ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ತಂಬಾಕು ಯುಕ್ತ ಪಾನ್ಮಸಾಲ, ಹನ್ಸ್, ಜರ್ದಾ, ಖೈನಿ, ಕಡ್ಡಿಪುಡಿ ಇತ್ಯಾದಿ ತಂಬಾಕು ಉತ್ಪನ್ನಗಳು ಮಾರಾಟ ಮಾಡಲು ಇನ್ನುಂದೆ ಕಡ್ಡಾಯವಾಗಿ ತಂಬಾಕು ಮಾರಾಟ ಪರವಾನಿಗೆ ಪಡೆಯಬೇಕು ಎಂದು ಎಡಿಸಿ ಮಂಗಳ ಎಸ್.ವಿ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ತಂಬಾಕು ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯ ಅನುಷ್ಠಾನ ಕುರಿತಂತೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ತಂಬಾಕು ಮಾರಾಟಕ್ಕೆ ನಿಯಮ
ಪರವಾನಿಗೆ ಪಡೆಯುವ ವಿಧಾನ-ನಿಗದಿತ ನಮೂನೆಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸುವುದು. ಅಧಿಕಾರಿಗಳು ತಪಾಸಣೆಗೆ ಬಂದಾಗ ಸಂಪೂರ್ಣ ಸಹಕಾರ ನೀಡಬೇಕು, ಕೋಟ್ಪಾ ಕಾಯ್ದೆಯ ಅನುಸಾರ ನಿಗದಿತ ಸೈನೇಜ್ ಬೋರ್ಡುಗಳನ್ನು ಪ್ರದರ್ಶಿಸಬೇಕು, ಕೋಟ್ಟಾ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಅಫಿಡಿವೈಡ್ ಸಲ್ಲಿಬೇಕು ಎಂದು ತಿಳಿಸಿದರು.ಲೈಸೆನ್ಸ್ ಪಡೆಯದಿದ್ದರೆ ದಂಡತಂಬಾಕು ಮಾರಾಟ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ದಂಡ ವಿದಿಸಲಾಗುವುದು, ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ೪೦೦೦ ರೂ.ಗಳು ದಂಡ ವಿಧಿಸಲಾಗುವುದು ಎಂದರು.ಸಭೆಯಲ್ಲಿ ಡಿಹೆಚ್‌ಓ ಡಾ.ಜಿ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಎಂ.ಎ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್.ಎಂ, ಟಿಎಚ್‌ಒ ಡಾ.ಎ.ವಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯಯ ಎಂ.ಶ್ರೀನಿವಾಸ್, ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ, ಆರೋಗ್ಯಾಧಿಕಾರಿ ಡಾ.ಸುಗುಣ.ಎಲ್, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಮಹಮದ್.ಪಿ, ಆಪ್ತಸಮಾಲೋಚಕರಾದ ಮಂಜುನಾಥ ಜಿ.ಎನ್, ಶಶಿಕುಮಾರ್ ಇದ್ದರು.