ಅಡವಿ ಆಂಜನೇಯ ಬಡಾವಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ

| Published : Nov 14 2025, 03:30 AM IST

ಅಡವಿ ಆಂಜನೇಯ ಬಡಾವಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದ ಹೊರವಲಯದ ಅಡವಿ ಅಂಜನೇಯ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಬುಧವಾರ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಗರಸಭೆಯ ಎಇಇ ಎಸ್.ಬಿ. ಮರೀಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ನಗರದ ಹೊರವಲಯದ ಅಡವಿ ಅಂಜನೇಯ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಬುಧವಾರ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಗರಸಭೆಯ ಎಇಇ ಎಸ್.ಬಿ. ಮರೀಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಈ ಬಡಾವಣೆಗೆ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಜತೆಗೆ ನಾಗರೀಕರಿಗೆ ಅಗತ್ಯ ಸೌಲಭ್ಯಗಳು ಇಲ್ಲದಂತಾಗಿರುವುದು ವಿಷಾದನೀಯ. ಸ್ವಚ್ಛತೆ, ಬೀದಿದೀಪಗಳು ಇಲ್ಲವಾಗಿದೆ. ಬಡಾವಣೆಯ ಬೀದಿಗಳಲ್ಲಿ ಡಾಂಬರೀಕರಣ ಇಲ್ಲದೆ ಎರಡು ದಶಕಗಳಿಂದ ಕಚ್ಚಾ ರಸ್ತೆಗಳಾಗಿ ಉಳಿದಿವೆ. ಜತೆಗೆ ಖುಲ್ಲಾ ಜಾಗಗಳಲ್ಲಿ ಗಿಡಗಳು ಬೆಳೆದು ಸೊಳ್ಳೆಗಳ ತಾಣವಾಗಿದ್ದು, ಶೀಘ್ರವೇ ಸರಿಪಡಿಸಬೇಕು ಎಂದವರು ದೂರಿದರು.

ಸಹಸ್ರಾರು ನಾಗರಿಕರಿರುವ ಈ ಬಡಾವಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು. ಆಸ್ಪತ್ರೆಗಳಿಲ್ಲದೇ ಜನರು ಬಹಳಷ್ಟು ನೋವು ಅನುಭವಿಸುವಂತಾಗಿದೆ. ಶೀಘ್ರವೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜಪ್ಪ ಅಂಗಡಿ, ಬಸವರಾಜ ಮೇಗಳಗೇರಿ, ನೀಲಮ್ಮ ಮೇಗಳಗೇರಿ, ಯಾಸಿಮನ್ ಹಲಗೇರಿ, ನೀಲಮ್ಮ ಶಿಡೇನೂರು, ರೇಷ್ಮಾ ಬಿದರಿ, ಶಾಭಾಜಿ ಹರಪನಹಳ್ಳಿ, ಬಶೀರಾಬಿ ಶಿಡೇನೂರು, ದಾನು ಹಲಗೇರಿ ಮತ್ತಿತರರಿದ್ದರು.