ಸಾರಾಂಶ
ಸೊರಬ ತಾಲೂಕಿನ ಕುದುರೆಗಣಿಯಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಡೆದ ಹೋರಿಹಬ್ಬದಲ್ಲಿ ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ 100ಕ್ಕೂ ಅಧಿಕ ಹೋರಿಗಳು ಪಾಲ್ಗೊಂಡು, ಮಿಂಚಿನ ಓಟದಿಂದ ನೋಡುಗರ ಮೈನವಿರೇಳಿಸಿ, ರಂಜಿಸಿದವು
ಕನ್ನಡಪ್ರಭ ವಾರ್ತೆ, ಸೊರಬ
ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಡೆದ ಹೋರಿಹಬ್ಬದಲ್ಲಿ ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ 100ಕ್ಕೂ ಅಧಿಕ ಹೋರಿಗಳು ತರಾವರಿಯಾಗಿ ಅಲಂಕೃತಗೊಂಡು ಪಾಲ್ಗೊಂಡವು.ಅಖಾಡದಲ್ಲಿ ಶಿಕಾರಿಪುರ ತಾಲೂಕು ಗಾಮಾದ ಧಂಗೆಯ ಕ್ರಾಂತಿ, ಕತ್ತಿಗೆ ಆರ್ಮಿ ಹುಲಿ, ಹುಣಸೆಕಟ್ಟೆ ಜೈ ಹನುಮ, ಸೊರಬದ ರಾವಣ, ಉರುಗನಹಳ್ಳಿ ಗೂಳಿ, ಹಿರೇಜಂಬೂರು, ಕೊಡಕಣಿ ಡೇಂಜರ್ ಬಸವ, ಓಟೂರು ಮಾರಿಕಾಂಬ, ಹಳೇಸೊರಬ ರಾಕೀ ಬಾಯ್, ಓಟೂರು ಗೂಳಿ, ಬನವಾಸಿ ಕದಂಬ, ಸಾರೇಮರೂರು ಸರದಾರ, ಕುರದುರೆಗಣಿ ಗ್ರಾಮದ ಅಶ್ವ, ವಾಯಪುತ್ರ, ವೀರಭದ್ರೇಶ್ವರ ಎಕ್ಸ್ಪ್ರೆಸ್, ಮಲೆನಾಡ ಪವರ್ ಸ್ಟಾರ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಸಮಿತಿಯವರು ಎರಡು ಬದಿಯಲ್ಲಿ ತಡೆಬೇಲಿ ನಿರ್ಮಿಸಿ, ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರಿಗೆ ಬಹುಮಾನ ವಿತರಿಸಲಾಯಿತು.- - -
ಟಾಪ್ ಕೋಟ್ ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸರ್ಕಾರದಿಂದ ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕು. ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದಂತೆ ಹೋರಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಉತ್ತೇಜನ ನೀಡಬೇಕು- ಎಚ್.ಎಲ್. ರಾಘವೇಂದ್ರ, ಹೋರಿ ಹಬ್ಬ ಆಚರಣಾ ಸಮಿತಿ, ಸೊರಬ - - - -29ಕೆಪಿಸೊರಬ02:
ಕತ್ತಿಗೆ ಆರ್ಮಿ ಹುಲಿ ಹೋರಿಯ ಮಿಂಚಿನ ಓಟ.;Resize=(128,128))
;Resize=(128,128))