ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ತಾಲೂಕಿನ ಚುಂಚನಕಟ್ಟೆ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀರಾಮ ದೇವಾಲಯದಲ್ಲಿ ಭಾನುವಾರ ತಡರಾತ್ರಿ ಶಾಸಕ ಡಿ.ರವಿಶಂಕರ್ ಸೀತಾ ಕಲ್ಯಾಣೋತ್ಸವವು ವಿಜೃಂಭಣೆಯಿಂದ ನಡೆಯಿತು.ವಿದ್ವಾನ್ ವಿಜಯಕುಮಾರ್ ಹಿರಿಯ ಅಗಮಿಕ ಪಂಡಿತ್ ನೇತೃತ್ವದ ಅಗಮಿಕ ಅರ್ಚಕರೊಂದಿಗೆ ತಡ ರಾತ್ರಿ ಉತ್ಸವ ಮೂರ್ತಿಗಳಿಗೆ ವಧು-ವರರಂತೆ ಚಿನ್ನಾಭರಣದ ಕವಚ ತೊಟ್ಟು. ಹಲವು ಬಗೆಯ ಹೂ ಗಳಿಂದ ಶೃಂಗರಿಸಲಾಗಿತ್ತು. ಧಾರ್ಮಿಕ ಪೂಜಾ ಕೈಂ ಕಾರ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ನಡೆಸಿದ ಅರ್ಚಕರು ಮೊದಲಿಗೆ ಸಂಕಲ್ಪ ಸೇವೆ ನೆರವೇರಿಸಿದರು.
ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಾಮ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನ ಪಲ್ಲಕ್ಕಿಯಲ್ಲಿ ದೇವಾಲಯದ ಸುತ್ತ ಮೆರವಣಿಗೆಯೊಂದಿಗೆ ಕಾವೇರಿ ನದಿಗೆ ಪೂಜೆ ಸಿಲ್ಲಿಸಿದ. ಬಳಿಕ ಶ್ರೀರಾಮನನ್ನು ಶಾಸಕ ಡಿ. ರವಿಶಂಕರ್ ಪತ್ನಿ ಸುನಿತಾ ಡಿ. ರವಿಶಂಕರ್ ಹಾಗೂ ದೊಡ್ಡಸ್ವಮೇಗೌಡ ಪತ್ನಿ ವನಜಾಕ್ಷಿ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕ ವೃಂದ ಮನೆದುಂಬಿಸುವ ಧಾರ್ಮಿಕ ಕಾರ್ಯವನ್ನು ನೆರವೇರಿತು.ನಂತರ ದೇವಾಲಯದ ಹೊರ ಅವರಣದಲ್ಲಿ ಹಲವು ಬಗೆಯ ಹೂ ಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ವೈಭವೀಕರಣ ಮದುವೆ ಮಂಟಪದಲ್ಲಿ ಪ್ರತಿಷ್ಠಾಪಸಲಾಯಿತು. ಮದುವೆಯ ಪೂಜಾ ವಿಧಿವಿಧಾನಗಳನ್ನು ಹಿರಿಯ ಆಗಮ ಪಂಡಿತರು ಹಾಗೂ ಅರ್ಚಕ ವೃಂದ ಸುದೀರ್ಘವಾದ ಮಂತ್ರ ಪಠಣಗಳ ಮೂಲಕ ಕಲ್ಯಾಣೋತ್ಸವಕ್ಕೆ ಚಾಲನೆ ನೀಡಿ ಗಂಟೆಗಳ ಕಾಲ ವಿಶೇಷ ಪೂಜೆಗಳು, ತಿರುಪ್ಪಾಡಿ ಸೇವೆ, ಹೋಮ ಹವನ ನಡೆಸಿ ಹೂವಿನ ಹಾರ ಹಾಕಿ ಸೀತಾಮಾತೆಗೆ ತಾಳಿಯನ್ನು ಹಾಕುವ ಮೂಲಕ ಸೀತಾ ಕಲ್ಯಾಣವನ್ನು ನೆರವೆರಿಸಿದರು.
ಇನ್ನು ಕಂಕಣ ಭಾಗ್ಯವಿಲ್ಲದ ಅವಿವಾಹಿತ ಯುವಕ, ಯುವತಿಯರು ಕಂಕಣ ಭಾಗ್ಯಕ್ಕಾಗಿ ಸೀತಾ ಕಲ್ಯಾಣ ಮಹೋತ್ಸವಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬಂದಿದ್ದ ಭಕ್ತರಿಗೆ ತೀರ್ಥ ಪ್ರಸಾದ ಲಾಡು ನೀಡಲಾಯಿತು.ಸಂಕ್ರಾಂತಿ ಬಾಗಿನ:
ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಭಕ್ತರಿಗೆ ಎಳ್ಳುಬೆಲ್ಲ, ಅರಿಶಿಣ ಕುಂಕುಮ, ಬಳೆ, ಲಾಡು, ಕುಪ್ಪಸ, ಎಲೆ ಅಡಿಕೆ ಇರುವ ಸಂಕ್ರಾಂತಿ ಶುಭಾಶಯದ ಬಾಗಿನ ಬ್ಯಾಗ್ ಗಳನ್ನು ವಿತರಿಸುವ ಮೂಲಕ ಶಾಸಕ ಡಿ. ರವಿಶಂಕರ್ ಸಂಕ್ರಾಂತಿ ಶುಭಾಶಯ ತಿಳಿಸಿದರು.ಸಾಲಿಗ್ರಾಮ ತಹಸೀಲ್ದಾರ್ ಎಸ್.ಎನ್. ನರಗುಂದ, ಉಪ ತಹಸೀಲ್ದಾರ್ ಶರತ್ ಕುಮಾರ್, ಆರ್.ಐ ಚಿದಾನಂದ, ಪಾರುಪತ್ತೆದಾರು ಯತಿರಾಜು, ಪವನ್, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್, ದೇವಾಲಯದ ಸಿಬ್ಬಂದಿಗಳಾದ ಶಿವಣ್ಣ, ಚಂದ್ರನಾಯಕ್, ಮಣಿ, ತಿಮ್ಮಣ್ಣ, ಹರೀಶ್, ಕಮಲ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಡಿ.ಎಸ್ ಕುಮಾರ್, ಸಿ.ವಿ. ಮಂಜುನಾಥ್, ಹರ್ಷಿತ್, ಭರತ್, ರಘು, ಮನೋಜ್, ರಾಮು, ಮಹದೇವ್, ನವೀನ್, ಧನು, ಸೋಮಣ್ಣ ಇದ್ದರು.