ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ರಥದ ಚಕ್ರಕ್ಕೆ ಗೆದ್ದಲು

| Published : Feb 21 2024, 02:06 AM IST

ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ರಥದ ಚಕ್ರಕ್ಕೆ ಗೆದ್ದಲು
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ಐತಿಹಾಸಿಕ ಹಿನ್ನೆಲೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಥದ ಚಕ್ರ ಗೆದ್ದಲು ಹಿಡಿದ್ದಿದ್ದು, ಮಾರ್ಚ್ ೨೪ ರಂದು ಜರಗಲಿರುವ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವ ಜರಗುತ್ತದೆಯೇ ಎಂದು ಭಕ್ತರು ಸಂಶಯ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ನಲ್ಲಿ ನಡೆಯುವ ಬ್ರಹ್ಮ ರಥೋತ್ಸವಕ್ಕೆ ವಿಘ್ನಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಥದ ಚಕ್ರ ಗೆದ್ದಲು ಹಿಡಿದ್ದಿದ್ದು, ಮಾರ್ಚ್ ೨೪ ರಂದು ಜರಗಲಿರುವ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವ ಜರಗುತ್ತದೆಯೇ ಎಂದು ಭಕ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಸಮಸ್ಯೆ ಕುರಿತು ಅಗತ್ಯ ಕ್ರಮ ಕೈಗೊಳ್ಳದೇ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ನೂರಾರು ವರ್ಷಗಳ ರಥವು ಬಳಕೆಗೆ ಯೋಗ್ಯವಾಗಿಲ್ಲವೆಂದು ತಜ್ಞರು ತಿಳಿಸಿದ ನಂತರ ಶಾಸಕ ಎಚ್.ಡಿ.ರೇವಣ್ಣ ತೋರಿದ ವಿಶೇಷ ಕಾಳಜಿಯಿಂದಾಗಿ ಕೋಟಿ ರು.ಗೂ ಹೆಚ್ಚು ಖರ್ಚು ಮಾಡಿ ನುರಿತ ಶಿಲ್ಪಿಗಳ ಕತ್ತನೆಯೊಂದಿಗೆ ಆಕರ್ಷಕವಾಗಿ ರಥ ನಿರ್ಮಿಸಲಾಗಿತ್ತು. ಜತೆಗೆ ಹನ್ನೆರಡು ವರ್ಷಗಳಿಂದ ಆ ರಥದಲ್ಲಿ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರಗುತ್ತಿತ್ತು. ಆದರೆ ರಥೋತ್ಸವ ನಡೆದ ನಂತರ ಅನೇಕ ತಿಂಗಳು ಕಳೆದರೂ ಬಿಸಿಲು ಮಳೆಯ ರಕ್ಷಣೆಗಾಗಿ ಶೆಲ್ಟರ್ ನಿರ್ಮಿಸದೇ ಹಾಗೇ ಬಿಡಲಾಗುತ್ತಿತ್ತು. ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ಈಗ ತಡವಾಗಿ ಶೆಲ್ಟರ್ ನಿರ್ಮಿಸುತ್ತಿರುವ ಕಾರಣ ಮತ್ತು ಕಳಪೆ ಗುಣಮಟ್ಟದ ಮರದಿಂದಾಗಿ ಶ್ರೀಸ್ವಾಮಿಯ ರಥದ ಚಕ್ರವನ್ನು ಗೆದ್ದಲು ತಿಂದಿದೆ. ಶಾಸಕ ಎಚ್.ಡಿ.ರೇವಣ್ಣ ಅವರಿಂದ ನಿರ್ಮಾಣವಾದ ಶ್ರೀ ಸ್ವಾಮಿಯ ರಥ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಳಪೆ ಮರದಂದ ಚಕ್ರದಿಂದ ೨೦೨೪ರಲ್ಲಿ ಬ್ರಹ್ಮ ರಥೋತ್ಸವ ನಡೆಯುವ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಹೊಳೆನರಸೀಪುರ ಪಟ್ಟಣದ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಥದ ಚಕ್ರವನ್ನು ಗೆದ್ದಲು ತಿಂದಿರುವುದು.