ಪ್ರಥಮ ತಾಲೂಕು ಅಕ್ಷರ ಜಾತ್ರೆಗೆ ಭರದ ಸಿದ್ಧತೆ

| Published : Sep 29 2024, 01:45 AM IST

ಪ್ರಥಮ ತಾಲೂಕು ಅಕ್ಷರ ಜಾತ್ರೆಗೆ ಭರದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಅ.೧ರಂದು ನಡೆಯಲಿರುವ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ನಾಡಿನ ಕನ್ನಡ ಸಾಹಿತ್ಯ ಚಿಂತಕರ, ಸಂತರ, ಕವಿಗಳನ್ನು ಒಳಗೊಂಡಂತೆ ಎಲ್ಲರನ್ನು ಅಕ್ಷರ ಜಾತ್ರೆಗೆ ಅಕ್ಕರೆಯಿಂದ ಸ್ವಾಗತಿಸುತ್ತೇವೆಂದು ಕಸಾಪ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಅ.೧ರಂದು ನಡೆಯಲಿರುವ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ನಾಡಿನ ಕನ್ನಡ ಸಾಹಿತ್ಯ ಚಿಂತಕರ, ಸಂತರ, ಕವಿಗಳನ್ನು ಒಳಗೊಂಡಂತೆ ಎಲ್ಲರನ್ನು ಅಕ್ಷರ ಜಾತ್ರೆಗೆ ಅಕ್ಕರೆಯಿಂದ ಸ್ವಾಗತಿಸುತ್ತೇವೆಂದು ಕಸಾಪ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಮ್ಮೇಳನದ ಮಹಾ ವೇದಿಕೆಗೆ ಶ್ರೀ ಖಾಸ್ಗತೇಶ್ವರ ಮಹಾ ಸ್ವಾಮಿಗಳ ಪ್ರಧಾನ ವೇದಿಕೆ ಎಂದು ಹೆಸರಿಡಲಾಗಿದ್ದು, ಬೆಳಿಗ್ಗೆ ೮ಕ್ಕೆ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ, ಪರಿಷತ್ತಿನ ಧ್ವಜಾರೋಹಣ, ಪುಸ್ತಕ ಮಳಿಗೆ ಉದ್ಘಾಟನೆ, ದಾಸೋಹ ಮನೆ ಉದ್ಘಾಟನೆ ನಡೆಯಲಿದೆ ಎಂದರು.

ಬೆಳಗ್ಗೆ ೮.೩೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಶ್ರೀ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ಮಾರ್ಗವಾಗಿ ಪ್ರಧಾನ ವೇದಿಕೆಗೆ ಬರಲಿದೆ.೧೦.೩೦ಕ್ಕೆ ಉದ್ಘಾಟನೆ, ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಲಿದ್ದಾರೆ. ಮುಸ್ಲಿಂ ಮುಖಂಡ ಸೈಯದ ಶಕೀಲಅಹ್ಮದ ಖಾಜಿ ಹಾಜರಿರುವರು. ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಉದ್ಘಾಟಿಸುವರು, ಶಾಸಕ ರಾಜುಗೌಡ ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ನಂತರ ಸಾಧಕರಿಗೆ ಗೌರವ ಪುರಸ್ಕಾರ ಜರುಗಲಿದೆ. ನಂತರ ಮೊದಲ ಗೋಷ್ಠಿ ಪ್ರಾರಂಭಗೊಳ್ಳಲಿದೆ. ಗೋಷ್ಠಿಯಲ್ಲಿ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಶ್ರೀ, ಹಿರೂರ ಅನ್ನದಾನೇಶ್ವರ ಮಠದ ಶ್ರೀ ಗುರುಜಯಸಿದ್ದೇಶ್ವರ ಶಿವಾಚಾರ್ಯ ಭಾಗವಹಿಸುವರು.

ಮಧ್ಯಾಹ್ನ ೨.೧೫ಕ್ಕೆ ಮಹಿಳಾ ಗೋಷ್ಠಿ, ನಂತರ ಕರ್ನಾಟಕ ಸುವರ್ಣ ಸಂಭ್ರಮ-೫೦ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪುರಸ್ಕಾರ ಜರುಗಲಿದೆ. ಮತ್ತು ಜಾನಪದ ಚಿಂತನ ಗೋಷ್ಠಿ ನಡೆಯಲಿವೆ. ಸಂಜೆ ೬.೧೫ಕ್ಕೆ ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಂದ ಬಹಿರಂಗ ಅಧಿವೇಶನ, ಸಾನಿಧ್ಯವನ್ನು ಕುಂಟೋಜಿಯ ಶ್ರೀ ಡಾ.ಚನ್ನವೀರ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ನೇರವೇರಿಸುವರು.

ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಫೀರ ವಾಲಿಕಾರಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಸೇರಿ ಸಾಹಿತಿಗಳು ಭಾಗಿಯಾಗಲಿದ್ದಾರೆ. ಸಂಜೆ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಸಾನಿಧ್ಯ. ಧಾರವಾಡದ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಉದ್ಘಾಟಿಸುವರು. ಸಾಹಿತಿಗಳು, ಕನ್ನಡಾಭಿಮಾನಿಗಳು, ಕೇಂದ್ರಾಡಳಿತದ ಪದಾಧಿಕಾರಿಗಳು, ಹಿರಿಯರು ಸಾಕ್ಷಿಯಾಗಲಿದ್ದಾರೆ ಎಂದು ಕೊಪ್ಪದ ಮಾಹಿತಿ ನೀಡಿದರು.

ಈ ವೇಳೆ ಕಸಾಪ ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ, ಸಾತು ಗೊಂಗಡಿ, ವಿಜಯಸಿಂಗ್ ಹಜೇರಿ, ಸಚೀನ ಪಾಟೀಲ, ಆರ್.ಬಿ.ದಾನಿ, ಡಾ.ನಜೀರ ಕೊಳ್ಯಾಳ, ಹುಸೇನ ಮಕಾಂದಾರ, ರಾಜು ಹಂಚಾಟೆ, ಆರ್.ಐ.ಜಾಲವಾದಿ, ಎಸ್.ವ್ಹಿ.ಜಾಮಗೊಂಡಿ, ಆನಂದ ಮದರಕಲ್ಲ, ಚಿತ್ತರಗಿ, ಎಂ.ಆರ್.ಪಾಟೀಲ, ಪ್ರಭು ಗುಡಗುಂಟಿ, ಸುರೇಶ ನಾರಿ ಇದ್ದರು.