ಸಾರಾಂಶ
ಅಂದು ಸಂಜೆ ೬.೧೫ ಗಂಟೆಗೆ ಸಭಾಕಾರ್ಯಕ್ರಮವನ್ನು ಅನಂತಮೂರ್ತಿ ಹೆಗಡೆ ಚ್ಯಾರಿಟಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಉದ್ಘಾಟಿಸಲಿದ್ದಾರೆ.
ಶಿರಸಿ: ಇಲ್ಲಿನ ಪ್ರಜ್ವಲ್ ಟ್ರಸ್ಟ್ ವತಿಯಿಂದ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಮಂಚಿಕೇರಿ ರಂಗ ಸಮೂಹದವರಿಂದ ಕಾಲಚಕ್ರ ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಜೂ. ೨೨ರಂದು ಸಂಜೆ ೬.೩೦ರಿಂದ ನಗರದ ಟಿಆರ್‌ಸಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ವಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ನಡೆಸಿದ ಕ್ಯಾನ್ಸರ್ ಅರಿವು ಕಾರ್ಯಕ್ರಮಗಳ ಸದುಪಯೋಗ ಪಡೆದವರ ಆಪೇಕ್ಷೆಯ ಮೇರೆಗೆ ಇಂತಹ ಕಾರ್ಯಕ್ರಮಗಳನ್ನು ಇನ್ನು ಮುಂದೆಯೂ ಮಾಡಬೇಕೆನ್ನುವ ಉದ್ದೇಶದಿಂದ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಜೂ ೨೨ರಂದು ಕಾಲಚಕ್ರ ನಾಟಕ ಆಯೋಜಿಸಲಾಗಿದೆ.
ಅಂದು ಸಂಜೆ ೬.೧೫ ಗಂಟೆಗೆ ಸಭಾಕಾರ್ಯಕ್ರಮವನ್ನು ಅನಂತಮೂರ್ತಿ ಹೆಗಡೆ ಚ್ಯಾರಿಟಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಕ್ಯಾನ್ಸರ್ ರೋಗಿಗಳ ಆಪ್ತ ಸಹಾಯಕಿ ಹಾಗೂ ಪತ್ರಕರ್ತೆ ಕೃಷ್ಣಿ ಶಿರೂರು ಉಪಸ್ಥಿತರಿರಲಿದ್ದಾರೆ. ಪ್ರಜ್ವಲ್ ಟ್ರಸ್ಟ್ ನಡೆಸಿಕೊಟ್ಟ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರದ ಪ್ರಯೋಜನ ಪಡೆದು ಗುಣಮುಖರಾಗುತ್ತಿರುವ ಮಮತಾ ಹೆಗಡೆ ಹುಲದೇವನಸರ ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೪೮೨೧೧೧೧೩೧ ಹಾಗೂ ೭೩೩೮೪೯೮೫೨೪ ಸಂಪರ್ಕಿಸಬಹುದು ಎಂದರು.ಮೂಲ ಮರಾಠಿ ಜಯವಂತ ದಳ್ವಿ, ಕನ್ನಡ ಅನುವಾದ ಎಚ್.ಕೆ. ಕರ್ಕೇರಾ, ಹುಲಗಪ್ಪ ಕಟ್ಟೀಮನಿ ನಿರ್ದೇಶನ, ಸಾಲಿಯಾನ್ ಉಮೇಶ ನಾರಾಯಣ ಸಹ ನಿರ್ದೇಶನದಲ್ಲಿ ರಂಗಸಮೂಹದ ಸಂಚಾಲಕ ರಾಮಕೃಷ್ಣ ಭಟ್ಟ ದುಂಡಿ ನೇತೃತ್ವದಲ್ಲಿ ನಾಗರಾಜ ಹೆಗಡೆ ಜಾಲಿಮನೆ, ವಿ.ಎನ್. ಶಾಸ್ತ್ರೀ, ಕಿರಣ ಹೆಗಡೆ ಕಾನಗೋಡ, ಸುಭೋದ ಹೆಗಡೆ, ಪ್ರಕಾಶ ಭಟ್ಟ, ಎಂ.ಕೆ. ಭಟ್ಟ, ವಿಕಾಸ ನಾಯ್ಕ, ಕೃಷ್ಣಮೂರ್ತಿ ಶಾಸ್ತ್ರೀ, ಸಾಗರ ಹೆಗಡೆ, ನಿರ್ಮಲಾ ಗೋಳಿಕೊಪ್ಪ, ಅಮೃತಾ ಪೂಜಾರಿ, ರಕ್ಷಿತಾ ಹೂಗಾರ ಪಾತ್ರ ನಿರ್ವಹಿಸಲಿದ್ದಾರೆ. ಕಿರಣ ಹೆಗಡೆ ಮತ್ತು ಪ್ರಕಾಶ ಭಟ್ಟ ಸಂಗೀತದಲ್ಲಿ ಸಾಥ್ ನೀಡಲಿದ್ದು, ಎಂ.ಕೆ. ಭಟ್ಟ ಮತ್ತು ವಿ.ಎನ್. ಶಾಸ್ತ್ರೀ ಧ್ವನಿ ಮತ್ತು ಬೆಳಕು ವ್ಯವಸ್ಥೆ ಮಾಡಲಿದ್ದಾರೆ. ಪ್ರವೇಶ ಶುಲ್ಕ ₹೧೫೦ ನಿಗದಿಪಡಿಸಲಾಗಿದ್ದು, ಹೋಟೆಲ್ ಸಾಮ್ರಾಟ್‌ನಲ್ಲಿ ಟಿಕೆಟ್ ದೊರೆಯಲಿದೆ.(ಮೊ. ೯೯೦೨೭೧೦೮೫೪) ಎಂದರು.ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಹೆಗಡೆ, ನಯನಾ ಹೆಗಡೆ, ಸುಮಾ ಹೆಗಡೆ, ದತ್ತಾತ್ರೇಯ ಹೆಗಡೆ ಮತ್ತಿತರರು ಇದ್ದರು.;Resize=(128,128))
;Resize=(128,128))