ಕಾರ್‌ ಹಾರ್ನ್‌ನಿಂದ ರೊಚ್ಚಿಗೆದ್ದು ಬೆನ್ನಟ್ಟಿದ ಕಾಡಾನೆ

| Published : Sep 06 2024, 01:02 AM IST

ಸಾರಾಂಶ

ಕಾರಿನಲ್ಲಿದ್ದ ವಾಹನ ಸವಾರರು ದಾರಿ ಮಧ್ಯೆ ನಿಂತಿದ್ದ ಕಾಡನೆಯನ್ನು ಓಡಿಸಲು ಸತತವಾಗಿ ಹಾರ್ನ್ ಹೊಡೆದಿದ್ದಾರೆ. ಸುಮ್ಮನೆ ಇದ್ದ ಕಾಡಾನೆ ಹಾರ್ನ್ ಶಬ್ದಕ್ಕೆ ರೊಚ್ಚಿಗೆದ್ದು ವಾಹನವನ್ನು ಬೆನ್ನಟ್ಟಿ ನಂತರ ರಸ್ತೆಯ ಬದಿಯಲ್ಲಿ ನಿಂತಿದೆ. ಇದನ್ನು ಗಮನಿಸಿದ ವಾಹನ ಸವಾರರು ತುಸು ಧೈರ್ಯದಿಂದ ತಮ್ಮ ವಾಹನವನ್ನು ಮುಂದೆ ಚಲಾಯಿಸಿದ್ದಾರೆ. ಆಗ ರೊಚ್ಚಿಗೆದ್ದ ಸಲಗ ಮತ್ತೆ ಬೆನ್ನಟ್ಟಿದೆ. ಈ ರೋಚಕ ಘಟನೆಯನ್ನು ವಾಹನದೊಳಗಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಈಗ ಅದು ವೈರಲ್ ಆಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಹೋಬಳಿಯ ಸುತ್ತಮುತ್ತ ದಿನನಿತ್ಯ ಕಾಡಾನೆಗಳ ಓಡಾಟ ಸಾಮಾನ್ಯವಾಗಿದ್ದು ಗುರುವಾರ ಬೆಳಗ್ಗೆ ಅರೇಹಳ್ಳಿಯಿಂದ ಮೂಡಿಗೆರೆ ತಾಲೂಕಿನತ್ತ ಪ್ರಯಾಣ ಬೆಳೆಸಿದ ಸ್ಥಳೀಯರಿಗೆ ಕಾನಹಳ್ಳಿ ಬಳಿ ಮುಖ್ಯ ರಸ್ತೆಯಲ್ಲಿ ದಿಢೀರನೆ ಒಂಟಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.

ಕಾರಿನಲ್ಲಿದ್ದ ವಾಹನ ಸವಾರರು ದಾರಿ ಮಧ್ಯೆ ನಿಂತಿದ್ದ ಕಾಡನೆಯನ್ನು ಓಡಿಸಲು ಸತತವಾಗಿ ಹಾರ್ನ್ ಹೊಡೆದಿದ್ದಾರೆ. ಸುಮ್ಮನೆ ಇದ್ದ ಕಾಡಾನೆ ಹಾರ್ನ್ ಶಬ್ದಕ್ಕೆ ರೊಚ್ಚಿಗೆದ್ದು ವಾಹನವನ್ನು ಬೆನ್ನಟ್ಟಿ ನಂತರ ರಸ್ತೆಯ ಬದಿಯಲ್ಲಿ ನಿಂತಿದೆ. ಇದನ್ನು ಗಮನಿಸಿದ ವಾಹನ ಸವಾರರು ತುಸು ಧೈರ್ಯದಿಂದ ತಮ್ಮ ವಾಹನವನ್ನು ಮುಂದೆ ಚಲಾಯಿಸಿದ್ದಾರೆ. ಆಗ ರೊಚ್ಚಿಗೆದ್ದ ಸಲಗ ಮತ್ತೆ ಬೆನ್ನಟ್ಟಿದೆ. ಈ ರೋಚಕ ಘಟನೆಯನ್ನು ವಾಹನದೊಳಗಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಈಗ ಅದು ವೈರಲ್ ಆಗಿದೆ.