ಕೋಮು ಸೌಹಾರ್ದತೆ ಕುರಿತು ಸೌಹಾರ್ದ ಪರಂಪರೆ ಅಭಿಯಾನ

| Published : Jan 31 2024, 02:17 AM IST

ಸಾರಾಂಶ

ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಸಂಘಟನೆಗಳು ಪುರಸಭೆ ವೃತ್ತದ ಜಾಮೀಯಾ ಮಸೀದಿ ಬಳಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ, ನಮ್ಮ ದೇಶ ಪರಂಪರೆಯುಳ್ಳ ದೇಶವಾಗಿದೆ. ಬಹು ಧರ್ಮಗಳ, ಬಹು ಸಂಸ್ಕೃತಿ ಹೊಂದಿರುವ ದೇಶದಲ್ಲಿ ಜಾತಿ ಮತಗಳಿಲ್ಲದೆ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂಬ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿವಿಧ ಸಂಘಟನೆಗಳ ಕಾರ್ಯಕರ್ತರು ಕೋಮು ಸೌಹಾರ್ಧತೆ ಕುರಿತು ಪಟ್ಟಣದಲ್ಲಿ ಸೌಹಾರ್ದ ಪರಂಪರೆ ಅಭಿಯಾನ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ, ದಲಿತ ಹಕ್ಕುಗಳ ಸಮಿತಿ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸೇರಿದಂತೆ ಇತರೆ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅಭಿಯಾನ ನಡೆಸಲಾಯಿತು.

ಸಂಘಟನೆಗಳ ನೂರಾರು ಕಾರ್ಯಕರ್ತರ ಮೆರವಣಿಗೆಗೆ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಮೆರವಣಿಗೆ ಚಾಲನೆ ನೀಡಲಾಯಿತು. ರಸ್ತೆಯುದ್ದಕ್ಕೂ ಮಾನವ ಸರಪಳಿ ನಿರ್ಮಿಸಿ ಮೆರವಣಿಯಲ್ಲಿ ಸೌಹಾರ್ದತೆಗಾಗಿ ಬನ್ನು ಎಲ್ಲರೂ ಕೈ ಜೋಡಿಸೋಣ ಎಂಬ ಘೋಷಣೆಗಳ ಕೂಗಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಸಂಘಟನೆಗಳು ಪುರಸಭೆ ವೃತ್ತದ ಜಾಮೀಯಾ ಮಸೀದಿ ಬಳಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ನಮ್ಮ ದೇಶ ಪರಂಪರೆಯುಳ್ಳ ದೇಶವಾಗಿದೆ. ಬಹು ಧರ್ಮಗಳ, ಬಹು ಸಂಸ್ಕೃತಿ ಹೊಂದಿರುವ ದೇಶದಲ್ಲಿ ಜಾತಿ ಮತಗಳಿಲ್ಲದೆ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುವತ್ತಾ ಸಾಗಬೇಕು ಎಂದರು.

ಆರೋಗ್ಯಕರವಾದ ಸಮಾಜ ಕಟ್ಟಬೇಕು. ದ್ವೇಷ, ಅಸೂಯೆ ಬಿಟ್ಟು ಮಾನವೀಯ ಮನಸು ಹೊಂದುಗೂಡಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೆಂದ್ರ ಮಾತನಾಡಿದರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಜಯರಾಮು, ಪ್ರಸನ್ನ ಎನ್. ಗೌಡ, ಪಾಂಡು, ದಲಿತ ಸಂಘಟನೆ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಕಬ್ಬಿನ ಕೆರೆ, ಗಂಜಾಂ ರವಿಚಂದ್ರ, ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ವೆಂಕಟೇಶ್, ಜನವಾದಿ ಸಂಘಟನೆಯ ದೇವಿ, ಸುಶೀಲ, ಸಿಪಿಎಂ ಕೃಷ್ಣೇಗೌಡ, ಕೃಷಿ ಕೂಲಿಕಾರ್ಮಿಕ ಸಂಘಟನೆಯ ಪುಟ್ಟಮಾದು, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಸಿಪಿಎಂನ ನಾಗರಾಜು, ಮುಸ್ಲಿಂ ಒಕ್ಕೂಟ ಸದಸ್ಯ ಅಶ್ರಪ್ ಪಾಷ, ಎಜಾಜ್ ಸೇರಿದಂತೆ ಇತರ ಸಂಘಟನೆ ನೂರಾರು ಮುಖಂಡರು ಭಾಗವಹಿಸಿದರು.