ಸಾರಾಂಶ
ಸಮಗ್ರತೆ, ಸಹಾನುಭೂತಿ ಮತ್ತು ಸ್ವಹಿತಾಶಕ್ತಿಯನ್ನು ಮೀರಿದ ದೃಷ್ಟಿಯೊಂದಿಗೆ ಮುನ್ನಡೆಸುವುದು ನಾಯಕರ ಕರ್ತವ್ಯ. ನಿಜವಾದ ನಾಯಕತ್ವವು ಸಕಾರಾತ್ಮಕ ಬದಲಾವಣೆ ಬಯಸುತ್ತದೆ ಎಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಪರಶುರಾಮ ವನಸಿ ಹೇಳಿದರು.
ಲೋಕಾಪುರ: ಸಮಗ್ರತೆ, ಸಹಾನುಭೂತಿ ಮತ್ತು ಸ್ವಹಿತಾಶಕ್ತಿಯನ್ನು ಮೀರಿದ ದೃಷ್ಟಿಯೊಂದಿಗೆ ಮುನ್ನಡೆಸುವುದು ನಾಯಕರ ಕರ್ತವ್ಯ. ನಿಜವಾದ ನಾಯಕತ್ವವು ಸಕಾರಾತ್ಮಕ ಬದಲಾವಣೆ ಬಯಸುತ್ತದೆ ಎಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಪರಶುರಾಮ ವನಸಿ ಹೇಳಿದರು.
ಪಟ್ಟಣದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಮದುರ್ಗ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಲ್.ಎಂ.ಅರಿಬೆಂಚಿ ಮಾತನಾಡಿ, ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಚ್ ಮತ್ತು ಸ್ಲಾಷಗಳನ್ನು ಹಾಕಿ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು, ನಾಯಕರಾಗಿ ಆಯ್ಕೆಯಾದವರು ಶಾಲೆಗೆ ಮಾದರಿಯಾಗಬೇಕು. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಜವಾಬ್ದಾರಿ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಶಿಸ್ತು ಮತ್ತು ನಾಯಕತ್ವದ ಉನ್ನತ ಗುಣಮಟ್ಟವನ್ನು ಎತ್ತಿ ಹಿಡಿಯಬೇಕು. ಡಾ. ಸುಧಾಮೂರ್ತಿಯವರ ವಿದ್ಯಾರ್ಥಿ ಜೀವನದ ಮಹತ್ವಪೂರ್ಣ ಅಂಶಗಳನ್ನು ತಿಳಿಸಿ ನೀವು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಿ.ಜಿ.ಎಚ್.ಎಸ್ ಪ್ರಾಚಾರ್ಯ ಎಸ್.ಬಿ.ಪಾಟೀಲ ಮಾತನಾಡಿದರು. ಎಸ್.ಎಂ.ಹುದ್ದಾರ ಮಾತನಾಡಿದರು. ಎಲ್ಲ ತಂಡಗಳ ಪಥಸಂಚಲನವನ್ನು ಅಡವೇಶ ಕಲ್ಲಿ ಮತ್ತು ಮಹಾಂತೇಶ ಉಳ್ಳಾಗಡ್ಡಿ ನಡೆಸಿಕೊಟ್ಟರು. ನಾಯಕರ ಪಥಸಂಚಲನದ ಮೂಲಕ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಭಾಗ್ಯಾ ನಾಯಕ ಮತ್ತು ಡಿ.ಬಿ.ಸಾಲಿಮಠ ಶಿಕ್ಷಕರು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳ ಕಿರು ಪರಿಚಯ ವಿದ್ಯಾ ಪಟ್ಟಣಶೆಟ್ಟಿ, ಶಾಲನಿ ಸಾರಥ್ಯದ ನೃತ್ಯ ತಂಡವು ಮಹಾಭಾರತಕಥಾ ನಿರೂಪಣೆ ಮಾಡಿದರು. ರೇಖಾ ದೇಸಾಯಿ ವಂದನೆ ಸಲ್ಲಿಸಿದರು.