ಸುವರ್ಣ ಕರ್ನಾಟಕ ಸಂಭ್ರಮ ರಥಕ್ಕೆ ಅದ್ಧೂರಿ ಸ್ವಾಗತ

| Published : Mar 10 2024, 01:45 AM IST

ಸಾರಾಂಶ

ಖಾನಾಪುರ: ತಾಲೂಕಿನ ಮಂಗೇನಕೊಪ್ಪ ಗ್ರಾಮಕ್ಕೆ ಶನಿವಾರ ಆಗಮಿಸಿದ ಸುವರ್ಣ ಕರ್ನಾಟಕ ಸಂಭ್ರಮ ರಥಕ್ಕೆ ಗ್ರಾಮಸ್ಥರು, ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಅದ್ಧೂರಿ ಸ್ವಾಗತ ದೊರೆಯಿತು.

ಖಾನಾಪುರ: ತಾಲೂಕಿನ ಮಂಗೇನಕೊಪ್ಪ ಗ್ರಾಮಕ್ಕೆ ಶನಿವಾರ ಆಗಮಿಸಿದ ಸುವರ್ಣ ಕರ್ನಾಟಕ ಸಂಭ್ರಮ ರಥಕ್ಕೆ ಗ್ರಾಮಸ್ಥರು, ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ಛತ್ರಪತಿ ಶಿವಾಜಿ ವೃತ್ತಕ್ಕೆ ಆಗಮಿಸಿದ ರಥವನ್ನು ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಿವಾನಂದ ಚಲವಾದಿ ಬರಮಾಡಿಕೊಂಡರು.

ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥದ ಜೊತೆಗೆ ಗ್ರಾಪಂ ಸದಸ್ಯರು, ಗ್ರಾಮದ ನಾಗರಿಕರು, ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹೆಜ್ಜೆ ಹಾಕಿದರು. ಬಳಿಕ ಗ್ರಾಮದ ಬಸ್ ನಿಲ್ದಾಣದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಬೀಡಿ ಹೋಬಳಿಯ ಉಪ ತಹಸೀಲ್ದಾರ್ ರೋಹಿತ ಬಡಚೀಕರ ಸುವರ್ಣ ಸಂಭ್ರಮ ರಥದ ಬಗ್ಗೆ ವಿವರಿಸಿದರು. ಮಂಗೇನಕೊಪ್ಪ ಗ್ರಾಮದಿಂದ ಬೀಳ್ಕೊಟ್ಟ ರಥ ಗುಂಡೇನಟ್ಟಿ ಗ್ರಾಮದ ಮೂಲಕ ಸಾಗಿ ಕಿತ್ತೂರು ತಾಲೂಕು ಪ್ರವೇಶಿಸಿತು.