ಪಟಾಕಿಯಿಂದ ಹೊತ್ತಿ ಉರಿದ ತೆಂಗಿನ ಮರ

| Published : Oct 31 2024, 12:50 AM IST

ಸಾರಾಂಶ

ವ್ಯಕ್ತಿಯೊಬ್ಬರು ಪಟಾಕಿಗೆ ಬೆಂಕಿ ಹಚ್ಚಿ ಬಿಸಾಡುವ ವೇಳೆ ತೆಂಗಿನ ಮರದ ತುದಿಯಲ್ಲಿ ಸಿಲುಕಿಕೊಂಡು ಮರವು ಹೊತ್ತಿ ಉರಿಯಲಾರಂಭಿಸಿದ ಘಟನೆ ಬೇಲೂರು ತಾಲೂಕಿನಲ್ಲಿ ಸಂಭವಿಸಿದೆ. ತಾಲೂಕಿನ ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ತಂದಿದ್ದ ಪಟಾಕಿಯೊಂದಕ್ಕೆ ಬೆಂಕಿ ಹಚ್ಚಿ ಬಿಸಾಡುವ ವೇಳೆ ಮನೆಯ ಮುಂಭಾಗದಲ್ಲಿದ್ದ ತೆಂಗಿನಮರಕ್ಕೆ ಕಿಡಿ ತಗುಲಿದೆ.

ಬೇಲೂರು: ವ್ಯಕ್ತಿಯೊಬ್ಬರು ಪಟಾಕಿಗೆ ಬೆಂಕಿ ಹಚ್ಚಿ ಬಿಸಾಡುವ ವೇಳೆ ತೆಂಗಿನ ಮರದ ತುದಿಯಲ್ಲಿ ಸಿಲುಕಿಕೊಂಡು ಮರವು ಹೊತ್ತಿ ಉರಿಯಲಾರಂಭಿಸಿದ ಘಟನೆ ಬೇಲೂರು ತಾಲೂಕಿನಲ್ಲಿ ಸಂಭವಿಸಿದೆ. ತಾಲೂಕಿನ ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ತಂದಿದ್ದ ಪಟಾಕಿಯೊಂದಕ್ಕೆ ಬೆಂಕಿ ಹಚ್ಚಿ ಬಿಸಾಡುವ ವೇಳೆ ಮನೆಯ ಮುಂಭಾಗದಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದ ತುದಿಯ ಗರಿಗಳ ನಡುವೆ ಸಿಲುಕಿಕೊಂಡು ಪಟಾಕಿಯು ಸಿಡಿದು ಸಣ್ಣ ಕಿಡಿಯಿಂದ ಕ್ಷಣಾರ್ದದಲ್ಲಿ ಬೆಂಕಿಯು ಕಲ್ಪವೃಕ್ಷದ ಗರಿಗಳ ಸುತ್ತಲೂ ವ್ಯಾಪಿಸತೊಡಗಿತು. ಅದೃಷ್ಟವಶಾತ್ ಹತ್ತಿರದಲ್ಲಿಯೇ ಇದ್ದ ಬೋರ್‌ವೆಲ್ ಪಂಪ್ ಮೂಲಕ ಪಕ್ಕದಲ್ಲಿದ್ದ ಮರವನ್ನೇರಿ ನೀರನ್ನು ಸಿಂಪಡಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಲಾಗಿದೆ.