ಸಾರಾಂಶ
ಹಲಗೂರು ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಹಲವು ದಿನಗಳಿಂದ ರೈತರು, ಜನರಿಗೆ ಆತಂಕ ಉಂಟು ಮಾಡಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ ಬೋನಿಗೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಹಲವು ದಿನಗಳಿಂದ ರೈತರು, ಜನರಿಗೆ ಆತಂಕ ಉಂಟು ಮಾಡಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ ಬೋನಿಗೆ ಬಿದ್ದಿದೆ.ಗ್ರಾಮದ ವೆಂಕಟೇಶ್ ಅವರ ಜಮೀನಿನಲ್ಲಿ ಚಿರತೆ ಹಿಡಿಯಲು ಬೋನ್ ಇಡಲಾಗಿತ್ತು. ಬುಧವಾರ ಬೆಳಗಿನ ಜಾವ ಚಿರತೆ ಸೆರೆ ಸಿಕ್ಕಿದೆ. ಹಲಗೂರು ಸೇರಿದಂತೆ ಬಾಳೆಹೊನ್ನಿಗ, ಜೂಗನಹಳ್ಳಿ, ಬೆನಮನಹಳ್ಳಿ, ಲಿಂಗಪಟ್ಟಣ ಗ್ರಾಮಗಳಲ್ಲಿ ರೈತರ ಸಾಕು ಪ್ರಾಣಿಗಳ ಮೇಲೆ ರಾತ್ರಿ ವೇಳೆ ಚಿರತೆ ದಾಳಿ ಮಾಡುತ್ತಿತ್ತು.ಇದರಿಂದ ಆಡು, ಕುರಿ, ಹಸು ಮತ್ತು ಸಾಕು ನಾಯಿಗಳನ್ನು ಕಳೆದು ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಂಬಂಧ ರೈತರು ಚಿರತೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಜೂಗನಹಳ್ಳಿ ವೆಂಕಟೇಶ್ವರ ಅವರ ಜಮೀನಿನಲ್ಲಿ ಚಿರತೆ ಹಿಡಿಯಲು ಬೋನಿನೊಳಗೆ ಸಾಕು ಪ್ರಾಣಿಯನ್ನು ಕಟ್ಟಿ ಹಾಕಿದ್ದರು.
ಬುಧವಾರ ಬೆಳಗಿನ ಜಾವ ಬೇಟೆಯಾಡಲು ಬಂದ ಮೂರು ವರ್ಷದ ಗಂಡು ಚಿರತೆ ಒಂದು ಬೋನಿಗೆ ಬಿದ್ದು ಸೆರೆಯಾಗಿದೆ.ವೈದ್ಯಕೀಯ ತಪಾಸಣೆ ನಂತರ ಮೇಲಾಧಿಕಾರಿಗಳ ಆದೇಶದಂತೆ ನಾಗರಹೊಳೆ ಅಥವಾ ಬಂಡಿಪುರಕ್ಕೆ ರವಾನೆ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ಇಲಾಖೆ ಸಿಬ್ಬಂದಿ ಎಚ್.ಎಸ್.ಶಿವರಾಜು, ಉಪ ವಲಯ ಅರಣ್ಯಾಧಿಕಾರಿ ಎಂ.ಜೆ.ಉಮೇಶ, ಗಸ್ತು ಅರಣ್ಯ ಪಾಲಕ ಹಾಗೂ ಸಿಬ್ಬಂದಿ ಇತರರು ಇದ್ದರು.