ಸಾರಾಂಶ
ವಿಜಯಪುರ: ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಸೇವೆ ಸಲ್ಲಿಸುತ್ತಿರುವ ೧೦,೪೫೦ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವೆ ಕಾಯಂಗೊಳಿಸಬೇಕು ಎಂದು ಬುಧವಾರ ಇಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಎನ್.ಸಿ. ಇನಾಮದಾರ ಮಾತನಾಡಿ, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕು. ರಾಜ್ಯ ವ್ಯಾಪ್ತಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦,೪೫೦ ಗ್ರಾಮ ಸಹಾಯಕರು ಸುಮಾರು ೪೪ ವರ್ಷಗಳಿಂದ ಸೇವೆಯಲ್ಲಿದ್ದಾರೆ. ಹುದ್ದೆಯನ್ನು ಕಾಲಕಾಲಕ್ಕೆ ಮುಂದುವರಿಸುತ್ತ ಸೇವೆ ಪಡೆದಿದೆ. ಗ್ರಾಮ ಸಹಾಯಕರಿಗೆ ಬಿಪಿಎಲ್ ಸೌಲಭ್ಯ ಇಲ್ಲ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದವರು ಮರಣ ಹೊಂದಿದಾಗ ಸರ್ಕಾರದ ಶವ ಸಂಸ್ಕಾರದ ಸಲುವಾಗಿ ₹೫ ಸಾವಿರಗಳನ್ನು ನೀಡುತ್ತದೆ. ಅಂಥವರನ್ನು ಗುರುತಿಸುವುದೇ ಗ್ರಾಮ ಸಹಾಯಕರು. ಆದರೆ ಗ್ರಾಮ ಸಹಾಯಕರು ಮರಣ ಹೊಂದಿದಾಗ ಸರ್ಕಾರ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಅಲ್ಲಾಭಕ್ಷ ಕೊರಬು, ಜಿಲ್ಲಾ ಕಾರ್ಯದರ್ಶಿ ಹಣಮಂತ ಉಪ್ಪಾರ, ವಿ.ಡಿ. ಕೊರಬು , ಎಸ್.ಎಸ್. ವಾಲಿಕಾರ, ಎಚ್.ಎಸ್. ಕಡಕೋಳ, ಜಿ.ಎಸ್. ಕುಮಚಗಿ, ಜಿ.ಬಿ. ವಾಲೀಕಾರ, ಎಂ.ಆರ್. ನಯ್ಕೋಡಿ, ಪೂಜಾರಿ, ಜಿ.ಎಸ್. ಕಟ್ಟಿಮನಿ, ಬಿ.ಬಿ. ಕ್ಕೇರಿ, ಎಂ.ಡಿ. ಜಮಾದಾರ ಎಸ್.ಎಂ. ವಾಲೀಕಾರ ಹಾಗೂ ಜಿ.ವಾಯ್. ವಾಲೀಕಾರ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))