ಸಾರಾಂಶ
A collection of negative stories, an attempt to correct the society
-ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರ ನಿರಾಕಾರಿ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಜಯಣ್ಣ ಅಭಿಪ್ರಾಯ
------ಕನ್ನಡಪ್ರಭ ವಾರ್ತೆ ರಾಯಚೂರು
ಸಮಾಜದ ಸಮಸ್ಯೆ, ನೋವುಗಳನ್ನು ಕಥಾ ವಸ್ತುವನ್ನಾಗಿಸಿಕೊಂಡಿರುವ ನಿರಾಕಾರಿ ಕಥಾ ಸಂಕಲನ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನವನ್ನು ಲೇಖಕ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳ ಸಹಯೋಗದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರ ನಿರಾಕಾರಿ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಕೃತಿಯು ಬರಹ ಜಾತಿ ವ್ಯವಸ್ಥೆ ಮತ್ತು ಈಗಿನ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತದೆ. ಸಮಾಜ ನಮ್ಮನ್ನು ಯಾವ ರೀತಿ ನೋಡುತ್ತದೆ. ಅದನ್ನು ಆತಂಕ್ಕೊಳಗಪಡಿಸುತ್ತದೆ ಎಂಬುವುದನ್ನು ಅವರ ಬರಹ ಸಂವೇದನಾಶೀಲತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕೃತಿ ಪರಿಚಯ ಮಾಡಿದ ಸಾಹಿತಿ ವೀರಹನುಮಾನ, ನಿರಾಕಾರಿ ಕಥಾ ಸಂಕಲನದಲ್ಲಿ ಒಟ್ಟು 42 ಸಣ್ಣ ಕಥೆಗಳಿವೆ. ಎಲ್ಲ ಕಥೆಗಳು ವಿಭಿನ್ನವಾದ ವಸ್ತು ವಿಷಯಗಳನ್ನೊಳಗೊಂಡವೆ ಎಂದರು.ಸಾಹಿತಿ ಮಹಾಂತೇಶ ಮಸ್ಕಿ, ಕೃತಿಯ ಕರ್ತೃ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಶಿಕ್ಷಣಾಧಿಕಾರಿ ಆರ್.ಇಂದಿರಾ, ಸಾಹಿತಿಗಳಾದ ಆಂಜನೇಯ ಜಾಲಿಬೆಂಚಿ, ಹನುಮಂತಪ್ಪ ಗವಾಯಿ, ರಮೇಶ ಯಾಳಗಿ, ಕಸಾಪ ಪದಾಧಿಕಾರಿಗಳು, ಸದಸ್ಯರು, ಸಾಹಿತ್ಯಾಸಕ್ತರು ಇದ್ದರು.--------------------
29ಕೆಪಿಆರ್‌ಸಿಆರ್ 01: ರಾಯಚೂರು ನಗರದ ಕನ್ನಡ ಭವನದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರ ನಿರಾಕಾರಿ ಕಥಾ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು.