ಮುದ್ದೇಬಿಹಾಳದಲ್ಲಿ ಮಂಕಾದ ಹೋಳಿ ಹಬ್ಬ

| Published : Mar 26 2024, 01:03 AM IST

ಸಾರಾಂಶ

ಮುದ್ದೇಬಿಹಾಳ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮುದ್ದೆಬಿಹಾಳದಲ್ಲಿ ಹೋಳಿ ಹಬ್ಬ ಸ್ವಲ್ಪ ಮಂಕಾದಂತೆ ಕಂಡು ಬಂದಿತು. ಪ್ರತಿವರ್ಷ ಪಟ್ಟಣದಲ್ಲಿ ಎರಡು ದಿನಗಳ ಕಾಲ ಹೋಳಿ ಹಬ್ಬದ ಬಣ್ಣದೋಕುಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಸಂಭ್ರಮವಿದ್ದರೂ ಎಸ್ಸೆಸ್ಸೆಲ್ಸಿ ಮತ್ತು 5,8,9 ನೇ ತರಗತಿಗೆ ಬೋರ್ಡ್‌ ಪರೀಕ್ಷೆಯಿಂದಾಗಿ ಮಕ್ಕಳು ಅಧ್ಯಯನದಲ್ಲಿಯೇ ಬ್ಯುಜಿಯಾಗಿರುವುದು ಕಂಡು ಬಂತು.

ಸೋಮವಾರ ಕೂಡ ಹೋಳಿ ಆಚರಣೆ ನಡೆಯಲಿದ್ದು, ಜೋರಾಗುವ ಸಾಧ್ಯತೆ ಇದೆ. ಭಾನುವಾರ ರಾತ್ರಿಯಿಂದಲೇ ಕೆಲವೆಡೆ ಕಾಮದೇವನನ್ನು ದಹನ ಮಾಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು ನೃತ್ಯ ಮಾಡುವುದು, ಬಣ್ಣ ಎರಚುವುದು ಸಾಮಾನ್ಯವಾಗಿತ್ತು. ಮುಖ್ಯ ಬಜಾರ, ಬಸ್ ನಿಲ್ದಾಣದ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಲಾಗಿತ್ತು. ಸಾರ್ವಜನಿಕರ ಓಡಾಟ ಎಂದಿನಂತೆ ಇತ್ತಾದರೂ, ಮಧ್ಯಾಹ್ನ 12 ಗಂಟೆವರೆಗೂ ಹಬ್ಬದ ಯಾವುದೇ ಸಂಭ್ರಮ ಕಂಡು ಬರಲಿಲ್ಲ. ಆದರೇ ವಿದ್ಯಾನಗರ, ಮಾರುತಿ ನಗರ, ಹುಡ್ಕೋ ಬಡಾವಣೆ, ಗಣೇಶ ನಗರ, ಸರಾಫ್ ಬಜಾರ, ಕಿಲ್ಲಾ ಗಲ್ಲಿ ಕೆಲವು ಪ್ರದೇಶಗಳಲ್ಲಿ ಮಕ್ಕಳು, ಯುವಕರು, ಯುವತಿಯರು, ಚಿಣ್ಣರರು ಪರಸ್ಪರ ಬಣ್ಣ ಎರಚಿ ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದು ಕಂಡು ಬಂದಿತು.