ಸಾರಾಂಶ
ಸುಂಟಿಕೊಪ್ಪದಲ್ಲಿ ಕುಕ್ಕುಟ ಪ್ರಿಯರಿಗೆ ಮಾರಾಟಗಾರರು ಈರುಳ್ಳಿ ಮತ್ತು ಮೊಟ್ಟೆಗಳನ್ನು ಕಳೆದ ಎರಡು ವಾರಗಳಿಂದ ಫ್ರಿ ಆಫರ್ ಆಗಿ ನೀಡುತ್ತಿದ್ದಾರೆ. ಆಫರ್ ಗ್ರಾಹಕರನ್ನು ಮುಗಿಬೀಳುವಂತೆ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪದಲ್ಲಿ ಕುಕ್ಕುಟ ಪ್ರಿಯರಿಗೆ ಮಾರಾಟಗಾರರು ಈರುಳ್ಳಿ ಮತ್ತು ಮೊಟ್ಟೆಗಳನ್ನು ಕಳೆದ 2 ವಾರಗಳಿಂದ ಜಿದ್ದಿಗೆ ಬಿದ್ದು ಫ್ರಿ ಆಫರ್ ಆಗಿ ನೀಡುತ್ತಿರುವುದು ಗ್ರಾಹಕರು ಮುಗಿಬೀಳುವಂತೆ ಮಾಡುತ್ತಿದೆ.ಸುಂಟಿಕೊಪ್ಪ ಪಟ್ಟಣದ ಜನತಾ ಕಾಲೋನಿ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಮಳಿಗೆಯಲ್ಲಿ ಕಳೆದ 1 ಕೆ.ಜಿ. ಕುಕ್ಕುಟ ಮಾಂಸ ಖರೀದಿಸಿದರೆ 2 ಮೊಟ್ಟೆಗಳನ್ನು ನೀಡಲಾಗುತ್ತಿತ್ತು. ಹೆದ್ದಾರಿ ಬದಿಯಲ್ಲಿರುವ ಮಳಿಗೆಗಳಲ್ಲಿ 1 ಕೆ.ಜಿ. ಮಾಂಸ ಖರೀದಿಸಿದರೆ ಕುಕ್ಕುಟ ಮಸಾಲೆ ಉಚಿತವಾಗಿ ನೀಡಲಾಗುತ್ತಿತ್ತು.
ಈ ವಾರ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಮಳಿಗೆಯಲ್ಲಿ ಕಳೆದ 1 ಕೆ.ಜಿ. ಕುಕ್ಕುಟ ಮಾಂಸ ಖರೀದಿಸಿದರೆ 1/2 ಕೆ.ಜಿ. ಈರುಳ್ಳಿಯನ್ನು ನೀಡಿದರೆ ಹೆದ್ದಾರಿ ಬದಿಯಲ್ಲಿರುವ ಮಳಿಗೆಗಳಲ್ಲಿ 1 ಕೆ.ಜಿ. ಮಾಂಸ ಖರೀದಿಸಿದರೆ 2 ಮೊಟ್ಟೆಗಳನ್ನು ನೀಡಲಾಗುತ್ತಿತ್ತು. ಇದರಿಂದ ಕುಕ್ಕುಟ ಪ್ರಿಯರು ಮುಗಿಬಿದ್ದು ಫ್ರಿ ಆಫರ್ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.