪಿಸಲಾಯಿತು. ನಂತರ ಹೆಣ್ಣು ಮಕ್ಕಳು ನಗರದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ಅಲ್ಲಿ ನೈವೇದ್ಯ ಸಲ್ಲಿಸಿದರು.
ಈ ವೇಳೆ ಮಹಾಂತಯ್ಯ ಹಿರೇಮಠ, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ತುಂಗಳ, ಮಹಾಶಾಂತ ಶೆಟ್ಟರ, ಮಲ್ಲಿಕಾರ್ಜುನ ಬಾವಲತ್ತಿ, ಕಿರಣ ಆಳಗಿ, ವಿವೇಕ ಕೊಳಕಿ, ಮಲ್ಲು ಬುಟ್ಟನವರ, ಚೆನ್ನಪ್ಪ ಗುಣಕಿ, ಶಿವಕುಮಾರ ಬಾಗೇವಾಡಿ, ಶಿವಕುಮಾರ ಗಣೇಶನವರ, ರಾಜು ಲುಕ್ಕ, ರಾಜು ಕುಲಕರ್ಣಿ, ರಾಚಯ್ಯ ಮಠಪತಿ, ಚನಬಸಯ್ಯ ಮಠಪತಿ, ಕಲ್ಲಯ್ಯ ಮಠಪತಿ, ರೇವಪ್ಪ ಗುಣಕಿ, ಶಿವು ಗುಂಡಿ, ಸಂಜಯ ಕೊಂತಿ, ಬಸವರಾಜ ಅಮಟಿ, ಸಂಜಯ ಕಕಮರಿ, ಗಂಗಾಧರ ಪಿರಂಗಿ, ಮಲ್ಲಪ್ಪ ಹೂಲಿ, ರವಿ ಕರಲಟ್ಟಿ, ಮಹಾದೇವ ಶಿರಹಟ್ಟಿ, ಈರಣ್ಣ ಜಿಗಜಿನ್ನಿ, ಪಂಡಿತ ಪಟ್ಟಣ ಸೇರಿದಂತೆ ಅನೇಕರು ಇದ್ದರು.