ಸಾವಿರಾರು ವರ್ಷಗಳಿಂದ ಅವಕಾಶ ವಂಚಿತವಾಗಿದ್ದ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಅವಕಾಶಗಳ ಬಾಗಿಲುಗಳನ್ನು ತೆರೆದರು.ಅವರ ತತ್ವ ಚಿಂತನೆಗಳ ಹಾದಿಯಲ್ಲಿ ವಿದ್ಯಾರ್ಥಿಯುವಜನರು ನಡೆದುದೇಶದ ಹಲವು ಸಮಸ್ಯೆಗಳಿಗೆ ಸಂವಿಧಾನದಚೌಕಟ್ಟಿನಲ್ಲೇ ಪರಿಹಾರಕಂಡು ಹಿಡಿಯಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾನತೆಯ ಆಶಯಗಳಡಿ ಸಂವಿಧಾನ ನೀಡಿದ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾರತಕ್ಕೆ ಬೆಳಕು ನೀಡಿದ ಸೂರ್ಯ. ಅವರು ನೀಡಿದ ಸಂವಿಧಾನದ ಬೆಳಕಿನ ಹಾದಿಯಲ್ಲಿಯೇ ದೇಶ ಮುಂದುವರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯಪಟ್ಟರು.ನಗರದ ಎಂ.ಜಿ.ರಸ್ತೆಯ ಜೈ ಭೀಮ್ ಮೆಮೋರಿಯಲ್ ಹಾಸ್ಟೆಲ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರ 69ನೇ ಪುಣ್ಯಸ್ಮರಣೆಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಶೋಷಿತರಿಗೆ ಅವಕಾಶದ ಬಾಗಿಲುಸಾವಿರಾರು ವರ್ಷಗಳಿಂದ ಅವಕಾಶ ವಂಚಿತವಾಗಿದ್ದ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಅವಕಾಶಗಳ ಬಾಗಿಲುಗಳನ್ನು ತೆರೆದರು.ಅವರ ತತ್ವ ಚಿಂತನೆಗಳ ಹಾದಿಯಲ್ಲಿ ವಿದ್ಯಾರ್ಥಿಯುವಜನರು ನಡೆದುದೇಶದ ಹಲವು ಸಮಸ್ಯೆಗಳಿಗೆ ಸಂವಿಧಾನದಚೌಕಟ್ಟಿನಲ್ಲೇ ಪರಿಹಾರಕಂಡು ಹಿಡಿಯಬೇಕು. ಅಂಬೇಡ್ಕರ್ ಹಾಕಿಕೊಟ್ಟ ಕಾನೂನಿನ ಚೌಕಟ್ಟಿನಲ್ಲೇ ನಡೆಯುವಜೊತೆಗೆ ಸಂವಿಧಾನ, ಕಾನೂನಿಗೆ ಆದ್ಯತೆ ನೀಡಿ ಗೌರವಿಸಬೇಕು ಎಂದು ಸಲಹೆ ಮಾಡಿದರು.
ಅಂಬೇಡ್ಕರ್ ಸಮಾಜಶಾಸ್ತ್ರ, ಕಾನೂನು, ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ಅನೇಕ ವಿಷಯಗಳನ್ನು ಅಧ್ಯಯನ ಮಾಡಿದ್ದರು. ಅವರು ಮುಟ್ಟದ ವಿಷಯವೇ ಇಲ್ಲ. ಆ ಮಟ್ಟಿಗೆ ಅವರು ಅಧ್ಯಯನಶೀಲರಾಗಿದ್ದರು. ಇಡೀ ತಮ್ಮ ಬದುಕಿನಾದ್ಯಂತ ಶೋಷಿತ ಸಮುದಾಯಗಳ ಉದ್ಧಾರಗಕ್ಕಾಗಿ ಹೋರಾಡಿ ಹಗಲಿರುಳು ಶ್ರಮಿಸಿದರು. ಅಂಬೇಡ್ಕರ್ ಅವರ ಶಿಸ್ತು, ಕ್ರಿಯಾಶೀಲತೆ, ಅಧ್ಯಯನಶೀಲತೆ, ಬದ್ಧತೆ, ಪ್ರಾಮಾಣಿಕತೆ ಮತ್ತು ವಿದ್ಯಾರ್ಹತೆಯನ್ನು ಮೀರಿಸಿದವರು ಮತ್ತೊಬ್ಬರಿಲ್ಲ ಎಂದರು.ಅಂಬೇಡ್ಕರ್ ಬದುಕು ಎಲ್ಲರಿಗೂ ಸ್ಫೂರ್ತಿ
ಅಂಬೇಡ್ಕರ್ ವಿಚಾರಧಾರೆಯನ್ನು ವಿದ್ಯಾರ್ಥಿಯುವಜನರು ಆಳವಾಗಿ ಅಧ್ಯಯನ ಮಾಡಿಅವರ ತ್ಯಾಗಮಯ ಬದುಕು, ಹೋರಾಟದಿಂದ ಸ್ಪೂರ್ತಿ ಪಡೆಯಬೇಕು.ಆ ಮೂಲಕ ದೇಶದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಿ ಸದೃಢ ಭಾರತವನ್ನುಕಟ್ಟಲು ಮುಂದಾಗಬೇಕು.ಅಂಬೇಡ್ಕರ್ ರಾಷ್ಟ್ರೀಯ ನಾಯಕ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅವರು ತಮ್ಮ ಬೌದ್ಧಿಕತೆ ಮೂಲಕ ಖ್ಯಾತರಾಗಿದ್ದಾರೆ. ಅವರುದೇಶಕ್ಕೆ ಮತ್ತು ತಳಸಮುದಾಯಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರಎಂದು ಬಣ್ಣಿಸಿದರು.ಪ್ರಧಾನ ಭಾಷಣಕಾರರಾಗಿ ತೊಂಡೆಬಾವಿಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಕನ್ನಡ ಶಿಕ್ಷಕ ಜಗದೀಶ್ ಮುಗಳಿ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೂ ಜಾತೀಯತೆಯ ಅಪಮಾನ, ನೋವು ಸಂಕಟಗಳಿಗೆ ಗುರಿಯಾಗಿದ್ದ ಅಂಬೇಡ್ಕರ್‌ಗೆ ಆ ಅನುಭವಗಳೇ ಉನ್ನತ ಸಾಧನೆ ಮಾಡಲು ಪ್ರೇರಣೆಯಾದವು. ಪ್ರಾಣಿಗಳಿಗಿಂತಲೂ ಕಡೆಯಾಗಿ ಮನುಷ್ಯರನ್ನು ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ದುಡಿಯುವ ವರ್ಗವಾಗಿದ್ದ ಶೋಷಿತ ಸಮುದಾಯಗಳನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಅಹರ್ನಿಶಿ ಶ್ರಮಿಸಿದರು.
ಅಂಬೇಡ್ಕರ್ ತತ್ವಾದರ್ಶ ಪಾಲಿಸಿಅವರ ಆಶಯಗಳನ್ನು ಸಂವಿಧಾನದ ಮೂಲಕವೇ ಈಡೇರಿಸಬೇಕು. ಜಾತೀಯತೆಯನ್ನು ಮನಸ್ಸುಗಳಿಂದ ದೂರ ಮಾಡಿ ಸಮ ಸಮಾಜವನ್ನು ಹಾಗೂ ದೂರದೃಷ್ಟಿಯ ಭಾರತವನ್ನುಕಟ್ಟಬೇಕು. ಇದರಲ್ಲಿ ಯುವಪೀಳಿಗೆ ಹೆಚ್ಚಿನ ಪಾತ್ರ ವಹಿಸಬೇಕು.ಅಂಬೇಡ್ಕರ್ ಜಯಂತಿ ಮತ್ತು ಪುಣ್ಯಸ್ಮರಣೆಯಂತ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಅವರ ತತ್ವಚಿಂತನೆಗಳ ಮೂಲಕ ಪ್ರತಿಯೊಬ್ಬರ ಹೃದಯಕ್ಕೆ ಇಳಿಯಬೇಕು ಎಂದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಲ್ರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಡಿವೈಎಸ್ಪಿ ಎಸ್.ಶಿವಕುಮಾರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಸೀಲ್ದಾರ್ ರಶ್ಮೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ತೇಜಾನಂದರೆಡ್ಡಿ, ಪ್ರವೀಣ್ ಪಾಟೀಲ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕ ವೆಂಕಟೇಶ ರೆಡ್ಡಿ, ದಲಿತ ಮುಖಂಡರಾದ ತಿಪ್ಪೇನಹಳ್ಳಿ ನಾರಾಯಣ, ಜಿಪಂ ಮಾಜಿ ಸದಸ್ಯ ಮೂರ್ತಿ, ವೆಂಕಟ್, ಬಿ.ಎನ್.ಗಂಗಾಧರಪ್ಪ, ಪರಮೇಶ್ ಮತ್ತಿತರರು ಇದ್ದರು.