ದೇಗುಲಗಳಿಗಿಂತ ಹೆಚ್ಚು ಶಾಲೆಗಳಿರುವ ದೇಶ ಪ್ರಗತಿ ಸಾಧಿಸುತ್ತದೆ: ನಟರಾಜ್

| Published : Feb 07 2024, 01:49 AM IST

ದೇಗುಲಗಳಿಗಿಂತ ಹೆಚ್ಚು ಶಾಲೆಗಳಿರುವ ದೇಶ ಪ್ರಗತಿ ಸಾಧಿಸುತ್ತದೆ: ನಟರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ದೇಶದಲ್ಲಿ ದೇವಾಲಯಗಳಿಗಿಂತ ಹೆಚ್ಚು ಶಾಲೆಗಳು ಇರುತ್ತವೆಯೋ ಅಂತ ದೇಶ ಹೆಚ್ಚು ಪ್ರಗತಿಯನ್ನು ಸಾಧಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ. ನಟರಾಜ್ ತಿಳಿಸಿದರು.

ಕೊರಟಗೆರೆ: ಯಾವ ದೇಶದಲ್ಲಿ ದೇವಾಲಯಗಳಿಗಿಂತ ಹೆಚ್ಚು ಶಾಲೆಗಳು ಇರುತ್ತವೆಯೋ ಅಂತ ದೇಶ ಹೆಚ್ಚು ಪ್ರಗತಿಯನ್ನು ಸಾಧಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ. ನಟರಾಜ್ ತಿಳಿಸಿದರು.

ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕ್ರಿಸೆಂಟ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿಯೇ ಭಾರತ 5 ಪ್ರಭಲ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ. ಇದರ ಫಲವಾಗಿಯೇ ಇಂದು ಇಡೀ ವಿಶ್ವದ ಎಲ್ಲಾ ದೇಶದಲ್ಲಿಯೂ ಭಾರತೀಯರು ಇದ್ದಾರೆ. ನಮ್ಮ ದೇಶದಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಇದೇ ರೀತಿ ನಮ್ಮ ದೇಶವು ಇನ್ನೂ ಹೆಚ್ಚಿನ ಶಿಕ್ಷಣ ಕ್ರಾಂತಿಯನ್ನು ಮಾಡಿದಲ್ಲಿ ವಿಶ್ವದಲ್ಲಿಯೇ ಪ್ರಭಲ ರಾಷ್ಟ್ರವಾಗಲಿದೆ ಎಂದು ಹೇಳಿದರು.

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಹ ದೇಶ ಇಲ್ಲಿ ಹಲವು ಧರ್ಮಗಳನ್ನು ಪಾಲಿಸುವಂತಹ ಜನರು ಇದ್ದಾರೆ. ಆದರೆ ಎಲ್ಲರೂ ಪಾಲಿಸುವಂತಹ ಧರ್ಮ ಎಂದರೆ ಅದು ಶಿಕ್ಷಣ, ವಿವಿಧತೆಯಲ್ಲಿ ಏಕತೆಯನ್ನು ನಾವು ಸಾರುತ್ತೇವೆ. ಅದೇ ರೀತಿ ನಮ್ಮಲ್ಲಿನ ಎಲ್ಲರೂ ಧರ್ಮದವರೂ ಒಂದೆಡೆ ಸೇರಿ ಕಲಿಯುವಂತಹದ್ದು ಶಾಲೆ ದೇವಾಲಯಗಳಲ್ಲಿ ಘಂಟೆಗಳ ನಾದಕ್ಕೆ ಕೈಮುಗಿಯುತ್ತೇವೆ. ಆದರೆ ಶಾಲೆಯ ಘಂಟೆನಾದನಕ್ಕೆ ನಾವೆಲ್ಲರೂ ಒಂದೇ ಎಂದು ಶಾಲೆಗೆ ಹೋಗುತ್ತೇವೆ ಎಂದು ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರುದ್ರೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಕಲೀಲ್ ಅಹಮದ್ ಷರೀಫ್, ಪ.ಪಂ ಸದಸ್ಯ ಜಿ. ನಾಗರಾಜು, ಕ್ರಿಸೆಂಟ್ ಶಾಲೆಯ ಕಾರ್ಯದರ್ಶಿ ಇಸ್ಮಾಯಿಲ್ ಅಹಮದ್ ಷರೀಫ್, ಮುಖ್ಯ ಶಿಕ್ಷಕರಾದ ಜಿ. ಕಲೀಂ ಉನ್ನಿಸಾ, ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಪೋಷಕರು ಹಾಗೂ ಮಕ್ಕಳು ಇದ್ದರು.