ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇ. 15ರಷ್ಟಿದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿತ್ತು. ಪರಿಶಿಷ್ಟ ಪಂಗಡಕ್ಕೆ ಇದ್ದ ಶೇ. 3ರಷ್ಟು ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಮೊದಲಿದಂತೆ ಎಸ್ಸಿಗೆ ಶೇ. 15, ಎಸ್‌ಟಿಗೆ ಶೇ. 3 ಮೀಸಲಾತಿ ನಿಗದಿಪಡಿಸಿದ್ದು, ಇದರಿಂದ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ರಾಜುಗೌಡ ವಾಗ್ದಾಳಿ ನಡೆಸಿದರು.

ಹಾವೇರಿ: ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇ. 15ರಷ್ಟಿದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿತ್ತು. ಪರಿಶಿಷ್ಟ ಪಂಗಡಕ್ಕೆ ಇದ್ದ ಶೇ. 3ರಷ್ಟು ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಮೊದಲಿದಂತೆ ಎಸ್ಸಿಗೆ ಶೇ. 15, ಎಸ್‌ಟಿಗೆ ಶೇ. 3 ಮೀಸಲಾತಿ ನಿಗದಿಪಡಿಸಿದ್ದು, ಇದರಿಂದ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ರಾಜುಗೌಡ ವಾಗ್ದಾಳಿ ನಡೆಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ವಾಲ್ಮೀಕಿ ಸಮಾಜದ ಬಹುಕಾಲದ ಕನಸು ನನಸು ಮಾಡಿದ್ದರೆ, ಕಾಂಗ್ರೆಸ್‌ ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದೆ ಎಂದು ದೂರಿದರು.ದಲಿತರು, ಹಿಂದುಳಿದವರ ಪಕ್ಷ ಎಂದು ಹೇಳುವ ಕಾಂಗ್ರೆಸ್ ಅವರಿಗೆ ಮೋಸ ಮಾಡಿದೆ. ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಸಮುದಾಯವನ್ನು ಬಳಸುತ್ತಿದ್ದು, ಭಾಷಣದಲ್ಲಿ ಬದನೆಕಾಯಿ ತಿನ್ನಿಸುತ್ತಾರೆ, ನಿಜದಲ್ಲಿ ಏನೂ ಕೊಡೋದಿಲ್ಲ ಎಂದರು.ಎಸ್ಸಿ, ಎಸ್‌ಟಿ ಸಮುದಾಯ ಹೋರಾಟದಿಂದಲೇ ಮೀಸಲಾತಿ ಪಡೆದಿದೆ. ಸರ್ಕಾರ ಕೋರ್ಟಲ್ಲಿ ಸರಿಯಾಗಿ ಹೋರಾಟ ಮಾಡಿಲ್ಲ. ಸ್ವಯಂಪ್ರೇರಿತ ಹೋರಾಟದಿಂದಲೇ ಮೀಸಲಾತಿ ಹಕ್ಕು ಸಿಗುತ್ತದೆ. ನಮ್ಮ ರಾಜಕಾರಣದ ಸಲುವಾಗಿ ಸಮಾಜವನ್ನು ಬಲಿ ಕೊಡುತ್ತಿದ್ದಾರೆ. ಮೀಸಲಾತಿ ಪರಿಣಾಮ ಇಂದು ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಜನ ಬಂದಿಲ್ಲ, ಜನರಲ್ಲಿ ಈಗಾಗಲೇ ಆಕ್ರೋಶ ಜ್ವಾಲೆ ಶುರುವಾಗಿದೆ. ಸರ್ಕಾರದ ಮೇಲೆ ನಮ್ಮ ಸಮುದಾಯದಲ್ಲಿ ದ್ವೇಷ ಶುರುವಾಗಿದೆ. ಉಪಚುನಾವಣೆ ಫಲಿತಾಂಶದ ಬಳಿಕ ದೊಡ್ಡ ರಾಜಕೀಯ ಬದಲಾವಣೆ ಆಗಲಿದೆ. ಕಾಂಗ್ರೆಸ್ಸಿನಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದರು.