ಹೂವಿನ ಹಿಪ್ಪರಗಿಯಲ್ಲಿ ಕುಂಬಾರ ಗುಂಡಯ್ಯ ಗುಡಿ ಪತ್ತೆ: ಡಾ.ಬುರುಡೇಕಟ್ಟೆ ಮಂಜಪ್ಪ

| Published : Sep 15 2024, 01:45 AM IST / Updated: Sep 15 2024, 01:46 AM IST

ಹೂವಿನ ಹಿಪ್ಪರಗಿಯಲ್ಲಿ ಕುಂಬಾರ ಗುಂಡಯ್ಯ ಗುಡಿ ಪತ್ತೆ: ಡಾ.ಬುರುಡೇಕಟ್ಟೆ ಮಂಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾದಿ ಶರಣರಿಗೆ ಮೊದಲು ಕಾಯಕವೇ ಕೈಲಾಸ ತತ್ವ ಹಾಕಿ ಕೊಟ್ಟ ಶರಣ ಕುಂಬಾರ ಗುಂಡಯ್ಯ ಅವರ ಅತಿ ಪ್ರಾಚೀನ ಮಣ್ಣಿನ ಗುಡಿಯನ್ನು ವಿಜಯಪುರ ಜಿಲ್ಲೆ ಬಾಗೇವಾಡಿ ತಾಲೂಕು ಹೂವಿನ ಹಿಪ್ಪರಗಿ ಗ್ರಾಮದಲ್ಲಿ ದಾವಣಗೆರೆ ಇತಿಹಾಸ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ಸಂಶೋಧನೆ ಮೂಲಕ ಪತ್ತೆ ಮಾಡಿದ್ದಾರೆ.

- ಸಂಶೋಧನೆ ಮೂಲಕ ಪತ್ತೆ । ಅತಿ ಪ್ರಾಚೀನ ಮಣ್ಣಿನ ಗುಡಿಯಿಂದ ಮತ್ತಷ್ಟು ಆಳ ಅಧ್ಯಯನಕ್ಕೆ ಸಹಕಾರಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವಾದಿ ಶರಣರಿಗೆ ಮೊದಲು ಕಾಯಕವೇ ಕೈಲಾಸ ತತ್ವ ಹಾಕಿ ಕೊಟ್ಟ ಶರಣ ಕುಂಬಾರ ಗುಂಡಯ್ಯ ಅವರ ಅತಿ ಪ್ರಾಚೀನ ಮಣ್ಣಿನ ಗುಡಿಯನ್ನು ವಿಜಯಪುರ ಜಿಲ್ಲೆ ಬಾಗೇವಾಡಿ ತಾಲೂಕು ಹೂವಿನ ಹಿಪ್ಪರಗಿ ಗ್ರಾಮದಲ್ಲಿ ದಾವಣಗೆರೆ ಇತಿಹಾಸ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ಸಂಶೋಧನೆ ಮೂಲಕ ಪತ್ತೆ ಮಾಡಿದ್ದಾರೆ.

ದೇವರ ಹಿಪ್ಪರಗಿಯಲ್ಲಿ ಕುಂಬಾರ ಗುಂಡಯ್ಯನವರ ಅತಿ ಪ್ರಾಚೀನ ಮಣ್ಣಿನ ಗುಡಿ ಇರುವ ಬಗ್ಗೆ ಸ್ಥಳೀಯರಾದ ಉಮೇಶ ದುಂಡಪ್ಪ ಕುಂಬಾರ ಹಾಗೂ ಮಡಿವಾಳಪ್ಪ ನಿಂಗಪ್ಪ ಕುಂಬಾರರ ನೆರವಿನಿಂದ ಕುಂಬಾರ ಗುಂಡಯ್ಯನವರ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲು ಇದು ಸಹಕಾರಿಯಾಗಲಿದೆ ಎಂದು ಡಾ.ಬುರುಡೇಕಟ್ಟೆ ಮಂಜಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಗ್ರಾಮದ ಕುಂಬಾರ ಓಣಿಯಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚೀನ ಶ್ರೀ ಕಲ್ಮೇಶ್ವರ ಗುಡಿಯಿಂದ ಸುಮಾರು 200 ಮೀಟರ್ ದೂರದಲ್ಲಿ ಬಸವಪೂರ್ವ ಯುಗದ ಕುಂಬಾರ ಗುಂಡಯ್ಯ ಅವರ ಅತಿ ಪ್ರಾಚೀನ ಮಣ್ಣಿನ ಗುಡಿ ಪತ್ತೆ ಮಾಡಿದೆ. ಅಲ್ಲಿ ಇಂದಿಗೂ ನಿತ್ಯ ಕುಂಬಾರ ಗುಂಡಯ್ಯನವರಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಸವಾದಿ ಶರಣರಿಗೆ ಮೊದಲು ಕಾಯಕವೇ ಕೈಲಾಸ ತತ್ವ ಹಾಕಿಕೊಟ್ಟ ಶರಣ ಕುಂಬಾರ ಗುಂಡಯ್ಯನವರ ಅತೀ ಪ್ರಾಚೀನ ಮಣ್ಣಿನ ಗುಡಿ ಇದಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಅಗ್ರಹಾರ ಆಗಿದ್ದ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಕಾಯಕ ತತ್ವದ ಮೊದಲ ಪ್ರತಿಪಾದಕ ಬಸವ ಪೂರ್ವ ಯುಗದ ಕುಂಬಾರ ಗುಂಡಯ್ಯನವರ ನೆಲೆ ಇರುವುದು ಅತೀ ವಿಶೇಷ ಇತಿಹಾಸವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಂಬಾರ ಗುಂಡಯ್ಯನವರ ಕುರಿತಂತೆ ಇನ್ನೂ ಹೆಚ್ಚಿನಸಂಶೋಧನೆ ಕೈಗೊಳ್ಳಲಾಗಿದೆ. ಈ ಪ್ರಾಚೀನ ಗುಡಿ ಸಂರಕ್ಷಿಸಿ, ಯಥಾವತ್ ಉಳಿಸಿಕೊಂಡು ಬಂದಿರುವ ಹೂವಿನ ಹಿಪ್ಪರಗಿ ಗ್ರಾಮಸ್ಥರು ಹಾಗೂ ಆ ಪ್ರದೇಶದ ಸಂಶೋಧಕರು, ಸಾಹಿತಿಗಳಿಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುವೆ. ಕುಂಬಾರ ಗುಂಡಯ್ಯನವರ ಬಗ್ಗೆ ಮತ್ತಷ್ಟು ಆಳ ಅಧ್ಯಯನಕ್ಕೆ ಅತಿ ಪ್ರಾಚೀನ ಮಣ್ಣಿನ ಗುಡಿ ಸಹಕಾರಿಯಾಗಲಿದೆ ಎಂದು ಡಾ. ಬುರುಡೇಕಟ್ಟೆ ಮಂಜಪ್ಪ ತಿಳಿಸಿದ್ದಾರೆ.

- - - -14ಕೆಡಿವಿಜಿ6:

ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿಯಲ್ಲಿ ಕುಂಬಾರ ಗುಂಡಯ್ಯನವರ ಅತಿ ಪ್ರಾಚೀನ ಮಣ್ಣಿನ ಗುಡಿ ಪತ್ತೆಯಾಗಿರುವುದು.