ಸಾರಾಂಶ
ರಾಮನಾಥಪುರ: ಮದ್ಯವ್ಯಸನದಿಂದ ಬಹುತೇಕ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಉತ್ತಮ ಸಂಸಾರದ ಬದುಕು ಕಟ್ಟಿಕೊಳ್ಳಲು ಕುಡಿತದಂತಹ ಚಟದಿಂದ ದೂರ ಇರಬೇಕಾಗಿರುವುದು ಅನಿವಾರ್ಯವಾಗಿದೆ. ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದು ಧರ್ಮಸ್ಥಳದ ಸಮಿತಿಯ ಶಿಬಿರಾಧಿಕಾರಿ ವಿದ್ಯಾಧರ್ ತಿಳಿಸಿದರು. ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ 4ನೇ ದಿವಸದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಹುಟ್ಟುಹಾಕಿ ಈಗಾಗಲೇ 1993 ಮದ್ಯವರ್ಜನ ಶಿಬಿರ ಹಮ್ಮಿಕೊಂಡು ಮದ್ಯವರ್ಜನ ವ್ಯಸನ ಮುಕ್ತಿ ಮಾಡಲು ಲಕ್ಷಾಂತರ ಅಧಿಕ ಜನರಿಗೆ ಅನೂಕೂಲವಾಗಿದೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆರ್. ಎಸ್. ನರಸಿಂಹಮೂರ್ತಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ನಿರ್ದೇಶಕರು ವಿರುಪಾಕ್ಷ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್. ಕೆ. ಶ್ರೀನಿವಾಸ್, ಶಿಕ್ಷಕರು ಕಾಳಬೋಯಿ, ಬಿಳಗೂಲಿ ಮಂಜೇಗೌಡರು, ಸಿದ್ದರಾಜು, ಸಮಿತಿ ಮೇಲ್ವಿಚಾರಕರು ಹೇಮಲತಾ ಮುಂತಾದವರು ಇದ್ದರು.