ಸಾರಾಂಶ
ರೈತರು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೋಂಡು ಹೆಚ್ಚಿನ ಆದಾಯ ಪಡೆಯಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ರೈತರು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೋಂಡು ಹೆಚ್ಚಿನ ಆದಾಯ ಪಡೆಯಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗಾಗಿ ಏರ್ಪಡಿಸಿದ್ದ ೫ ದಿನಗಳ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನೆಗಳ ಬಗ್ಗೆ ವಿವರಿಸಿದರು. ನೈಸರ್ಗಿಕ ಕೃಷಿಯಿಂದ ಅಧಿಕ ಲಾಭ ಮತ್ತು ಖರ್ಚು ಕಡಿಮೆ ಆಗುವುದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್. ಅಂಗಡಿ, ಗೃಹ ವಿಜ್ಞಾನ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ.ಬೆಳ್ಳಿ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕರ ಡಾ.ಎಂ.ಎಸ್. ನಾಗೂರ, ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಕುಲಪತಿಗಳಾದ ಡಾ.ಪಿ.ಎಲ್. ಪಾಟೀಲ ಅವರು ಆದಾಯ ದ್ವಿಗುಣಗೊಳಿಸಿದ ಪ್ರಗತಿಪರ ರೈತರಾದ ಧರೆಪ್ಪ ಕಿತ್ತೂರ, ವಿಜಯಲಕ್ಷ್ಮೀ ಕುರ್ತಕೋಟಿ, ಶಿವಪ್ಪ ಹಾದಿಮನಿ, ತಿಪ್ಪಣ್ಣ ಗೌಡರ, ಮಂಜು ಯರಡ್ಡಿ ಹಾಗೂ ಪ್ರವೀಣ ಮುಧೋಳ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಆರ್.ಎ. ನಂದಗಾವಿ, ವಿಜ್ಞಾನಿಗಳಾದ ಡಾ.ಸುಧಾ ಎಸ್, ಡಾ.ವೆಂಕಣ್ಣ ಬಳಗಾನೂರ, ಡಾ.ರಮಿತಾ ಬಿ.ಇ, ಡಾ.ರಾಗಿಣಿ ಪಾಟೀಲ, ಡಾ.ಭವ್ಯ ಎಂ.ಆರ್ ಭಾಗವಹಿಸಿದ್ದರು. ಡಾ.ಸಿದ್ದಪ್ಪ ಅಂಗಡಿ ನಿರೂಪಿಸಿದರು.