ಸಾರಾಂಶ
ಬೆಂಗಳೂರು : ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ಜಾಲಹಳ್ಳಿಯ ಎಚ್.ಎಂ.ಟಿ.ಮೈದಾನದಲ್ಲಿ ಆಯೋಜಿಸಿರುವ ‘ಪುಡ್ ಕಾರ್ನಿವಾಲ್’ಗೆ ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಜನಸಾಗರವೇ ಹರಿದುಬಂದಿತು.
ಇದು ಬರೀ ಆಹಾರ ಮೇಳವಷ್ಟೇ ಆಗಿರದೆ ವಿಕೆಂಡ್‌ನ ಶಾಪಿಂಗ್ ಪ್ರಿಯರಿಗೂ ಶಾಪಿಂಗ್ ಮಾಲ್ ಆಗಿದ್ದು ವಿಶೇಷವಾಗಿತ್ತು. ದೇಶದ ವಿವಿಧ ಸ್ಥಳದಲ್ಲಿ ನೇಯ್ದ ಬಟ್ಟೆಗಳು, ಮನೆಗೆ ಬೇಕಾದ ಗೃಹೋಪಯೋಗಿ ವಸ್ತಗಳು, ಮಹಿಳೆಯರ ಅಭರಣಗಳು, ಪುಸ್ತಕ ಪ್ರಿಯರಿಗೆ ಪುಸ್ತಕಗಳೂ ಕೂಡ ಲಭ್ಯವಿದ್ದು, ಖಾದ್ಯಗಳನ್ನ ಸವಿಯಲು ಬಂದ ಜನ ಶಾಪಿಂಗ್‌ನಲ್ಲೂ ಬ್ಯೂಸಿಯಾಗಿದ್ದು ಕಂಡು ಬಂತು.
ವಾರವಿಡೀ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ನಗರದ ಜನತೆ ಶನಿವಾರದಂದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದು ಆಹಾರ ಮೇಳಕ್ಕೆ ಆಗಮಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು. ತಮ್ಮ ಕುಟುಂಬ, ಸ್ನೇಹಿತರ ಜೊತೆಗೆ ಆಗಮಿಸಿ ವಿವಿಧ ಖಾದ್ಯಗಳನ್ನ ಸವಿದು, ಶಾಪಿಂಗ್ ಮಾಡಿ ಸಂಭ್ರಮಿಸಿದರು. ಬಾಯಲ್ಲಿ ನೀರೂರಿಸುವ ವಿಭಿನ್ನ ಬಗೆಯ ಖಾದ್ಯಗಳು, ನೈಸರ್ಗಿಕ ಜ್ಯೂಸ್, ದೋಸೆ, ಪಡ್ಡು, ಮಷ್ರೂಮ್ ಬಿರಿಯಾನಿ, ವ್ಯಾಫಲ್ಸ್ ಸೇರಿದಂತೆ ಶುಚಿ-ರುಚಿಯಾದ ತಿಂಡಿ ತಿನಿಸುಗಳಿಗೆ ಜನರು ಮನಸೋತರು. ಆಹಾರ ಮೇಳಕ್ಕೆ ಆಗಮಿಸಿ ‘ಫ್ರೀಡಂ ಆಯಿಲ್’ ಖರೀದಿಸಿದವರಿಗೆ ಶೇ.25 ರಷ್ಟು ರಿಯಾಯಿತಿಯೂ ದೊರೆಯಲಿದೆ. ಫ್ರೀಡಂ ಆಯಿಲ್ ಮತ್ತು ಎಕ್ಸ್‌ಪೋಸ್ ಇಂಡಿಯಾ ಈ ಮೇಳಕ್ಕೆ ಸಹಕಾರ ನೀಡಿದ್ದು ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಂದು ಈ ಬೃಹತ್ ಆಹಾರ ಮೇಳಕ್ಕೆ ತೆರೆ
ಮೂರು ದಿನಗಳ ಈ ಬೃಹತ್ ಆಹಾರ ಮೇಳಕ್ಕೆ ಸೆ.19 ರಂದು ಚಾಲನೆ ನೀಡಲಾಗಿತ್ತು. ನಿಮಗಿಷ್ಟವಾದ ಆಹಾರದ ರುಚಿ ನೋಡುವ ಜೊತೆಗೆ ಭರ್ಜರಿ ಶಾಪಿಂಗ್‌ಗೂ ಅವಕಾಶವಿದೆ. ಭಾನುವಾರ ಸಂಜೆ ಮೇಳಕ್ಕೆ ತೆರೆ ಬೀಳಲಿದೆ. ಕುಟುಂಬ ಸಮೇತ ಆಗಮಿಸಿ ಮನಕ್ಕೊಪ್ಪುವ ಖರೀದಿಗೆ ಈ ಮೇಳ ಪ್ರಶಸ್ತವಾಗಿದೆ.
)
)

;Resize=(128,128))
;Resize=(128,128))