ಸಾರಾಂಶ
ತಮ್ಮದೇ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ವೈದ್ಯರೊಬ್ಬರು ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ.
ತುಮಕೂರು: ತಮ್ಮದೇ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ವೈದ್ಯರೊಬ್ಬರು ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ. ತುಮಕೂರಿನ ಶೆಟ್ಟಿಗೇಟ್ ಬಳಿಯ ವಿನಾಯಕ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದ ವೈದ್ಯ ಸಂಜಯ್ ನಾಯಕ್ ಎಂಬಾತನೇ ಆರೋಪಿಯಾಗಿದ್ದಾನೆ. ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ವೈದ್ಯ ಡಾ.ಸಂಜಯ್ ನಾಯಕ್ ಎಂಬಾತನನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯಾಗಿರುವ ವೈದ್ಯ ಸಂಜಯ ನಾಯಕ್ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಟಾಸ್ಕ್ ಫೋರ್ಸ್ ನ ಸದಸ್ಯ ಆಗಿದ್ದ ಎನ್ನುವ ವಿಚಾರ ಗೊತ್ತಾಗಿದೆ.