ತೆಂಗಿನ ಮರವೇರಿ ಕುಳಿತಿರುವ ಚಿರತೆ; ಗ್ರಾಮಸ್ಥರಲ್ಲಿ ಆತಂಕ

| Published : Apr 12 2024, 01:02 AM IST

ಸಾರಾಂಶ

ಚಿರತೆಯೊಂದು ತೆಂಗಿನ ಮರವೇರಿ ಕುಳಿತಿರುವ ಘಟನೆ ಸಮೀಪದ ಕೆರೆವರಗೇನಹಳ್ಳಿಯಲ್ಲಿ ನಡೆದಿದೆ. ಗುರುವಾರ ಸಾಯಂಕಾಲ ಗ್ರಾಮದ ಹರೀಶ್ ಎಂಬುವವರು ತೋಟವೊಂದರಲ್ಲಿ ಹಸುಗಳನ್ನು ಮೇಯಿಸುತ್ತಿದ್ದರು. ಈ ಸಂಧರ್ಭದಲ್ಲಿ ತೆಂಗಿನ ಮರದ ಮೇಲಿಂದ ಚಿರತೆಯೊಂದು ಇಳಿಯುತ್ತಿರುವ ದೃಶ್ಯ ಕಂಡು ಬಂದಿದೆ. ಭಯಭೀತರಾದ ಹರೀಶ್ ಕಿರುಚಾಡುತ್ತಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ ಚಿರತೆಯೊಂದು ತೆಂಗಿನ ಮರವೇರಿ ಕುಳಿತಿರುವ ಘಟನೆ ಸಮೀಪದ ಕೆರೆವರಗೇನಹಳ್ಳಿಯಲ್ಲಿ ನಡೆದಿದೆ. ಗುರುವಾರ ಸಾಯಂಕಾಲ ಗ್ರಾಮದ ಹರೀಶ್ ಎಂಬುವವರು ತೋಟವೊಂದರಲ್ಲಿ ಹಸುಗಳನ್ನು ಮೇಯಿಸುತ್ತಿದ್ದರು. ಈ ಸಂಧರ್ಭದಲ್ಲಿ ತೆಂಗಿನ ಮರದ ಮೇಲಿಂದ ಚಿರತೆಯೊಂದು ಇಳಿಯುತ್ತಿರುವ ದೃಶ್ಯ ಕಂಡು ಬಂದಿದೆ. ಭಯಭೀತರಾದ ಹರೀಶ್ ಕಿರುಚಾಡುತ್ತಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಕ್ಕ ಪಕ್ಕದ ಜಮೀನಿನಲ್ಲಿದ್ದ ಜನರೂ ಸಹ ಜಮಾವಣೆಗೊಂಡಿದ್ದಾರೆ. ಜನರ ಕಿರುಚಾಟದಿಂದಾಗಿ ಕೆಳಗೆ ಇಳಿದ ಚಿರತೆ ಗಾಬರಿಗೊಂಡು ತೋಟದಲ್ಲಿ ಓಡಾಡಿ ತದ ನಂತರ ಮತ್ತೊಂದು ತೆಂಗಿನ ಮರವನ್ನು ಏರಿ ಕುಳಿತಿದೆ. ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಶಬ್ದ ಮಾಡದಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಚಿರತೆ ಮರದ ಮೇಲೆ ಇದೆ. ಯಾವ ಕ್ಷಣದಲ್ಲಿ ಮರದಿಂದ ಕೆಳಗೆ ಇಳಿಯುವುದೋ, ಏನು ಮಾಡುವುದೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.

ಚಿರತೆಯ ಉಪಟಳ ಇದ್ದು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಚಿರತೆಯನ್ನು ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.