ಸಮಾಜ ಸೇವೆಗೆ ಸೈನಿಕರ ಬದುಕು ಮುಡಪಾಗಿರಬೇಕು

| Published : Jul 07 2024, 01:20 AM IST

ಸಾರಾಂಶ

ತಾಯ್ನಾಡಿನ ರಕ್ಷಣೆಗಾಗಿ ಸೈನ್ಯ ಸೇರಿ ಸೇವಾ ನಿವೃತ್ತಿಯವರೆಗೆ ಸುದೀರ್ಘವಾಗಿ ವೈರಿಗಳ ಜೊತೆ ಸದಾ ಹೋರಾಟ ನಡೆಸಿ, ಸುರಕ್ಷಿತವಾಗಿ ಮನೆಗೆ ಬಂದ ನಂತರ ತಮ್ಮ ಕುಟುಂಬದ ಜೊತೆ ಸುಖಜೀವನ ನಡೆಸುವುದರೊಂದಿಗೆ ಸಮಾಜ ಸೇವೆಗೆ ಸೈನಿಕರ ಬದುಕು ಮುಡಪಾಗಿರಬೇಕು ಎಂದು ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಯ್ನಾಡಿನ ರಕ್ಷಣೆಗಾಗಿ ಸೈನ್ಯ ಸೇರಿ ಸೇವಾ ನಿವೃತ್ತಿಯವರೆಗೆ ಸುದೀರ್ಘವಾಗಿ ವೈರಿಗಳ ಜೊತೆ ಸದಾ ಹೋರಾಟ ನಡೆಸಿ, ಸುರಕ್ಷಿತವಾಗಿ ಮನೆಗೆ ಬಂದ ನಂತರ ತಮ್ಮ ಕುಟುಂಬದ ಜೊತೆ ಸುಖಜೀವನ ನಡೆಸುವುದರೊಂದಿಗೆ ಸಮಾಜ ಸೇವೆಗೆ ಸೈನಿಕರ ಬದುಕು ಮುಡಪಾಗಿರಬೇಕು ಎಂದು ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನುಡಿದರು.ಸಮೀಪದ ಹೊಸೂರ ಗ್ರಾಮದ ಸೈನಿಕ ಫಕೀರಪ್ಪ ಕುರಿ ಅವರು 18 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ನಿವೃತ್ತಿಯಾದ ಪ್ರಯುಕ್ತ ಗ್ರಾಮದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗ್ರಾಮದ ಮುಖಂಡರಾದ ಗುರುಪಾದ ಕಳ್ಳಿ, ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ದೇಶದಲ್ಲಿ ರಕ್ಷಣೆಗಾಗಿ ಸೈನಿಕ, ಅನ್ನಕ್ಕಾಗಿ ರೈತ, ಆರೋಗ್ಯಕ್ಕಾಗಿ ವೈದ್ಯ ಮತ್ತು ಶಿಕ್ಷಣಕ್ಕಾಗಿ ಶಿಕ್ಷಕರು ಸಲ್ಲಿಸುವ ಇವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.ಸೋಮಪ್ಪ ಕುರಿ, ಯಲ್ಲವ್ವ ಕುರಿ, ಶತಾಯುಷಿ ಸೊಮವ್ವ ಕುರಿ, ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಬಿ.ಬೋಗೂರ, ಮಾಜಿ ಗ್ರಾಪಂ ಅಧ್ಯಕ್ಷ ಫಕ್ಕಿರಪ್ಪ ಮೂಗಬಸವ, ಮಾಜಿ ಯೋಧ ಮಲ್ಲಿಕಾರ್ಜುನ ಇಂಗಳಗಿ, ಗುರು ಮೆಟಗುಡ್, ಉಮೇಶ ಬೊಳೆತ್ತಿನ, ಬಸವರಾಜ ಬಾಳೆಕುಂದರಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಇದ್ದರು.ಗ್ರಾಮದ ಪ್ರಮುಖ ಬಿದಿಯಲ್ಲಿ ತೆರೆದ ಜೀಪಿನಲ್ಲಿ ನಿವೃತ್ತ ಸೈನಿಕ ದಂಪತಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಶಾಲಾ ಮಕ್ಕಳು, ನಿವೃತ್ತ ಸೈನಿಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಾಥ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ತಳವಾರ, ಸದಸ್ಯರಾದ ಮಲ್ಲವ್ವ ಬಾರಿಗಿಡದ, ಈರಣ್ಣ ಸಂಪಗಾಂವ, ಮಲ್ಲಿಕಾರ್ಜುನ ಕರಡಿಗುದ್ದಿ, ಮಲ್ಲಿಕಾರ್ಜುನ ವಕ್ಕುಂದ, ಅಪ್ಪು ಇಳಿಗೇರ, ಬಸಪ್ಪ ಪೆಂಟೆದ, ಮುಶೆಪ್ಪ ಜಡಿ, ಸಂಜು ಪಾಟೀಲ, ಗಂಗವ್ವ ಅರಬಳ್ಳಿ, ಮಡಿವಾಳಪ್ಪ ಕಮತಗಿ, ಜೈರಾಬಿ ಶೇಖ, ಮುಶೆಪ್ಪ ಜಡಿ, ಮೊಹನ ವಕ್ಕುಂದ, ದಾದಪೀರ ಶೇಖ, ಉದಯ ಬೂದಿಹಾಳ, ಅಜ್ಜಪ್ಪ ಸಂಗೊಳ್ಳಿ, ಶಿವಾನಂದ ಬೋಳೆತ್ತಿನ, ಮಂಜುನಾಥ ಸಂಗೋಳ್ಳಿ, ಮಂಜುನಾಥ ಹಪ್ಪಳ್ಳಿ, ಬಸವರಾಜ ಹುಂಬಿ, ನಾಗಪ್ಪ ಕುರಿ, ಸೋಮಪ್ಪ ಮಲ್ಲಣ್ಣವರ, ಪುಂಡಲಿಕ ಕುದರಿ, ಅಶೋಕ ಇಂಗಳಗಿ, ಮಂಜುನಾಥ ಕಳ್ಳಿ ಸೇರಿದಂತೆ ನೂರಾರು ಜನ ಇದ್ದರು.