ಸಾರಾಂಶ
ಬೈಲಹೊಂಗಲದ ಶತಾಯಷಿ ಮತದಾರರಾದ ಡಾ.ಅಂಬೇಡ್ಕರ್ ನಗರ ದುರ್ಗವ್ವ ಲಂಕೆನ್ನವರ (102), ಕುರುಬರ ಗಲ್ಲಿಯ ಯಲ್ಲವ್ವ ನಿಂಗಪ್ಪ ಕುದರಿ (105) ಅವರನ್ನು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಬೈಲಹೊಂಗಲ: ಪಟ್ಟಣದ ಶತಾಯಷಿ ಮತದಾರರರಾದ ಡಾ.ಅಂಬೇಡ್ಕರ್ ನಗರ ದುರ್ಗವ್ವ ಲಂಕೆನ್ನವರ (102), ಕುರುಬರ ಗಲ್ಲಿಯ ಯಲ್ಲವ್ವ ನಿಂಗಪ್ಪ ಕುದರಿ (105) ಅವರನ್ನು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸ್ವೀಪ್ ಸಮಿತಿ ಅಧ್ಯಕ್ಷ ಗಂಗಾಧರ ಕಂದಕೂರ ಮಾತನಾಡಿ, ಮೇ.7ರಂದು ಲೋಕಸಭೆ ಚುನಾವಣೆ ಜರುಗಲಿದ್ದು, ಶತಾಯಿಷಿಗಳಿಗೆ, ಹಿರಿಯ ನಾಗರಿಕರಿಗೆ , ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಹಕ್ಕನ್ನು ಚುನಾವನೆ ಆಯೋಗ ನೀಡಿದ್ದು, ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ ನೀಡಿದರು. ಇದೇ ವೇಳೆ ಶತಾಯಿಷಿ ಮತದಾರರನ್ನು ತಾಲೂಕು ಸ್ವೀಪ್ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಎಸ್.ಬಿ. ಸಂಗನಗೌಡರ ಸಹಾಯಕ ನಿರ್ದೇಶಕ ರಘು ಬಿ.ಎನ್. ಎಸ್. ವಿ. ಹಿರೇಮಠ, ಮಹಾದೇವಪ್ಪ ಕುಟ್ರಿ, ಬಿ.ಐ. ಗುಡಿಮನಿ, ಆರ್. ಎಸ್. ಹಿಟ್ಟಣಗಿ, ಡಿ.ಎಂ. ಖಲೀಪ್, ಅಣ್ಣಾಸಾಹೇಬ ಹೆಗಡೆ, ರವಿ ಲಕ್ಕನ್ನಗೌಡರ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))