ಸಾರಾಂಶ
ಬೆಳಗಾವಿಯ ವಾಗ್ವಾಡೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ನಟನ ಹುಟ್ಟುಹಬ್ಬಕ್ಕೆಂದು ಗ್ರಾಮಕ್ಕೆ ಕೊಳವೆಬಾವಿ ಕೊರೆಯಿಸಿ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ. ಈ ಮೂಲಕ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
ಬೆಳಗಾವಿ : ನಟ ಕಿಚ್ಚ ಸುದೀಪ ಜನ್ಮದಿನ ನಿಮಿತ್ತ ಅವರ ಅಭಿಮಾನಿಯೊಬ್ಬರು ಸ್ವಂತ ಹಣದಿಂದ ಕೊಳವೆಬಾವಿ ಕೊರೆಯಿಸಿ ಗ್ರಾಮದ ನೀರಿನ ದಾಹ ನೀಗಿಸುವ ಮೂಲಕ ನೆಚ್ಚಿನ ನಟನಿಗೆ ಹೆಮ್ಮೆ ತರುವ ಕಾರ್ಯ ಮಾಡಿದ್ದಾನೆ.
ಬೆಳಗಾವಿ ತಾಲೂಕಿನ ವಾಗ್ವಾಡೆ ಗ್ರಾಮದ ಆದಿ ನಾಯಕ ಎಂಬ ಯುವಕ ಇಂತಹ ಸಾಮಾಜಿಕ ಕೆಲಸ ಮಾಡಿದ ಅಭಿಮಾನಿ. ಯುವಕ ಆದಿ ಕಿಚ್ಚ ಸುದೀಪ್‌ನ ಅಪ್ಪಟ ಅಭಿಮಾನಿಯಾಗಿದ್ದು, ನೆಚ್ಚಿನ ನಾಯಕನ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿ,. ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಗೆ ಸ್ಪಂದಿಸಲು ಸುದೀಪ್‌ನ ಜನ್ಮದಿನದಂದೇ ಒಂದು ಲಕ್ಷ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿದ್ದು, ಬಳಿಕ ಕೇಕ್ ಕಟ್ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾನೆ.
ನಟನ ಅಭಿಮಾನಿಯ ಈ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದು, ಇದು ವೈರಲ್ ಆಗಿ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಅಭಿಮಾನಿಯ ಈ ಕಾರ್ಯಕ್ಕೆ ನಟ ಸುದೀಪ್ ಅಭಿಮಾನಂದಿ ಹೇಳಿಕೊಂಡಿದ್ದಾರೆ.