ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಾಯಕತ್ವ ಸ್ಥಾನದಲ್ಲಿರುವವರಿಗೆ ದೂರದೃಷ್ಟಿ, ಸಹಾನುಭೂತಿ ಮತ್ತು ಸವಾಲು ಎದುರಿಸುವ ಸಾಮರ್ಥ್ಯ ಇರಬೇಕು. ಈ ಮೂರೂ ಇರುವ ನಾಯಕರು ಸಂಸ್ಥೆಗಳನ್ನು ಮುನ್ನಡೆಸಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಸತ್ಯ ಸಾಯಿ ಗ್ರಾಮವೇ ಸಾಕ್ಷಿ ಎಂದು ಪ್ರಧಾನಿಯ ಆರ್ಥಿಕ ಸಲಹೆಗಾರರ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಹೇಳಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''ದ 86 ನೇ ದಿನದಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ''''ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ'''' ಸ್ವೀಕರಿಸಿ ಮಾತನಾಡಿ, ನಿಜವಾದ ನಾಯಕರು ಸವಾಲುಗಳಿಗೆ ಎಂದಿಗೂ ಅಂಜುವುದಿಲ್ಲ ಎಂದರು.ತಪ್ಪುಗಳಿಗೆ ಹೆದರಬಾರದುತಪ್ಪುಗಳಾಗುತ್ತವೆ ಎಂದು ಹೆದರಿದರೆ ಯಾವುದೇ ಹೊಸ ಕೆಲಸ ಮಾಡಲು ಆಗುವುದಿಲ್ಲ. ಸದ್ಗುರುಗಳು ಪೌಷ್ಟಿಕ ಆಹಾರ, ಉಚಿತ ವೈದ್ಯಕೀಯ ಸೇವೆ, ಉಚಿತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ನಿಜವಾದ ನಾಯಕತ್ವದ ಆಶಯ ಇಲ್ಲಿ ಸಾಕಾರಗೊಂಡಿದೆ ಎಂದು ನುಡಿದರು.ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಜಾಗತಿಕ ನಾಯಕತ್ವ ಪುರಸ್ಕಾರ ಪಡೆದವರು ಕೇವಲ ಉಪನ್ಯಾಸ ಕೊಡುವವರಲ್ಲ. ನಿಜವಾದ ನಾಯಕರ ಮಾತು, ಕೃತಿ ಮತ್ತು ಆಲೋಚನೆಗಳಲ್ಲಿ ವ್ಯತ್ಯಾಸಗಳು ಇರುವುದಿಲ್ಲ. ಮನಸ್ಸು, ಮಾತು ಮತ್ತು ಕರ್ಮವು ಒಂದಾಗಿರುವುದು ಮಹಾತ್ಮರ ಲಕ್ಷಣ. ಇವುಗಳಲ್ಲಿ ವ್ಯತ್ಯಾಸವಿದ್ದರೆ ಅಂಥವರು ದುರಾತ್ಮರಾಗುತ್ತಾರೆ ಎಂದು ವಿಶ್ಲೇಷಿಸಿದರು.ಭಾರತ ಎಂದಿಗೂ ಸ್ವಾರ್ಥಿಯಲ್ಲ
ನಮ್ಮ ಕೆಲಸಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಮ್ಮ ಕೆಲಸಗಳು ನಮ್ಮ ಭವಿಷ್ಯವನ್ನು ಕಟ್ಟಿಕೊಡುತ್ತವೆ. ನೀವು ಏನು ಮಾಡುತ್ತೀರೋ ಅದನ್ನು ಭಾರತದಲ್ಲಿ ಮಾಡಿ. ಬೇರೆ ದೇಶಗಳಲ್ಲಿ ಏಕೆ ಸೇವೆ ಸಲ್ಲಿಸುತ್ತೀರಿ ಎಂದು ಕೆಲವರು ಕೇಳುತ್ತಾರೆ. ಭಾರತವು ಎಂದಿಗೂ ಸ್ವಾರ್ಥಿಯಾಗಿ ಯೋಚಿಸಿಲ್ಲ. ಇಡೀ ಜಗತ್ತು ಒಂದೇ ಕುಟುಂಬ ಎನ್ನುವುದು ಇಲ್ಲಿನ ವಿಚಾರಧಾರೆ ಎಂದು ನಾನು ಉತ್ತರಿಸುತ್ತೇನೆ ಎಂದು ವಿವರಿಸಿದರು.ಫಿಜಿಯಲ್ಲಿ ಸತ್ಯಸಾಯಿ ಆಸ್ಪತ್ರೆನಾವು ಫಿಜಿಯಲ್ಲಿ ಒಂದು ಆಸ್ಪತ್ರೆ ನಿರ್ಮಿಸಿದ್ದೇವೆ. ಅದು ಈವರೆಗೆ 400 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿನ ಸಾವಿರಾರು ಮಕ್ಕಳಲ್ಲಿ ಹೃದಯದ ಸಮಸ್ಯೆ ಪತ್ತೆಯಾಗಿದೆ. ಇಲ್ಲಿಂದ ಶೀಘ್ರದಲ್ಲಿಯೇ ತಜ್ಞರ ತಂಡವೊಂದು ಫಿಜಿಗೆ ಹೊರಡಲಿದೆ. ಅವರು ಅಲ್ಲಿನ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
;Resize=(128,128))
;Resize=(128,128))
;Resize=(128,128))