ಸಾರಾಂಶ
ಬಾಗಲಕೋಟೆ ತಾಲೂಕಿನ ಬೆನಕಟ್ಟಿ-ಶಿರೂರ ಮಧ್ಯದಲ್ಲಿರುವ ಮೆಲ್ಬ್ರೋ ಸಕ್ಕರೆ ಕಾರ್ಖಾನೆಗೆ ಚೆನ್ನೈನ ದಕ್ಷಿಣ ಭಾರತ ಕಬ್ಬು ಹಾಗೂ ಸಕ್ಕರೆ ತಂತ್ರಜ್ಞರ ಒಕ್ಕೂಟ ನೀಡುವ ಉತ್ತಮ ಗುಣಮಟ್ಟದ ಕಬ್ಬು ಅಭಿವೃದ್ಧಿ (ದಿ ಬೆಸ್ಟ್ ಕೇನ್ ಡೆವಲ್ಪಮೆಂಟ್) ಪ್ರಶಸ್ತಿ ಲಭಿಸಿದೆ.
ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಬೆನಕಟ್ಟಿ-ಶಿರೂರ ಮಧ್ಯದಲ್ಲಿರುವ ಮೆಲ್ಬ್ರೋ ಸಕ್ಕರೆ ಕಾರ್ಖಾನೆಗೆ ಚೆನ್ನೈನ ದಕ್ಷಿಣ ಭಾರತ ಕಬ್ಬು ಹಾಗೂ ಸಕ್ಕರೆ ತಂತ್ರಜ್ಞರ ಒಕ್ಕೂಟ ನೀಡುವ ಉತ್ತಮ ಗುಣಮಟ್ಟದ ಕಬ್ಬು ಅಭಿವೃದ್ಧಿ (ದಿ ಬೆಸ್ಟ್ ಕೇನ್ ಡೆವಲ್ಪಮೆಂಟ್) ಪ್ರಶಸ್ತಿ ಲಭಿಸಿದೆ.
2023-24 ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ 53ನೇ ವಾರ್ಷಿಕ ಸಮ್ಮೇಳನದಲ್ಲಿ ನಿರಾಣಿ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಮೆಲ್ಬ್ರೋ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಚಂದ್ರಶೇಖರ ಹುಬ್ಬಳ್ಳಿ ಅವರಿಗೆ ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದ ಮಹಾಪ್ರಬಂಧಕ ಎಸ್.ಪಿ.ಯಲಿಗಾರ, ಕಾರ್ಖಾನೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ರವೀಂದ್ರ ಬೆನಕಟ್ಟಿ, ಪ್ರಕಾಶ ಪಾಟೀಲ, ವಿಷ್ಣು ಆರೇನಾಡ, ಇಳಂಗೋವನ್, ಕಲ್ಲಗೌಡರ, ಮಹೇಶ ಲೋಕಣ್ಣವರ, ಹನಮಂತ ಮಾಚಪ್ಪನವರ, ಸತೀಶ ಸುಣಗಾರ, ಸುರೇಶ ಜನಾಲಿ ಉಪಸ್ಥಿತರಿದ್ದರು.
ಕಾರ್ಖಾನೆ ಪ್ರಾರಂಭವಾಗಿ 2 ವರ್ಷಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಗೌರವದ ಸಂಗತಿ. ಕಾರ್ಖಾನೆಯ ಸಿಬ್ಬಂದಿ ಹಾಗೂ ಕಾರ್ಮಿಕರ ಪರಿಶ್ರಮದ ಫಲದಿಂದ ಪ್ರಶಸ್ತಿ ಬಂದಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಶಿವಾನಂದ ಮೆಳ್ಳಿಗೇರಿ ಹೇಳಿದ್ದಾರೆ.