ಸಾರಾಂಶ
ಚಾಮರಾಜನಗರದಲ್ಲಿ ವಿಶ್ವಕರ್ಮ ಜನಾಂಗದ ಮುಖಂಡ ಅನಂತ್‌ಕುಮಾರ್ ಮಾತನಾಡಿದರು. ಮುಖಂಡರಾದ ವಿ.ಶ್ರೀನಿವಾಸಪ್ರಸಾದ್, ಲಿಂಗಣ್ಣಚಾರ್ ಶ್ರೀಕಾಂತ್, ಡಿ.ಎಲ್.ಕುಮಾರ್, ಮಂಜುನಾಥ್ ವಿಶ್ವಕರ್ಮ, ಸುರೇಶ್ ಇದ್ದಾರೆ.
ಚಾಮರಾಜನಗರ: ಸೆ.೨೫ರಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿಶ್ವಕರ್ಮ ಜನಾಂಗದ ಮುಖಂಡ ಅನಂತ್‌ಕುಮಾರ್ ಮನವಿ ಮಾಡಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೨೫ರಂದು ಬೆಳಗ್ಗೆ 9 ಗಂಟೆಗೆ ಪ್ರವಾಸಿ ಮಂದಿರದ ಬಳಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಜಿಲ್ಲಾಡಳಿತ ಭವನದವರೆಗೆ ನಡೆಯಲಿದ್ದು, ನಂತರ ಬೆಳಗ್ಗೆ ೧೧ ಕ್ಕೆ ಜಿಲ್ಲಾಡಳಿತ ಭವನದ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜನಾಂಗ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗ ಮನವಿ ಸಲ್ಲಿಸಲಾಗುವುದು ಎಂದರು.ಈಗಾಗಲೇ ಜಿಲ್ಲಾಡಳಿತ ಜನಾಂಗದ ರುದ್ರಭೂಮಿಗೆ ೧ಎಕರೆ ಜಾಗ ನೀಡಿದೆ. ಇದೇ ರೀತಿ ಸಮುದಾಯ ಭವನಕ್ಕೂ ಸೂಕ್ತ ಜಾಗ ನೀಡಬೇಕು ಎಂದು ಆಗ್ರಹಿಸಿದರು. ಹಿಂದುಳಿದ ಜನಾಂಗದ ಜಯಂತಿಗಳನ್ನು ಕಾಟಾಚಾರಕ್ಕೆ ಮಾಡಬಾರದು. ಕಡ್ಡಾಯವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಿ.ಶ್ರೀನಿವಾಸಪ್ರಸಾದ್, ಲಿಂಗಣ್ಣಚಾರ್ ಶ್ರೀಕಾಂತ್, ಡಿ.ಎಲ್. ಕುಮಾರ್, ಮಂಜುನಾಥ್ ವಿಶ್ವಕರ್ಮ, ಸುರೇಶ್ ಇದ್ದರು.