ಗೋಣಿಕೊಪ್ಪ: ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

| Published : Oct 06 2024, 01:25 AM IST

ಸಾರಾಂಶ

ಎರಡನೇ ದಿನದ ಸಾಂಸ್ಕೃತಿಕ ಸಂಜೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯಿತು. ನೃತ್ಯ ಸಂಜೆಯ ಕಾರ್ಯಕ್ರಮ ರಂಗು ತುಂಬಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕಾವೇರಿ ದಸರಾ ಸಮಿತಿಯಿಂದ ಇಲ್ಲಿನ ಶ್ರೀ ಕಾವೇರಿ ಕಲಾವೇದಿಕೆಯಲ್ಲಿ ಎರಡನೇ ದಿನದ ಸಾಂಸ್ಕೃತಿಕ ಸಂಜೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸೆಳೆಯಿತು. ನಾಟ್ಯಮಯೂರಿ ನೃತ್ಯಶಾಲೆಯಿಂದ ಭರತನಾಟ್ಯ ಮತ್ತು ಬಸವರಾಜ್ ಬೆಳ್ಳಾರಿ ಅವರಿಂದ ನಡೆದ ನೃತ್ಯ ಸಂಜೆಯ ಕಾರ್ಯಕ್ರಮಕ್ಕೆ ರಂಗು ತುಂಬಿತ್ತು. ಮೈಸೂರಿನ್ ಸುಮಾರಾಜ್‌ಕುಮಾರ್ ಅವರ ಮಾತನಾಡುವ ಗೊಂಬೆ ಮಕ್ಕಳನ್ನು ಸೆಳೆಯಿತು. ಮಂಗಳೂರು ನಂದಗೋಕುಲ ಮತ್ತು ಮೈಸೂರು ಯೂನಿಕ್ ಸಿಜ್ಹಲರ್ಸ್ ಅಕಾಡೆಮಿ ವತಿಯಿಂದ ನೃತ್ಯಗಳು ವೈಭವತೆಯಿಂದ ಕೂಡಿತ್ತು.

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್‌ಗಣಪತಿ ಅಧ್ಯಕ್ಷತೆಯಲ್ಲಿ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಹಿರಿಯ ವೈದ್ಯ ಡಾ. ಶಿವಪ್ಪ, ಡಾ. ಚಂದ್ರಶೇಖರ್, ತಾಲೂಕು ವೈದ್ಯಾಧೀಕಾರಿ ಡಾ. ಯತಿರಾಜ್, ಲೋಪಮುದ್ರಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಮೃತ್‌ನಾಣಯ್ಯ, ಗೋಣಿಕೊಪ್ಪ ಸಮುದಾಯ ಆರೋಗ್ಯ ತಜ್ಞ ಡಾ. ಸುರೇಶ್, ಶ್ರೀ ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷ ನಾಯಂದರ ಶಿವಾಜಿ, ಕೊಡಗು ಜಿಲ್ಲಾ ಕಾಂಗ್ರೆಸ್ ಮಳವಂಡ ಅರವಿಂದ್ ಕುಟ್ಟಪ್ಪ, ಕಾವೇರಿ ದಸರಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕುಪ್ಪಂಡ ಗಣೇಶ್ ತಿಮ್ಮಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಸರಸು, ಹಭಿಬುನ್ನೀಸ, ರಮಾವತಿ ಚಾಲನೆ ನೀಡಿದರು.

ಕಾವೇರಿ ದಸರಾ ಸಮಿತಿಯ ಪ್ರದಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಕೋಶಧಿಕಾರಿ ಚೆಪ್ಪುಡಿರ ದ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ ಮಂಜುಳಾ, ಸಂಸ್ಕ್ರತಿ ಸಮಿತಿ ಸಂಚಾಲಕರುಗಳಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ಅವಿನಾಶ್ ಸಂಯೋಜಕರುಗಳಾದ ಮನೆಯಪಂಡ ಶಿಲಾ ಬೋಪ್ಪಣ್ಣ,ಚಂದನ್ ಕಾಮತ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ, ಗುರುರಾಜ್, ಚಂದನ ಮಂಜುನಾಥ್, ಅಂಕಿತ್ ಪೊನ್ನಪ್ಪ ಇದ್ದರು.ಇಂದಿನ ಕಾರ್ಯಕ್ರಮ

6ರಂದು ಗ್ರಾಪಂ ಉಪಾಧ್ಯಕ್ಷ ಮಂಜುಳಾ ಎಂ ಅಧ್ಯಕ್ಷತೆಯಲ್ಲಿ ಮಹಿಳಾ ದಸರಾ ನಡೆಯಲಿದೆ. ಬೆಳಗ್ಗೆಕಾವೇರಿ ಕಾಲಾ ವೇದಿಕೆಯಲ್ಲಿ ನೃತ್ಯ, ಹಾಡುಗಾರಿಕೆ, ಫ್ಯಾಷನ್ ಶೋ, ನಡೆಯಲಿದೆ.ದಸರಾ ಮೈದಾನದಲ್ಲಿ ಕ್ರೀಡೆಗಳು ನಡೆಯಲಿವೆ. ಸಂಜೆ ತಿತಿಮತಿ ಯಾಹವಿ ಡ್ಯಾನ್ಸ್ ಮತ್ತು ಕಾವೇರಿ ಅಯ್ಯಪ್ಪ ತಂಡದಿಂದ ನೃತ್ಯ ಹಾಗು ಸಂಗೀತ ಕಾರ್ಯಕ್ರಮ, ಬೆಂಗಳೂರಿನ ಸೀಮ್ ಇವೆಂಟ್ಸ್ ಅವರಿಂದ ಆಫ್ರಿಕನ್ ಡ್ರಂ ಶೋ, ರೋಬೊ ಡ್ಯಾನ್ಸ್ ಮತ್ತು ಸಂಗೀತ ಕಾರ್ಯಕ್ರಮ.