ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಮಾನವ ಸರಪಳಿ

| Published : Sep 16 2024, 01:51 AM IST

ಸಾರಾಂಶ

ಹಳೇಬೀಡಿನ ವಿಶ್ವವಿಖ್ಯಾತ ಶ್ರೀ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವನ ಸರಪಳಿಯನ್ನು ಏರ್ಪಡಿಸಲಾಗಿತ್ತು. ಕಂದಾಯ ಇಲಾಖೆಯ ಕಲ್ಪತರು ಸಮೂಹ ಮತ್ತು ಶಾರದ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಈ ಹಿಂದೆ ರಾಜನ ಆಳ್ವಿಕೆಯನ್ನು ಏಕ ಚಕ್ರಾಧಿಪತ್ಯವನ್ನು ಒಳಗೊಂಡಿದ್ದ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ಇರಲಿಲ್ಲ. ೧೬ನೇ ಶತಮಾನದ ಅಂತ್ಯದ ಸುಮಾರಿಗೆ ಅರಸರು ತಮ್ಮ ಬಲವನ್ನು ಕಳೆದುಕೊಳ್ಳುತ್ತ ಬಂದಂತೆ ಪ್ರಜಾಪ್ರಭುತ್ವ ಕುರಿತಾದ ಯೋಜನೆಗಳು ರಾಜಕೀಯ ತಂತ್ರಜ್ಞರು, ಜ್ಞಾನಿಗಳು ಮನದಲ್ಲಿ ರೂಪಿಸಿಕೊಳ್ಳಲಾರಂಭಿಸಿತು ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಒಂದು ದೇಶದ ಆಡಳಿತವು ಆ ದೇಶದ ಎಲ್ಲಾ ನಾಗರಿಕರ ಸಮಾನ ಸಹಭಾಗಿತ್ವದೊಂದಿಗೆ ಸಾಗುವುದನ್ನು ನಾವು ಪ್ರಜಾಪ್ರಭುತ್ವ ಎಂದು ಕರೆಯುತ್ತಾರೆ ಎಂದು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಉಮೇಶ್ ತಿಳಿದರು.

ಹಳೇಬೀಡಿನ ವಿಶ್ವವಿಖ್ಯಾತ ಶ್ರೀ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವನ ಸರಪಳಿಯನ್ನು ಏರ್ಪಡಿಸಲಾಗಿತ್ತು. ಕಂದಾಯ ಇಲಾಖೆಯ ಕಲ್ಪತರು ಸಮೂಹ ಮತ್ತು ಶಾರದ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಈ ಹಿಂದೆ ರಾಜನ ಆಳ್ವಿಕೆಯನ್ನು ಏಕ ಚಕ್ರಾಧಿಪತ್ಯವನ್ನು ಒಳಗೊಂಡಿದ್ದ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ಇರಲಿಲ್ಲ. ೧೬ನೇ ಶತಮಾನದ ಅಂತ್ಯದ ಸುಮಾರಿಗೆ ಅರಸರು ತಮ್ಮ ಬಲವನ್ನು ಕಳೆದುಕೊಳ್ಳುತ್ತ ಬಂದಂತೆ ಪ್ರಜಾಪ್ರಭುತ್ವ ಕುರಿತಾದ ಯೋಜನೆಗಳು ರಾಜಕೀಯ ತಂತ್ರಜ್ಞರು, ಜ್ಞಾನಿಗಳು ಮನದಲ್ಲಿ ರೂಪಿಸಿಕೊಳ್ಳಲಾರಂಭಿಸಿತು. ಪ್ರಜಾಪ್ರಭುತ್ವದಲ್ಲಿ ಎರಡು ವಿಧಗಳಿದ್ದು ಒಂದು ನೇರ ಪ್ರಜಾಪ್ರಭುತ್ವವಾದರೆ ಮತ್ತೊಂದು ಪರೋಕ್ಷ ಪ್ರಜಾಪ್ರಭುತ್ವ. ನೇರ ಪ್ರಜಾಪ್ರಭುತ್ವ ಏಕಕಾಲದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವುದು, ಅಭಿಪ್ರಾಯ ಸಂಗ್ರಹಿಸುವುದು ಕಷ್ಟಕರವಾದ್ದರಿಂದ, ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಮನ್ನಣೆ ದೊರೆತು ಜಗತ್ತಿನಾದ್ಯಂತ ಪರೋಕ್ಷ ಪ್ರಜಾಪ್ರಭುತ್ವವೇ ಜಾರಿಯಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಭೋಜೇಂದ್ರಪ್ಪ ಹಾಗೂ ಕಂದಾಯ ನಿರೀಕ್ಷಕ ಲತೇಶ್ ಕುಮಾರ್, ಶಿಕ್ಷಣ ಇಲಾಖೆ ಸಿಆರ್‌ಪಿ ನಾರಾಯಣ, ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಯತೀಶ್, ನಂದಿನಿ, ಕಲ್ಪತರು ಸಮೂಹದ ಮುಖ್ಯ ಶಿಕ್ಷಕ ಶಿವಲಿಂಗೇಗೌಡ ಹಾಗೂ ಲೋಹಿತ್, ಶಿಕ್ಷಕರು, ಮಕ್ಕಳು ಹಾಜರಿದ್ದರು.