ಪದವೀಧರರ ಚುನಾವಣಾ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲ್ಲಾಡಿಸುವಂತ ಫಲಿತಾಂಶ ಬಂದಿದೆ.

ರಟ್ಟೀಹಳ್ಳಿ: ದುರಹಂಕಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಸಂಪುಟದ ಸಚಿವರ, ಶಾಸಕರಿಗೆ ತಕ್ಕ ಉತ್ತರ ನೀಡಿದ ಪದವೀಧರ ಚುನಾವಣೆ ಫಲಿತಾಂಶ ಮುಂಬರುವ 2028ರ ವಿಧಾನಸಭಾ ಹಾಗೂ ಸ್ಥಳೀಯ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಬುಧವಾರ ಪಟ್ಟಣದ ಹಳೇ ಬಸ್ಟ್ಯಾಂಡ್ ಸರ್ಕಲ್‍ನಲ್ಲಿ ಪದವೀಧರ ಹಾಗೂ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಎನ್‍ಡಿಎ ಭರ್ಜರಿ ಜಯಸಾಧಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದವೀಧರರ ಚುನಾವಣಾ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲ್ಲಾಡಿಸುವಂತ ಫಲಿತಾಂಶ ಬಂದಿದೆ. ಪ್ರಜ್ಞಾವಂತ ಮತದಾರರು, ಶಿಕ್ಷಕರು, ಪದವೀಧರರು, ಅಧಿಕಾರಿ ವರ್ಗ ದುರಾಡಳಿತ ನಡೆಸುವಂತ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಉಳಿದ 3 ಕ್ಷೇತ್ರದಲ್ಲಿ ಎನ್ಡಿಎ ನೇತೃತ್ವದ ಬಿಜೆಪಿಗೆ ಮತದಾರರು ಆಶೀರ್ವಾದ ಮಾಡಿದ್ದು ನೋಡಿದರೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಶಾಸಕರು, ಸಚಿವರಿಗೆ ನಾಚಿಕೆಯಾಗಬೇಕು ಎಂದರು.

ಬಿಜೆಪಿ ಮಂಡಳ ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಆಡಳಿತ ನಡೆಸುವಂತ ಕಾಂಗ್ರೆಸ್ ಸರ್ಕಾರಕ್ಕೆ 4ಕ್ಕೆ 4 ಕ್ಷೇತ್ರಗಳಲ್ಲಿ ಸೋಲುಣಿಸಿ ಬಿಜೆಪಿಗೆ ಜಯ ತಂದಿರುವುದರಿಂದ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ, ಸದಸ್ಯರಾದ ರವಿ ಹದಡೇರ, ಬಸವರಾಜ ಕಟ್ಟಿಮನಿ, ಶ್ರೀದೇವಿ ಬೈರಪ್ಪನವರ, ಮಂಜುಳಾ ಅಗಡಿ, ಲಕ್ಷ್ಮೀ ಚಿಕ್ಕಮೊರಬ, ಜೆ.ಪಿ. ಪ್ರಕಾಶ, ಮಾಲತೇಶಗೌಡ ಗಂಗೋಳ, ಹನಮಂತಪ್ಪ ಗಾಜೇರ, ಸುಶಿಲ್ ನಾಡಿಗೇರ, ಸುನೀಲ್ ಸರಶೆಟ್ಟರ್, ನಾಗರಾಜ ದ್ಯಾವಕ್ಕಳವರ, ಮಂಜು ತಳವಾರ, ಜಗದೀಶ ದೊಡ್ಡಗೌಡ್ರ, ರಾಜುಗೌಡ ಪಾಟೀಲ್, ರವಿ ಹರವಿಶೆಟ್ಟರ್, ಸುರೇಶ ನಾಯಕ, ಮಹೇಶ ಚಳಗೇರಿ ಮುಂತಾದವರು ಇದ್ದರು.