ರಾಮನಗರ: ಜಾನಪದ ಕಲಾವಿದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕದಲ್ಲಿ ಶನಿವಾರದಿಂದ ಆರಂಭಗೊಂಡಿದ್ದ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಬಿದ್ದಿತು.
ರಾಮನಗರ: ಜಾನಪದ ಕಲಾವಿದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕದಲ್ಲಿ ಶನಿವಾರದಿಂದ ಆರಂಭಗೊಂಡಿದ್ದ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಬಿದ್ದಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ವಿದ್ಯಾರ್ಥಿ ಜಾನಪದರಿಂದ ಅನಾವರಣಗೊಂಡ ಜಾನಪದ ಕಲೆ ಜನರನ್ನು ಆಕರ್ಷಿಸಿತು. ನಾಡಿನ ಹಲವು ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಜಾನಪದ ಕಲಾವಿದರ ಕಂಠ ಸಿರಿಯಲ್ಲಿ ಮೂಡಿ ಬಂದ ಜಾನಪದ ಗೀತಗಾಯನ, ನೃತ್ಯ ಹಾಗೂ ಕಲಾ ಪ್ರಕಾರಗಳ ಪ್ರದರ್ಶನ ನೋಡಗರ ಗಮನ ಸೆಳೆದವು. ಪ್ರಶಸ್ತಿ ಸ್ವೀಕರಿಸಿದ ಕಲಾವಿದರು ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಭಾವ ವ್ಯಕ್ತಪಡಿಸಿದ್ದು ಕೇಳಿಬಂದಿತು.ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 19 ಮಂದಿಗೆ ಪ್ರಶಸ್ತಿ ಪತ್ರ, ನಗದು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ :ನಾಡೋಜ ಎಚ್.ಎಲ್. ನಾಗೇಗೌಡ-ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ಜಾನಪದ ವಿದ್ವಾಂಸರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ, ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿ ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣೆ ವಾದನ ಕಲಾವಿದ ಚಿಕ್ಕಣ್ಣ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಜಾನಪದ ಛಾಯಾಗ್ರಾಹಕ ಡಾ.ಸಿರಿಗಂಧ ವಿ.ಶ್ರೀನಿವಾಸ ಮೂರ್ತಿ, ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ ಬೆಂ.ದಕ್ಷಿಣ ಜಿಲ್ಲೆಯ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ ಭೈರಪ್ಪ (ಗಂಗಣ್ಣ) ಹಾಗೂ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಯನ್ನು ಸ್ವಾತಂತ್ರ್ಯದ ಕಿಡಿಗಳು ಪುಸ್ತಕದ ಲೇಖಕ ಹೂಲಿ ಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.
ಜಾನಪದ ಲೋಕ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆ ಜೋಗುಳಪದ ಹಾಡುಗಾರ್ತಿ ಚಿನ್ನಮ್ಮ, ಸೋಲಿಗ ಕಲಾವಿದೆ ಡಾ.ಎಸ್.ರತ್ನಮ್ಮ, ಮಂಡ್ಯ ಜಿಲ್ಲೆಯ ಪೂಜಾ ಮತ್ತು ಮರಗಾಲು ಕುಣಿತ ಕಲಾವಿದ ಕೆ.ಪಿ.ದೇವರಾಜು, ರಾಯಚೂರು ಜಿಲ್ಲೆ ತತ್ವಪದ ಕಲಾವಿದ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ತಂಬೂರಿ ಸಿದ್ದರಾಜು, ಗೊರವ ಕುಣಿತ ಕಲಾವಿದ ಎಂ.ಬಸವರಾಜು,ಧಾರವಾಡ ಜಿಲ್ಲೆಯ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕಾಸರಗೋಡಿನ ಯಕ್ಷಗಾನ ವೇಷಧಾರಿ ಕಲಾವಿದ ಚನಿಯಪ್ಪನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಟಿ.ಶಾರದಮ್ಮ, ಬೀದರ್ ಜಿಲ್ಲೆಯ ಲಂಬಾಣಿ ನೃತ್ಯಗಾರ್ತಿ ಭಾರತಿ ಬಾಯಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಯಕ್ಷಗಾನ ಕಲಾವಿದ ಬಿ.ಎಸ್.ಗೌಡ (ಬೀರಪ್ಪ ಶಿವುಗೌಡ), ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ ಮಹಾಲಿಂಗಪ್ಪ ಕರಡಿ ಅವರಿಗೆ ನೀಡಿ ಗೌರವಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ , ಕ್ಯೂರೇಟರ್ ಡಾ.ಯು.ಎಂ.ರವಿ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್..............
ಜಾನಪದ ಲೋಕದ ಅನುದಾನ ಬಿಡುಗಡೆಗೆ ಸಿಎಂ ಗಮನ ಸೆಳೆಯುವೆರಾಮನಗರ: ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಜಾನಪದ ಲೋಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನ ಸೆಳೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ವಿದ್ಯಾರ್ಥಿ ಜಾನಪದ ಲೋಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,ಜಾನಪದ ಲೋಕ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದನ್ನು ಗಮನಕ್ಕೆ ತಂದಿದ್ದಾರೆ. ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಗಳಿಗೆ ಸಂಬಂಧಿಸಿದಂತೆ ಫೆ.11ರಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿಯೇ ಜಾನಪದ ಲೋಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ನಾನಾ ಬಗೆಯ ಜಾತಿ, ಭಾಷೆ, ಕಲೆ, ಸಂಸ್ಕೃತಿಗಳಿವೆ. ಅದೆಲ್ಲವನ್ನು ಉಳಿಸಿ ಬೆಳೆಸುವ ಸಲುವಾಗಿಯೇ ಡಾ.ಎಚ್.ಎಲ್.ನಾಗೇಗೌಡರು ಜಾನಪದ ಲೋಕವನ್ನು ಕಟ್ಟಿದ್ದಾರೆ. ಜಾನಪದ ಕಲೆ ಬೆಳೆದಿದ್ದನ್ನು ಉಳಿಸುವ ಕೆಲಸ ಆಗಬೇಕಿದೆ. ಅದೇ ರೀತಿ ಜಾನಪದ ಲೋಕವನ್ನು ಉಳಿಸಿ ಬೆಳೆಸುವುದು ಸರ್ಕಾರ ಮಾತ್ರವಲ್ಲ ಎಲ್ಲರ ಜವಾಬ್ದಾರಿಯೂ ಆಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.8ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ಸಚಿವ ರಾಮಲಿಂಗಾರೆಡ್ಡಿ ಜಾನಪದ ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಿದರು.