ಸಾರಾಂಶ
ಪಂಚವರ್ಣಾತ್ಮಕವಾಗಿ ರಚಿಸಲಾದ ಬೃಹತ್ ಮಂಡಲದಲ್ಲಿ ಆಶ್ಲೇಷ ಬಲಿದಾನ ಸಹಿತವಾದ ತನುತರ್ಪಣ ಮಂಡಲ ಪೂಜೆ ನೆರವೇರಿತು. ಅನುಕ್ರಮಣಿಕೆಯನ್ನು ಸತೀಶ್ ಮರಾಠೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದ ಶ್ರೀ ನಾಗರಾಜ ನಾಗರಾಣಿಯರ ಸನ್ನಿಧಾನದಲ್ಲಿ ವಿಶೇಷವಾದ ನಾಗತನು ತರ್ಪಣಾ ಮಂಡಲ ಸೇವೆ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ವಿಖ್ಯಾತ್ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.ನವಕ ಕಲಶ ಪ್ರಧಾನ ಹೋಮ, ಕಲಾಶಭಿಷೇಕ, ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಪವಮಾನ ಸೂಕ್ತಕಲಶಾಭಿಷೇಕ, ಪ್ರಸನ್ನ ಪೂಜೆಗಳನ್ನು ನೆರವೇರಿಸಲಾಯಿತು. ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ ಪೂಜೆಗೆ ಚಾಲನೆ ನೀಡಿದರು. ಪಂಚವರ್ಣಾತ್ಮಕವಾಗಿ ರಚಿಸಲಾದ ಬೃಹತ್ ಮಂಡಲದಲ್ಲಿ ಆಶ್ಲೇಷ ಬಲಿದಾನ ಸಹಿತವಾದ ತನುತರ್ಪಣ ಮಂಡಲ ಪೂಜೆ ನೆರವೇರಿತು. ಅನುಕ್ರಮಣಿಕೆಯನ್ನು ಸತೀಶ್ ಮರಾಠೆ ನೆರವೇರಿಸಿದರು.
ಉಪೇಂದ್ರ ಮಾರ್ನಾಡು ಆಕರ್ಷಕ ಬೃಹತ್ ಮಂಡಲ ರಚಿಸಿದ್ದರು. ಚೇತನ್ ಭಟ್, ವಿಜೇತ್ ಭಟ್, ಪ್ರಶಾಂತ್ ಭಟ್, ಅನಿಷ್ ಆಚಾರ್ಯ ಸಹಕರಿಸಿದರು. ಸ್ವಸ್ತಿಕ್ ಆಚಾರ್ಯ ರಾತ್ರಿ ಪೂಜೆ ನೆರವೇರಿಸಿದರು.ಕಲ್ಲಂಗಳ ರಾಮಚಂದ್ರ ಕುಂಚಿತಾಯ ಅವರಿಂದ ನಾಗ ದರ್ಶನ ನೆರವೇರಿತು. ನಾಗೇಂದ್ರ ಕುಡುಪು ಮತ್ತು ತಂಡದವರಿಂದ ಉಡುಕಿ ವಾದನ, ಮುರಳೀಧರ ಮುದ್ರಾಡಿ ಮತ್ತು ತಂಡದವರಿದ ನಾಗಸ್ವರ ವಾದನ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.