ಸಾರಾಂಶ
ಚನ್ನಗಿರಿ ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ವಚನಾಮೃತ ಬೋಧನೆ ಪ್ರವಚನ ಕಾರ್ಯಕ್ರಮ ಹಾಗೂ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ, ಶ್ರೀ ಹಾಲಸ್ವಾಮೀಜಿ ಸಂಸ್ಮರಣೋತ್ಸವ, ಶ್ರೀ ನೀಲಕಂಠ ಮಹಾಸ್ವಾಮೀಜಿ 40ನೇ ವರ್ಷದ ಸಂಸ್ಮರಣೆ ಮತ್ತು ಶ್ರೀ ಜಯದೇವ ಮಹಾಸ್ವಾಮಿ ಚತುರ್ಥ ಸಂಸ್ಮರಣೋತ್ಸವ, ಶ್ರೀ ಬಸವತತ್ವ ಸಮಾರಂಭವು ಆ.5ರಿಂದ ಸೆ.3ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ಗಂಟೆವರೆಗೆ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಡಾ.ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
- ಇಂದಿನಿಂದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಆಯೋಜನೆ - - - ಕನ್ನಡಪ್ರಭವಾರ್ತೆ, ಚನ್ನಗಿರಿ
ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ವಚನಾಮೃತ ಬೋಧನೆ ಪ್ರವಚನ ಕಾರ್ಯಕ್ರಮ ಹಾಗೂ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ, ಶ್ರೀ ಹಾಲಸ್ವಾಮೀಜಿ ಸಂಸ್ಮರಣೋತ್ಸವ, ಶ್ರೀ ನೀಲಕಂಠ ಮಹಾಸ್ವಾಮೀಜಿ 40ನೇ ವರ್ಷದ ಸಂಸ್ಮರಣೆ ಮತ್ತು ಶ್ರೀ ಜಯದೇವ ಮಹಾಸ್ವಾಮಿ ಚತುರ್ಥ ಸಂಸ್ಮರಣೋತ್ಸವ, ಶ್ರೀ ಬಸವತತ್ವ ಸಮಾರಂಭವು ಆ.5ರಿಂದ ಸೆ.3ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ಗಂಟೆವರೆಗೆ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಡಾ.ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.25 ವರ್ಷಗಳಿಂದ ನಡೆದು ಬಂದ ಪ್ರವಚನ ಕಾರ್ಯಕ್ರಮದ ರಜತ ಮಹೋತ್ಸವ ಇದಾಗಿದೆ. ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಮಹಾಸ್ವಾಮಿಗಳು, ಚನ್ನಗಿರಿ ಹಿರೇಮಠದ ಡಾ.ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ.
ಸಮಾರಂಭದ ನೇತೃತ್ವವನ್ನು ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ.ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಮತ್ತು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಾವಳ್ಳಿಯ ಓಪನ್ ಮೈಡ್ಸ್ ಶಾಲೆ ಟ್ರಸ್ಟಿ ಕಿರಣ್ ಕುಮಾರ್, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಭಾಗವಹಿಸಲಿದ್ದಾರೆ.ವಚನಾಮೃತ ಬೋಧನೆ ಪ್ರವಚನದಲ್ಲಿ ಮಹಾಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿ ಅವರ ವಚನಾಮೃತ ಬೋಧನೆಯನ್ನು ಒಂದು ತಿಂಗಳ ಪರ್ಯಂತ ಡಾ.ಪುಟ್ಟರಾಜ ಗವಾಯಿ ಶಿಷ್ಯ ಮಹಾಂತೇಶ ಶಾಸ್ತ್ರಿ ಅವರು ನಡೆಸಿಕೊಡುವರು.
ಕಾರ್ಯಕ್ರಮಗಳಲ್ಲಿ ಅಕ್ಕಮಹಾದೇವಿ ಸಾಂಸ್ಕೃತಿಕ ಸಂಘ, ಶ್ರೀ ಬಾಲಾಜಿ ಜಾನಪದ ಮಹಿಳಾ ಸಂಘ, ಶ್ರೀ ಶಿವಕೇಶವ ಭಜನಾ ಮಂಡಳಿ, ರಾಜಸ್ಥಾನಿ ಮಾರ್ವಾಡಿ ಮಹಿಳಾ ಭಜನಾ ಮಂಡಳಿ, ಭಾವಸಾರ ಕ್ಷತ್ರಿಯ ಮಹಿಳಾ ಸಂಘದ ಸದಸ್ಯರು ಪ್ರತಿದಿನ ಭಜನೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.- - - -4ಕೆಸಿಎನ್‌ಜಿ2:
ಶ್ರೀ ಬಸವ ಜಯಚಂದ್ರ ಸ್ವಾಮೀಜಿ