ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ದಾನಗಳಲ್ಲಿಯೇ ಶ್ರೇಷ್ಠ ದಾನ ರಕ್ತದಾನ ಪ್ರತಿಯೊಬ್ಬರೂ ಸಹ ಸಕಾಲದಲ್ಲಿ ರಕ್ತದಾನವನ್ನು ಮಾಡಿ ಅಮೂಲ್ಯ ಜೀವನಗಳನ್ನು ಉಳಿಸಬೇಕೆಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತದ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಬೆಂಗಳೂರು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಕಲಬುರಗಿ, ಜಿಲ್ಲಾ ಸಾರ್ವಜನಿಕರ ಆಸ್ಪತ್ರೆ ಜಿಲ್ಲೆ ರಕ್ತ ನಿಧಿ ಕೇಂದ್ರಗಳು, ರೆಡ್ ರಿಬ್ಬನ ಕ್ಲಬಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್. ಘಟಕ, ಕಲಬುರಗಿ ಇವರ ಆಶ್ರಯದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಮೊದಲಿಗೆ ರೆಡ್ ರಿಬ್ಬನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಮ್ಸ್ ಪ್ರಾಂಗಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ನವಲೆ ಮಾತನಾಡುತ್ತಾ ಅವರು ಮನುಷ್ಯನು ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾತಿಯಾಗುತ್ತಿದೆ ರಕ್ತದಾನ ಮಾಡುದರಿಂದ ಹಲವಾರ ಜೀವನವನ್ನೇ ರಕ್ಷಣೆ ಮಾಡುವಂತ ಕಾರ್ಯವನ್ನು ದಾನಿಗಳು ಮಾಡುತ್ತಾರೆಂದರು.ರಕ್ತದಾನ ಮಾಡುವುದರಿಂದ ಆರೋಗ್ಯ ಸಹ ಸುಧಾರಣೆಯಾಗುತ್ತದೆ ಎಂಬ ವರದಿ ಸಹ ಇದೇ ಎಲ್ಲರ ರಕ್ತದಾನ ಬಗ್ಗೆ ಭಯ ಬಿಟ್ಟು ಹೆಚ್ಚು ಹೆಚ್ಚು ರಕ್ತದಾನ ಮಾಡಲು ಮುಂದೆ ಬರಬೇಕು ಇದರಿಂದ ಅವರಿಗೆ ರಕ್ತ ಧಾನದ ಶ್ರೇಷ್ಠತೆಯ ಮಹತ್ವ ಕೂಡ ಗೊತ್ತಾಗುತ್ತದೆ. ರಕ್ತದಾನ ಮಾಡುವದರಿಂದ ಇನ್ನೋಬರ ಜೀವವು ಉಳಿಯುತ್ತದೆ ಆರೋಗ್ಯ ಸಹ ಚನ್ನಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರತಿಕಾಂತ ಸ್ವಾಮಿ, ವಿಭಾಗೀಯ ಜಂಟಿ ಕಾರ್ಯಲಯ ಕಲಬುರಗಿ ಉಪ ನಿರ್ದೇಶಕರು,ಡಾ . ಶರಣ್ಣಬಸಪ್ಪ ಗಣಜಲಖೇಡ್, ಮಾತನಾಡಿದರು.ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಸುರೇಶ್ ಮೇಕಿನ್.ನಿರ್ದೇಶಕರು ಜಿಮ್ಸ್ ಕಲಬುರಗಿ ಡಾ. ಉಮೇಶ್ ಎಸ್,ಆರ್. ಜಿಲ್ಲಾ ಆಸ್ಪತ್ರೆ,ಕಲಬುರಗಿ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧಿಕ್ಷಕರು,ಡಾ. ಓಂ ಪ್ರಕಾಶ ಅಂಬುರೆ, ಜಿಮ್ಸ್ ಕಲಕಬುರಗಿ ವೈದ್ಯಕೀಯ ಅಧೀಕ್ಷಕರು ಡಾ. ಶಿವಕುಮಾರ ಸಿ.ಆರ್. ಜಿಮ್ಸ್ ವೈದ್ಯಕೀಯ ಕಾಲೇಜು ಕಲಬುರಗಿ ಪ್ರಾಂಶುಪಾಲರು ಡಾ. ಅಜಯಕುಮಾರ ಜಿ. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ. ಚಂದ್ರಕಾಂತ ನರಬೋಳಿ , ವಿಶೇಷ ಎಂಸಿಎಚ್ ಅಧಿಕಾರಿಗಳು ಡಾ. ಸಂದೀಪ್ ಹರಸಣಾಗಿ, ಎಆರ್‌ಟಿ ನೂಡಲ್ ಅಧಿಕಾರಿಗಳು ಡಾ. ರೀಮಾ ಹರವಾಳ, ಹಾಗೂ ಜಾಥಾವು ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದವರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಜಿಮ್ಸ್ ರಕ್ತ ನಿಧಿ , ಅಲ್ ಬ್ರದರ್ ಮೆಡಿಕಲ್ ಕಾಲೇಜು, ಚಿತ್ತಪುರ ತಾಲೂಕು ಆಸ್ಪತ್ರೆ ಇಂದ ಒಟ್ಟು ಉಚಿತ ರಕ್ತದಾನ ಸಂಗ್ರಹ 260 . ಇಎಸ್‍ಐ ರಕ್ತ ನಿಧಿಯಿಂದ 25 . ಕೆಬಿಎನ್ ಮೆಡಿಕಲ್ ಕಾಲೇಜ್ ನಿಂದ 25 ಉಚಿತ ರಕ್ತ ಸಂಗ್ರಹ ದಾನಿಗಳಿಂದ ಸಂಗ್ರಹವಾಗಿದೆ.