ಬಸವಣ್ಣನಲ್ಲಿ ಸಂಘರ್ಷಕ್ಕೆ ಪರಿಹಾರ ಹುಡುಕಿದ ಕವಯತ್ರಿ: ಕವಿಗಳಿಂದ ಗೋಷ್ಠಿ

| Published : Sep 24 2025, 01:00 AM IST

ಬಸವಣ್ಣನಲ್ಲಿ ಸಂಘರ್ಷಕ್ಕೆ ಪರಿಹಾರ ಹುಡುಕಿದ ಕವಯತ್ರಿ: ಕವಿಗಳಿಂದ ಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿರುವ ಐದು ದಿನಗಳ ಪಂಚಕವಿಗೋಷ್ಠಿಯ ಉದ್ಘಾಟನೆ ದಿನ ‘ಪ್ರಭಾತ’ ಶೀರ್ಷಿಕೆಯ ಕವಿಗೋಷ್ಠಿಯಲ್ಲಿ ಕವಿಗಳು ಸಾಮರಸ್ಯದ ಕಹಳೆ ಮೊಳಗಿಸಿದರು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಕೋಮು ಗಲಭೆ, ಸಂಘರ್ಷಕ್ಕೆ ಮದ್ದು ಹುಡುಕುವ ಕೆಲಸವನ್ನು ಇಂದಿನ ಕವಿಗಳು ಮಾಡಿದ್ದಾರೆ. ಮದ್ದೂರು ಸೇರಿದಂತೆ ವಿವಿಧೆ ನಡೆಯುತ್ತಿರುವ ಸಂಘರ್ಷಗಳಿಗೆ ಈಗ ಕೊನೆ ಹಾಡಲು ಬಸವಣ್ಣನೇ ಪರಿಹಾರ ಎಂಬ ನಿಲುವು ವ್ಯಕ್ತವಾಯಿತು.

ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿರುವ ಐದು ದಿನಗಳ ಪಂಚಕವಿಗೋಷ್ಠಿಯ ಉದ್ಘಾಟನೆ ದಿನ ‘ಪ್ರಭಾತ’ ಶೀರ್ಷಿಕೆಯ ಕವಿಗೋಷ್ಠಿಯಲ್ಲಿ ಕವಿಗಳು ಸಾಮರಸ್ಯದ ಕಹಳೆ ಮೊಳಗಿಸಿದರು.

ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ ಕವನ ವಾಚಿಸಿದ ಮಂಡ್ಯದ ಅಭಿಜ್ಞಾ ಪಿ.ಎಂ. ಗೌಡ ಅವರು, ಸಮಾನತೆಯ ಬೀಜ ಬಿತ್ತಿ ಸಾಮರಸ್ಯದ ಬೆಳೆ ಬೆಳೆಸಿದ ನಾಡಲೀಗ ಜಾತಿ- ಧರ್ಮಗಳ ನಡುವೆ, ದ್ವೇಷದ ಕಿಡಿ ಹಚ್ಚಿ ಸ್ವಾರ್ಥ ಪರತೆ ಮೇಲುಗೈ ಸಾಧಿಸುತ್ತಿರುವ ನಿಚ್ಚರದ್ದೆ ಕಾರು ಬಾರು. ಈಗ ಏನಿದ್ದರು ತಾರತಮ್ಯ ಬೆಳೆ ವಿಫುಲವಾಗಿ ಬೆಳೆದಿರುವುದನ್ನು ಶ್ಯಾಮನಗೊಳಿಸು ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ ಎನ್ನುತ್ತ, ಮಂಡ್ಯ, ಮದ್ದೂರು, ನೆಲಮಂಗಲ, ಕೆರೆಗೋಡು ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ನಿಲ್ಲಿಸಲು ಬಸವಣ್ಣ ಬರುವಂತೆ ಪ್ರಾರ್ಥಿಸಿದರು.

ವೃದ್ಧಾಶ್ರಮದ ಸಂತಾತಿ ಕೊನೆಯಾಗಲಿ ಎಂದು ಹಾಸನದ ಕುಮಾರ ಛಲವಾದಿ ಆಶಿಸಿದರು. ವೃದ್ಧಾಶ್ರಮ ಗೋಡೆಗಳಿಗೆ ಕಿವಿಗಳು ಇರಬೇಕಿತ್ತು ಶೀರ್ಷಿಕೆಯಡಿ ವಾಚಿಸಿದ ಕವನ ವೃದ್ಧ ತಂದೆ- ತಾಯಿಗಳನ್ನು ಸಲಹಲು ಆಗದವರ ಎದೆಗೆ ಪೆಟ್ಟುಕೊಡುವಂತಿತ್ತು.

ಕೊಳ್ಳೇಗಾಲದ ಲೇಖಕಿ ಪಿ. ಕಾತ್ಯಾಯಿನಿ ‘ಭದ್ರೆ ಜೀವ ಭದ್ರ’ ಶೀರ್ಷಿಕೆಯಡಿ ಕವನ ವಾಚಿಸಿ ಸ್ತ್ರೀ ಕೌಟುಂಬಿಕ ತಲ್ಲಣವನ್ನು ಪ್ರಸ್ತುತಪಡಿಸಿದರು. ಸ್ತ್ರೀ ಕಂಬಿನಿಗೆ ಕುಟುಂಬದಲ್ಲಿ ಬೆಲೆ ಇಲ್ಲ. ಹೆಣ್ಣು ಮುಗ್ದೆ ಎಂಬ ನೋವು ಅಲ್ಲಿತ್ತು.

ಮಂಡ್ಯದ ರೈತ ಸಿ.ಎಂ. ಕ್ರಾತಿ ಸಿಂಹ ‘ಜೀತ’ ಶೀರ್ಷಿಕೆಯ ಕವನ ವಾಚಿಸಿದರು. ರೈತನ ಕಷ್ಟ, ಪರಿಶ್ರಮಗಳು, ಜೀತ ವಿಮುಕ್ತಿಗೆ ಶಿಕ್ಷಣ ಅಸ್ತ್ರ ಎಂಬ ಕಿವಿಮಾತು ಹೇಳಿದರು.

ಎಂ.ಕೆ. ನಿಶಾಂತಾ ಎಂಬ ಯುವತಿ ‘ಜೆನ್ಸಿ’ ಎಂಬ ಶೀರ್ಷಿಕೆಯಡಿ ನಡೆಯೋ ಮುಂಚೆ ಸ್ಕ್ರಾಲ್ ಮಾಡೋ ಟ್ಯಾಲೆಂಟ್ ಕಲಿತ ಕುಡಿಗಳು/ಇವರೇ ನೋಡಿ ನಮ್ಮ ಜೆನ್ಸಿ ಮಕ್ಕಳು..! ಎಂಬ ಕವಿತೆ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಕವನಕ್ಕೆ ಇಡೀ ಸಭಾಂಗಣ ಕರಾತಳ, ಶಿಳ್ಳೆ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಡಿ. ಅಯ್ಯಪ್ಪ ಓ ಗಜವೀರ ಅಭಿಮನ್ಯು ಶೀರ್ಷಿಕೆಯ ಕವನ ವಾಚಿಸಿದರು. ಇದರಲ್ಲಿ ಅಭಿಮನ್ಯ ಪರಾಕ್ರಮ, ಜಂಬೂ ಸವಾರಿ ಯಶಸ್ವಿಗೊಳಿಸುವ ಶ್ರಮದ ಮೂಲಕ ಅಭಿಮನ್ಯವಿಗೆ ಕಾವ್ಯ ನಮನ ಸಲ್ಲಿಸಿದರು. ಗುರು ಗೌತಮ್ ಕೊಲ್ಲುವುದಾದರೆ ಶೀರ್ಷಿಕೆಯ ಕವನ ವಾಚಿಸಿದರು. ಜಾತಿ, ಧರ್ಮ ಬೇಧ, ಬಡತನ, ಅನಕ್ಷರತೆ, ಮೌಢ್ಯ, ಅಧರ್ಮಿಯರನ್ನು ಕೊಲ್ಲುವುದಾದರೆ ಕೊಂದು ಬಿಡಿ ಎನ್ನುತ್ತ... ವ್ಯವಸ್ಥೆಯ ಮೇಲಿರುವ ಅಸಮಾಧಾನವನ್ನು ಹೊರ ಹಾಕಿದರು.

ಇಂದಿನ ಯುವ ಪೀಳಿಗೆ ಮೊಬೈಲ್ ವ್ಯಸನದಿಂದ ದೂರವಾಗಿ ಜೀವನವನ್ನು ಜೀವಿಸುವ ಆಶಯಗಳು ಕಾವ್ಯದ ರೂಪದಲ್ಲಿ ಹರಿದು ಬಂತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ತಾಸೀನಾ ರಜ್ಹಾಕ್, ಧಾನ್ಯ ಜೆ.ಅರಸ್, ದೊರೆಸ್ವಾಮಿ ಮದ್ದೂರು, ದೋಚಿ ಗೌಡ, ಪಳನಿಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ಕನವ ವಾಚಿಸಿದರು.

30 ಮಂದಿ ಕವಿಗಳು:

ಮಂಡ್ಯ, ಕೊಡಗು, ಮೈಸೂರಿನ ವಿವಿಧ ತಾಲೂಕುಗಳ ಯುವಕ, ಯುವತಿಯರು, ಹಾಸನ, ಚಾಮರಾಜನಗರ ಭಾಗದ ಕವಿಗಳು, ಸರ್ಕಾರಿ ನೌಕರರು, ರೈತರು ಸೇರಿ 30 ಮಂದಿ ಕವಿಗಳು ಇಂದಿನ ತಲ್ಲಣ, ಆಶಯ, ನೋವು ಹೊರ ಹಾಕಿ ದಸರಾ ಸಂಭ್ರಮದಲ್ಲಿ ಮರೆಯಾಗುತ್ತಿರುವ ಮುಖ್ಯ ವಿಚಾರವನ್ನು ಮುನ್ನಲೆಗೆ ತಂದರು.