ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು

| Published : Oct 06 2024, 01:18 AM IST

ಸಾರಾಂಶ

ಅಬುಬಕ್ಕರ್ ಸಿದ್ದೀಕ್ ಅವರು ಎರಡು, ಮೂರು ದಿನಗಳ ವಿಪರೀತ ಜ್ವರದಿಂದ ಬಳಲುತ್ತಿದ್ದು, ಶನಿವಾರ ಇಂದು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.

ಬಂಟ್ವಾಳ: ಇಲ್ಲಿನ ಮಂಗಿಲಪದವು ಬನಾರಿ ನಿವಾಸಿ ಅಬುಬಕ್ಕರ್ ಸಿದ್ದೀಕ್ (30) ಶನಿವಾರ ನಿಧನರಾದರು.

ಇವರು ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್‌ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ನಿವಾಸಿಯಾಗಿದ್ದು ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ ಬನಾರಿಯಲ್ಲಿ ವಾಸವಿದ್ದರು. ವಿಟ್ಲ ಭಾಗದಲ್ಲಿ ಯಾಂತ್ರೀಕೃತ ವಾಹನದಲ್ಲಿ ಕಟ್ಟಿಗೆ ಹೊಡೆಯುವ ವೃತ್ತಿ ನಿರ್ವಹಿಸುತಿದ್ದರು. ಅಬುಬಕ್ಕರ್ ಸಿದ್ದೀಕ್ ಅವರು ಎರಡು, ಮೂರು ದಿನಗಳ ವಿಪರೀತ ಜ್ವರದಿಂದ ಬಳಲುತ್ತಿದ್ದು, ಶನಿವಾರ ಇಂದು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

-----

ಮಾಜಿ ಸೈನಿಕನ ನಗದು ಬ್ಯಾಗ್ ಕ‍ಳವು ಮಾಡಿದ್ದ ಆರೋಪಿ ಬಂಧನಬಂಟ್ವಾಳ: ಮಾಜಿ ಸೈನಿಕರೊಬ್ಬರ ನಗದು ಹಣದ ಬ್ಯಾಗನ್ನು ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ಪೊಲೀಸರ ತಂಡ ಬಂಧಿಸಿದೆ.ಬೆಳ್ತಂಗಡಿ ನಿವಾಸಿ ಮಹಮ್ಮದ್ ಫಾರೂಕ್ (32) ಎಂಬಾತನನ್ನು ಬಂಟ್ವಾಳ ಸರಪಾಡಿಯ ಮಣಿನಾಲ್ಕೂರು ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನಿವೃತ್ತ ಸೈನಿಕರೊಬ್ಬರು ಬಿ.ಸಿ.ರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲವೇ ಹೊತ್ತಲ್ಲಿ ಲಕ್ಷಾಂತರ ರು. ನಗದು ಇದ್ದ ಬ್ಯಾಗ್ ಕಳವಾದ ಘಟನೆ ಸೆಪ್ಟೆಂಬರ್ 4ರಂದು ನಡೆದಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 80,000 ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ.ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿವೈಎಸ್.ಪಿ ಎಸ್. ವಿಜಯಪ್ರಸಾದ್ ರವರ ನೇತೃತ್ವದ, ಗ್ರಾಮಾಂತರ ಎಸ್.ಐ. ಹರೀಶ್ ಎಂ.ಆರ್, ಪಿ.ಎಸ್. ಐ. ಅವರಿದ್ದ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.---ಮಾಜಿ ಸೈನಿಕನ ನಗದು ಬ್ಯಾಗ್ ಕ‍ಳವು ಮಾಡಿದ್ದ ಆರೋಪಿ ಬಂಧನಬಂಟ್ವಾಳ: ಮಾಜಿ ಸೈನಿಕರೊಬ್ಬರ ನಗದು ಹಣದ ಬ್ಯಾಗನ್ನು ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ಪೊಲೀಸರ ತಂಡ ಬಂಧಿಸಿದೆ.ಬೆಳ್ತಂಗಡಿ ನಿವಾಸಿ ಮಹಮ್ಮದ್ ಫಾರೂಕ್ (32) ಎಂಬಾತನನ್ನು ಬಂಟ್ವಾಳ ಸರಪಾಡಿಯ ಮಣಿನಾಲ್ಕೂರು ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನಿವೃತ್ತ ಸೈನಿಕರೊಬ್ಬರು ಬಿ.ಸಿ.ರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲವೇ ಹೊತ್ತಲ್ಲಿ ಲಕ್ಷಾಂತರ ರು. ನಗದು ಇದ್ದ ಬ್ಯಾಗ್ ಕಳವಾದ ಘಟನೆ ಸೆಪ್ಟೆಂಬರ್ 4ರಂದು ನಡೆದಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 80,000 ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ.ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿವೈಎಸ್.ಪಿ ಎಸ್. ವಿಜಯಪ್ರಸಾದ್ ರವರ ನೇತೃತ್ವದ, ಗ್ರಾಮಾಂತರ ಎಸ್.ಐ. ಹರೀಶ್ ಎಂ.ಆರ್, ಪಿ.ಎಸ್. ಐ. ಅವರಿದ್ದ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.

-----ವರದಕ್ಷಿಣೆಗಾಗಿ ದೈಹಿಕ,ಮಾನಸಿಕ ಹಿಂಸೆ: ದೂರುಉಪ್ಪಿನಂಗಡಿ: ವರದಕ್ಷಿಣೆಯಾಗಿ ಚಿನ್ನಾಭರಣ ತರಬೇಕೆಂದು ಪತಿ, ಅತ್ತೆ, ಮಾವ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ 25ರ ಹರೆಯದ ಯುವತಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬೆನಪು ಉರ್ಲಡ್ಕ ನಿವಾಸಿ ಅಲ್ತಾಫ್‌ ಎಂಬಾತನ ಪತ್ನಿ ಫಾತಿಮಾತ್ ಸೈನಾಜ್ ದೂರು ನೀಡಿದ್ದು, ವರದಕ್ಷಿಣೆ ಹಿಂಸೆಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದಾರೆ.ಈಕೆ ಕಳೆದ ೨೦೨೧ರ ಫೆಬ್ರವರಿ ೧೫ ರಂದು ಅಲ್ತಾಫ್‌ನೊಂದಿಗೆ ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಉಳಿದ ಸೊಸೆಯಂದಿರಂತೆ ೭೦ ಪವನ್ ಚಿನ್ನಾಭರಣ ತಾರದೆ ಕೇವಲ ೩೦ ಪವನ್ ಚಿನ್ನಾಭರಣ ತಂದ್ದೀಯಾ ಎಂದು ಗಂಡ ಅಲ್ತಾಫ್‌, ಮಾವ ಮಹಮ್ಮದ್, ಅತ್ತೆ ಜಮೀಳಾ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ನಿನ್ನನ್ನು ಕಾರಿನಲ್ಲಿ ಅಪಘಾತ ಮಾಡಿಸಿ ಕೊಲ್ಲುವುದಾಗಿ ಗಂಡ ಬೆದರಿಕೆಯೊಡ್ಡುತ್ತಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.ಅ.3ರಂದು ಸಂಜೆ ಚಿನ್ನಾಭರಣವನ್ನು ತರಬೇಕೆಂದು ತಾಕೀತು ಮಾಡಿ, ದೈಹಿಕವಾಗಿ ಹಲ್ಲೆಗೈದು ಮನೆಯಿಂದ ಹೊರಗೆ ಹಾಕಿದ್ದರು. ಹಲ್ಲೆಯಿಂದ ಗಾಯಗೊಂಡ ಆಕೆ ತನ್ನ ಅಣ್ಣನಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.