ಹಲಸಿನಮರದೊಡ್ಡಿ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ

| Published : Dec 24 2023, 01:45 AM IST

ಹಲಸಿನಮರದೊಡ್ಡಿ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಿಂಡು ಗ್ರಾಮಗಳ ಬಳಿ ಧೀಡೀರ್ ಪ್ರತ್ಯಕ್ಷವಾಗುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಕನಕಪುರ: ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಿಂಡು ಗ್ರಾಮಗಳ ಬಳಿ ಧೀಡೀರ್ ಪ್ರತ್ಯಕ್ಷವಾಗುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ತಾಲೂಕಿನ ಕಬ್ಬಾಳು ಹಲಸಿನಮರದೊಡ್ಡಿ ಸಮೀಪದ ಬಾಳೆಕಟ್ಟೆ ಏರಿ ಮೇಲೆ 12 ಆನೆಗಳು ಧಿಡೀರ್ ಪ್ರತ್ಯಕ್ಷವಾಗಿವೆ. ಕಳೆದ 4 ದಿನಗಳ ಹಿಂದೆ ಮರಳವಾಡಿ ಹೋಬಳಿ ಗುತ್ತಲಹುಣಸೆ ಗಂಗಾಧರೇಶ್ವರ ಬೆಟ್ಟದಲ್ಲಿ 15 ಆನೆಗಳು ಕಾಣಿಸಿಕೊಂಡು ಅಲ್ಲಿಯೂ ಆತಂಕ ಸೃಷ್ಟಿಯಾಗಿತ್ತು. ಕಳೆದ ವಾರವಷ್ಟೇ ಅರಳೀಮರದೊಡ್ಡಿ ಗ್ರಾಮದಲ್ಲಿ ಜಮೀನಿಗೆ ನೀರು ಹಾಯಿಸಲು ತೆರಳಿದ್ದ 60 ವರ್ಷದ ರೈತ ತಿಮ್ಮಯ್ಯ ಒಂಟಿ ಸಲಗದ ದಾಳಿಗೆ ಬಲಿಯಾಗಿದ್ದರು.

ಗಂಗಾಧೇಶ್ವರ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ದುನ್ನಸಂದ್ರ-ಮರಳವಾಡಿ ಮಾರ್ಗವಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಓಡಿಸಲಾಗಿತ್ತು. ಕಬ್ಬಾಳು ಸಮೀಪ ಕಾಣಿಸಿಕೊಂಡ 12 ಆನೆಗಳನ್ನು ಸಾಸಲಾಪುರ ಮಾರ್ಗವಾಗಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಓಡಿಸಲು ಸಾತನೂರು ವಲಯ ಅರಣ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಬರದ ಪರಿಸ್ಥತಿಯಲ್ಲಿ ರೈತರು ಬೆಳೆದಿದ್ದ ಅಲ್ಪಸ್ವಲ್ಪ ಬೆಳೆಗಳು ಅಲ್ಲದೇ ತೆಂಗು, ಮಾವು, ಹಲಸು, ತೊಟಗಳನ್ನು ನಾಶಪಡಿಸಿ ರೈತರನ್ನು ಸಕಷ್ಟಕ್ಕೀಡು ಮಾಡಿದೆ.

ಕಾಡಾನೆ ಹಿಮ್ಮಟ್ಟುವ ಕಾರ್ಯಾಚರಣೆ :

ಹಲಸಿನಮರದೊಡ್ಡಿ ಸಮೀಪ ಬೀಡುಬಿಟ್ಟಿರುವ 12 ಆನೆಗಳನ್ನು ಮುತ್ತತ್ತಿ ಕಾಡಿಗೆ ಹಿಮ್ಮಟ್ಟಿಸಲು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾಮನಗರ ಜಿಲ್ಲಾ ಅರಣ್ಯ ಅಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಸಂರಕ್ಷಣಾಧಿಕಾರಿ ಗಣೇಶ್, ವಲಯ ಅರಣ್ಯಾಧಿಕಾರಿ ಆಶಾರೆಡ್ಡಿ, ಉಪವಲಯ ಅರಣ್ಯಾಧಿಕಾರಿ

ಮುತ್ತುನಾಯ್ಕ ಸೇರಿದಂತೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ ಮಿಥುನ್, ಪ್ರಭಾಕರ್, ಸಿಬ್ಬಂದಿಗಳಾದ ರಿಜ್ವಾನ್, ಪ್ರದೀಪ್, ಕಾಂತರಾಜು, ತನ್ವೀರ್ ಹಾಗೂ ಸಾತನೂರು ಮತ್ತು ಚನ್ನಪಟ್ಟಣ ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

23 ಕೆಕೆಪಿ 2:

ಕನಕಪುರ ತಾಲೂಕು ಕಬ್ಬಾಳು ಸಮೀಪದ ಹಲಸಿನಮರದೊಡ್ಡಿ ಸಮೀಪದ ಬಳಿ ಕಾಣಿಸಿಕೊಂಡು ಕಾಡಾನೆಗಳ ಹಿಂಡು.