ಸಾರಾಂಶ
A. Dikshitha first place in district level sports event
-ಮೂರು ಪ್ರಶಸ್ತಿ ಪಡೆದು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿ, ಅಭಿನಂದನೆ
------ಕನ್ನಡಪ್ರಭ ವಾರ್ತೆ ಚಳ್ಳಕೆರೆ: ರೇಣುಕಾಪುರ ಕ್ಲಸ್ಟರ್‌ನ ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಎ.ದೀಕ್ಷಿತ ೧೦೦ ಮೀಟರ್ ಓಟ, ತಟ್ಟೆ ಎಸೆತ, ಗುಂಡು ಎಸೆತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಶಾಲೆಗೂ ಗ್ರಾಮಕ್ಕೂ ಕೀರ್ತಿ ತಂದಿದ್ಧಾಳೆಂದು ಶಾಲೆಯ ಮುಖ್ಯ ಶಿಕ್ಷಕಿ ಬಿ.ಕವಿತಾ ಸಂತಸ ವ್ಯಕ್ತಪಡಿಸಿದರು.
ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಎ.ದೀಕ್ಷಿತಳನ್ನು ಅಭಿನಂದಿಸಿ, ಜಿಲ್ಲೆಯಲ್ಲಿ ಮುಕ್ತಾಯವಾದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎ.ದೀಕ್ಷಿತ ಉತ್ತಮ ಆಟ ಪ್ರದರ್ಶಿಸುವ ಮೂಲಕ ಮೂರು ಪ್ರಶಸ್ತಿಗಳನ್ನು ಪಡೆದು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ಧಾಳೆ. ವಿಶೇಷವಾಗಿ ಶಾಲೆಗೆ ಮೂರು ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಓದಿನ ಜೊತೆಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಜೆ.ರಾಜು, ಟಿ.ಸಿರಿಯಣ್ಣ, ವಿದ್ಯಾರ್ಥಿಯ ತಂದೆ ಡಿ.ಏಸು, ತಾಯಿ ತುಪ್ಪದಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಚನ್ನಮ್ಮ ಮುಂತಾದವರು ಉಪಸ್ಥಿತರಿದ್ದರು.
----ಪೋಟೋ: ೧೫ಸಿಎಲ್‌ಕೆ೨ ವಿಜಯ ಸಾಧಿಸಿದ ವಿದ್ಯಾರ್ಥಿನಿ ಎ.ದೀಕ್ಷಿತ