ಎಲ್ಲ ಹೋಬಳಿಯಲ್ಲೂ ಸುಸಜ್ಜಿತ ಆಸ್ಪತ್ರೆಗೆ ಆದ್ಯತೆ: ಡಾ. ಎನ್.ಟಿ. ಶ್ರೀನಿವಾಸ್

| Published : Jan 13 2024, 01:31 AM IST

ಎಲ್ಲ ಹೋಬಳಿಯಲ್ಲೂ ಸುಸಜ್ಜಿತ ಆಸ್ಪತ್ರೆಗೆ ಆದ್ಯತೆ: ಡಾ. ಎನ್.ಟಿ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಾನಹೊಸಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು.

ಕೂಡ್ಲಿಗಿ: ಕ್ಷೇತ್ರದ ಸುಧಾರಣೆಗಾಗಿ ಕಾನಹೊಸಹಳ್ಳಿ ಸೇರಿ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು, ತಜ್ಞ ವೈದ್ಯರು, ಸಿಬ್ಬಂದಿಯನ್ನು ಕಲ್ಪಿಸುವುದು ಗುರಿಯಾಗಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಶುಕ್ರವಾರ ತಾಲೂಕಿನ ಕಾನಹೊಸಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕಾನಹೊಸಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಕ್ಷೇತ್ರದಲ್ಲಿ ಶಾಶ್ವತ ಮತ್ತು ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.

ಗ್ರಾಪಂ ಅಧ್ಯಕ್ಷ ಎ.ಸಿ. ಚೇತನ್, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಕುಮಾರಗೌಡ ಮಾತನಾಡಿ, ಕಾನಹೊಸಹಳ್ಳಿ ಪಟ್ಟಣ ಸೇರಿ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಹೆಚ್ಚಿನ ವೈದ್ಯರನ್ನು ನೇಮಿಸಬೇಕು ಎಂದು ಮನವಿ ಸಲ್ಲಿಸಿದರು.

ವಿಜಯನಗರ ಡಿಎಚ್‌ಒ ಡಾ. ಶಂಕರನಾಯ್ಕ, ಟಿಎಚ್‌ಒ ಡಾ. ಎಸ್.ಪಿ. ಪ್ರದೀಪ್ ಕುಮಾರ್, ಪಿಎಚ್‌ಸಿ ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾತನಾಡಿದರು. ಗ್ರಾಪಂ ಸದಸ್ಯರಾದ ಲಕ್ಷ್ಮಿ, ಟಿ. ಸಿದ್ದಪ್ಪ, ಪೀತಾಂಬರಿ, ಮಕ್ಬುಲ್, ಶಿವಕುಮಾರ, ಲೋಕೋಪಯೋಗಿ ಇಲಾಖೆ ಎಇಇ ಡಿ. ವೆಂಕಟರಮಣ, ಜೆಇ ನಾಗೇಂದ್ರಪ್ಪ, ಗ್ರಾಪಂ ಪಿಡಿಒ ಬಸಮ್ಮ ಬಿ., ಮುಖಂಡರಾದ ಎ.ಸಿ. ಚನ್ನಬಸಪ್ಪ, ದುಗ್ಗಪ್ಪ, ಎಂ.ಓ. ಮಂಜುನಾಥ, ಗಫರ್, ಬಳೆಗಾರ ಜಗದೀಶ್, ಎಚ್.ಬಿ. ಸತೀಶ್, ಸೂರ್ಯಪ್ರಕಾಶ್, ಎಳನೀರು ಗಂಗಣ್ಣ, ಜಿ. ಓಬಣ್ಣ, ಆರೋಗ್ಯ ಕೇಂದ್ರದ ಸಿಬ್ಬಂದಿ ರಾಘವರೆಡ್ಡಿ, ಸೋಮಶೇಖರ್, ಸುಪ್ರಿಯಾ ಸೇರಿ ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಸೇರಿ ಇತರರಿದ್ದರು.