ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಶಿಲ್ಪಾನಾಗ್ ಅವರು ನಗರಸಭೆ ಸಭಾಂಗಣದಲ್ಲಿ ಶನಿವಾರ 2024-25ನೇ ಸಾಲಿನ 89.75 ಕೋಟಿ ಉಳಿತಾಯ ಬಜೆಟ್ ಅನ್ನು ಮಂಡಿಸಿದರು. ಪ್ರಾರಂಭಿಕ ಶಿಲ್ಕು 17,39,94,529 ಕೋಟಿ ರು ಜಮೆಗಳು 34.34ಕೋಟಿ ಒಳಗೊಂಡಂತೆ 51, 74,27,529 ಕೋಟಿ ರುಗಳ ಆದಾಯ, 50,84,52ಕೋಟಿ ರು ಗಳ ಖರ್ಚು ಒಳಗೊಂಡ 89,75,229 ರು. ಗಳ ಉಳಿತಾಯ ಬಜೆಟ್ ಮಂಡಿಸಿ ಗಮನ ಸೆಳೆದರು. ಆಸ್ತಿತೆರಿಗೆಗಳಿಂದ 2.75 ಕೋಟಿ ರು, ಕರವಸೂಲಿಯಿಂದ 1ಕೋಟಿ, ಅಭಿವೃದ್ಧಿ ಶುಲ್ಕ 35ಲಕ್ಷ, ಉದ್ದಿಮೆ ಪರವಾನಿಗೆಗಳಿಂದ 20ಲಕ್ಷ ಆರ್‌ಒ ಪ್ಲಾಂಟ್‍ಗಳಿಂದ 30 ಲಕ್ಷ, ಆಸ್ತಿ ತೆರಿಗೆ ಮೇಲಿನ ದಂಡಗಳಿಂದ 1 ಕೋಟಿ ಸೇರಿದಂತೆ ಇತರೆ ಮೂಲಗಳಿಂದ ಒಟ್ಟು 10,26,13,000 ರು ಆದಾಯ ನಿರೀಕ್ಷಿಸಲಾಗಿದೆ. ಎಸ್‍ಎಫ್‍ಸಿ ವೇತನ ಅನುದಾನ 6.81ಕೋಟಿ, ಮುಕ್ತ ಅನುದಾನ 1.85ಕೋಟಿ, ಎಸ್‍ಎಫ್‍ಸಿ ವಿದ್ಯುತ್ ಅನುದಾನ 5.62ಕೋಟಿ, ಎಸ್‍ಎಫ್‍ಸಿ ಕುಡಿಯುವ ನೀರಿನ ಅನುದಾನ 10 ಲಕ್ಷ, ಸ್ವಚ್ಚ ಭಾರತ್ ಮಿಷನ್ ನಿಂದ 90.20ಲಕ್ಷ, 15ನೇ ಹಣಕಾಸು ಅನುದಾನ 3.85ಕೋಟಿ, ನಲ್ಮ್ ಅನುದಾನ 20 ಲಕ್ಷ, ಎಸ್‍ಎಫ್‍ಸಿ ವಿಶೇಷ ಅನುದಾನ 4 ಕೋಟಿ, ಗೃಹ ಭಾಗ್ಯ ಯೋಜನೆ ಅನುದಾನ 15 ಲಕ್ಷ, ಎಲ್‍ಪಿಎಸ್ ಅನುದಾನ 40 ಲಕ್ಷ, 24/7 ಕುಡಿಯುವ ನೀರು ಯೋಜನೆ ನೌಕರರ ವೇತನ ಅನುದಾನ 20 ಲಕ್ಷ ಸೇರಿದಂತೆ ಒಟ್ಟು 24,80, 20,000 ಅನುದಾನವನ್ನು ನಿರೀಕ್ಷಿಸಲಾಗಿದೆ.
ರಸ್ತೆ ಮತ್ತು ಪಾದಚಾರಿ ಮಾರ್ಗಗಳಿಗೆ 2.10ಕೋಟಿ, ರಸ್ತೆ ಬದಿಯ ಚರಂಡಿಗಳಿಗೆ 1.60ಕೋಟಿ, ಘನತ್ಯಾಜ್ಯ ವಿಲೇವಾರಿ ಘಟಕ, ಯಂತ್ರೋಪಕರಣ, ವಾಹನ ಖರೀದಿ ಇತರೆ ಕಾಮಗಾರಿಗಳು 3.40 ಕೋಟಿ, ಕ್ರೀಡಾಂಗಣ ನಿರ್ಮಾಣಕ್ಕೆ 3.50ಕೋಟಿ, ನೀರು ಸರಬರಾಜು ಕಾಮಗಾರಿ ಹಾಗೂ ಯೆಂತ್ರೋಪಕರಣಗಳ ಖರೀದಿಗೆ 3.66ಕೋಟಿ, ನೌಕರರ ವೇತನಕ್ಕೆ 6.81ಕೋಟಿ, ಬೀದಿ ದೀಪ ಮತ್ತು ನೀರು ಸರಬರಾಜು ವಿದ್ಯುತ್ ಬಿಲ್‍ಗೆ 6.62ಕೋಟಿ, ಘನತ್ಯಾಜ್ಯಕ್ಕೆ ಸಂಬಂಧಿಸಿದಂತೆ ದುರಸ್ಥಿ ಮತ್ತು ನಿರ್ವಹಣೆಗೆ 5.01ಕೋಟಿ, ನೀರು ಸರಬರಾಜು ದುರಸ್ಥಿ ಮತ್ತು ನಿರ್ವಹಣೆಗೆ 2.48ಕೋಟಿ, ವಿದ್ಯುತ್ ಠೇವಣಿ, ಕಡಿತಗಳ ಪಾವತಿ ಹಾಗೂ ಠೇವಣಿಗಳ ಮರುಪಾವತಿಗೆ 3.04 ಕೋಟಿ ಸೇರಿದಂತೆ ಇತರೆ ವೆಚ್ಚಗಳಿಗೆ 50,84,52,000 ಕೋಟಿ ನಿಗದಿ ಮಾಡಲಾಗಿದೆ.ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಶಿಲ್ಪಾನಾಗ್ ಮಂಡಿಸಿದ ನಗರಸಭೆ 2024-25ನೇ ಬಜೆಟ್‍ಅನ್ನು ಹಿರಿಯ ಸದಸ್ಯ ಬಸ್ತೀಪುರ ಶಾಂತರಾಜು ಅಂಗೀಕರಿಸಿದರು. ಸದಸ್ಯರುಗಳಾದ ಧರಣೇಶ್, ಶಂಕನಪುರ ಪ್ರಕಾಶ್, ಪ್ರಶಾಂತ್, ಜಯಮೇರಿ,ಜಿ.ಪಿ.ಶಿವಕುಮಾರ್ ಇನ್ನಿತರರು ಅನುಮೋದಿಸಿದರು. ಎಲ್ಲ ಸದಸ್ಯರು ಮೇಜು ಕುಟ್ಟಿ ಬಜೆಟ್‍ಗೆ ಅಂಗೀಕಾರ ನೀಡಿದರು. ಶಾಸಕ ಕೃಷ್ಣಮೂರ್ತಿ ಪೌರಾಯುಕ್ತ ರಮೇಶ್ ಇನ್ನಿತರಿದ್ದರು.ನಗರಸಭೆ ಆದಾಯ ಮೂಲ ಹೆಚ್ಚು ಮಾಡುವ ಸಲುವಾಗಿ ಪಟ್ಟಣದಲ್ಲಿ ಮಾರ್ಚ್ ತಿಂಗಳಲ್ಲಿ ಆಸ್ತಿ ಸಮೀಕ್ಷೆ ಕಾರ್ಯ ಮಾಡುವಂತೆ ಪೌರಾಯುಕ್ತರಿಗೆ ಸೂಚಿಸಿದ್ದೇನೆ, ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಕಟ್ಡಗಳು ಶೆಡ್‍ಗಳಿಗೆ ತೆರಿಗೆ ನಿಗದಿ ಪಡಿಸುವ ಕಾರ್ಯ ಆಗಬೇಕಿದೆ. ಡಾ.ರಾಜ್‍ಕುಮಾರ, ಅಂಬೇಡ್ಕರ್ ರಸ್ತೆ ಅಗಲೀಕರಣದ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಗಮನ ಹರಿಸುತ್ತೇನೆ. ಉತ್ತಮ ಸಲಹೆ ನೀಡಿದ್ದೀರಿ, ಎಲ್ಲರು ಒಟ್ಟಾಗಿ ಸೇರಿ ಪಟ್ಟಣವನ್ನು ಅಭಿವೃದ್ಧಿ ಪಡಿಸೋಣ, ಕೊಳ್ಳೇಗಾಲ ಪಟ್ಟಣವನ್ನು ಸ್ವಚ್ಚ ಭಾರತ್ ಮಿಷನ್‍ನಿಂದ ನ್ಯಾಷನ್ ಅವಾರ್ಡ್ ಪಡೆಯುವ ನಿಟ್ಟಿನಲ್ಲಿ ಸ್ವಚ್ಚತಾ ಕಾರ್ಯಗಳು ಹಾಗೂ ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡೋಣ. ಮಲೆ ಮಹದೇಶ್ವರ ಬೆಟ್ಟದಿಂದ ಬರುವ ಯಾತ್ರಿಕರಿಗೆ ತಂಗುದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ.ಶಿಲ್ಪಾನಾಗ್, ಜಿಲ್ಲಾಧಿಕಾರಿ
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಹಾಗೂ ಡಾ, ರಾಜ್‍ಕುಮಾರ್ ರಸ್ತೆ ಅಗಲೀಕರಣ ಮಾಡುವ ಅಗತ್ಯವಿದೆ ಎಂಬುದು ಎಲ್ಲಾ ಸದಸ್ಯರ ಒಕ್ಕೊರಲ ಅಭಿಪ್ರಾಯವಾಗಿದೆ. ಹಾಗಾಗಿ ಅಗಲೀಕರಣಕ್ಕೆ ಅಗತ್ಯವಿರುವ ವಿಶೇಷ ಅನುದಾನ ತರಲು ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ, ಈನಿಟ್ಟಿನಲ್ಲಿ ಸರ್ಕಾರವೂ ಕೂಡ ಅನುದಾನ ನೀಡಲು ಬದ್ದವಾಗಿದೆ. ಸಿಎಂ. ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದಾಗಿ ಹೇಳಿದ್ದಾರೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ಇರುವ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳಿ, ಆಡಳಿತಾಧಿ ಉತ್ತಮ ಬಜೆಟ್ ಮಂಡಿಸಿದ್ದು ಎಲ್ಲರು ಒಪ್ಪಿರುವುದು ಸಮಾಧಾನ ತಂದಿದೆ. ಎ.ಆರ್. ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ