ಸಾರಾಂಶ
ಕಳೆದ 4 ದಿನಗಳಿಂದ ಹೊರಕಾಣಿಕೆ ಸೇರಿದಂತೆ ಪುಣ್ಯಾಹವಾಚನ, ಹೋಮ ಹವನಾದಿ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು. ಗುರುವಾರ ಚಕ್ರಾಬ್ದಿ ಮಂಡಲದಲ್ಲಿ 108 ಕಲಶ ಸ್ಥಾಪಿಸಿ ಪೂಜಿಸಲಾಯಿತು.
ಹುಬ್ಬಳ್ಳಿ:
ಇಲ್ಲಿನ ದೇಶಪಾಂಡೆ ನಗರದಲ್ಲಿ ಶ್ರೀಕೃಷ್ಣ ಹಾಗೂ ರಾಘವೇಂದ್ರರಾಯರ ಶಿಲಾ ಗರ್ಭಗೃಹ ನಿರ್ಮಿಸಿದ್ದು, ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರ ನೇತೃತ್ವದಲ್ಲಿ ಶುಕ್ರವಾರ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.ಕಳೆದ 4 ದಿನಗಳಿಂದ ಹೊರಕಾಣಿಕೆ ಸೇರಿದಂತೆ ಪುಣ್ಯಾಹವಾಚನ, ಹೋಮ ಹವನಾದಿ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು. ಗುರುವಾರ ಚಕ್ರಾಬ್ದಿ ಮಂಡಲದಲ್ಲಿ 108 ಕಲಶ ಸ್ಥಾಪಿಸಿ ಪೂಜಿಸಲಾಯಿತು. ಇದಕ್ಕೂ ಮುನ್ನ ನಡೆದ ವಿಷ್ಣುಗಾಯತ್ರಿ ಮಂತ್ರದಿಂದ ಹೋಮ ನಡೆಸಿ ಅದರ ಚೈತನ್ಯ ಪ್ರಸಾದ ಫಲವನ್ನು 108 ಕಲಶದಲ್ಲಿ ಸ್ಥಾಪಿಸಿ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರಿಂದ ಶ್ರೀಕೃಷ್ಣ ಮತ್ತು ರಾಘವೇಂದ್ರರಾಯರಿಗೆ ವಿಶೇಷ ಬ್ರಹ್ಮಕಲಶಾಭಿಷೇಕ ಮಾಡಲಾಯಿತು.
ಆನಂತರ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ಇದಕ್ಕೂ ಮೊದಲು 2 ದಿನಗಳ ವರೆಗೆ ಭೂವರಾಹ ಹೋಮ, ಅಷ್ಟಬಂಧ, ಸುದರ್ಶನ ಹೋಮ, ಭಜನಾ ಕಾರ್ಯಕ್ರಮ ಹಾಗೂ ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸಸುಧೆ ಸಾಗಿ ಬಂದಿತು.ದಕ್ಷಿಣ ಕನ್ನಡ ದ್ರಾವಿಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಉಪಾಧ್ಯಕ್ಷ ಅನಂತರಾಜ ಭಟ್, ಕಾರ್ಯದರ್ಶಿ ವಾದಿರಾಜ ಭಟ್ ಎಡನೀರು, ಉಪಕಾರ್ಯದರ್ಶಿ ಸುರೇಶ ಕೆಮ್ತೂರು, ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯ. ಕೃಷ್ಣರಾಜ ಕೆಮ್ತೂರು, ಶ್ರೀಧರ ಅಲೆಯೂರು. ದಯಾನಂದರಾವ್ ಶ್ರೀನಿವಾಸರಾವ್, ಶ್ರೀನಿವಾಸ ಓಕಡೆ, ಡಾ. ಸೂರ್ಯ ಕಾಂತ ಕಲ್ಲೂರಾಯ, ಸಂದೇಶ ಆಚಾರ್ಯ, ಶ್ಯಾಮ ಭಟ್ ಪೆರ್ವಾಜೆ, ಸುಬ್ರಮಣ್ಯಭಟ್ ಎಡನೀರು, ಅನಂತ ಕೃಷ್ಣ ಐತಾಳ ಸೇರಿದಂತೆ ಹಲವರಿದ್ದರು.